ಸಾರ್ವಜನಿಕ ಈಜು ಕೊಳ ನಿರ್ಮಿಸಲು ಇರುವೆ ಟ್ರಸ್ಟ್ ಮನವಿ

ವಿಜಯ ಸಂಘರ್ಷ
ಭದ್ರಾವತಿ: ನಗರದಲ್ಲಿ ಸಾರ್ವಜನಿಕ ಈಜು ಕೊಳವೊಂದನ್ನು ನಿರ್ಮಿಸಿಕೊಡುವಂತೆ ನಗರಸಭೆ ಹಾಗೂ ತಹಶೀಲ್ದಾರ್ ಕಛೇರಿ ಯಲ್ಲಿ  ಇರುವೆ ಟ್ರಸ್ಟ್ ಮನವಿ ಮಾಡಿದೆ.
ಈಜುಕೊಳ ನಿರ್ಮಿಸುವ ಮೂಲಕ ಮಕ್ಕಳಿಗೆ ಮತ್ತು ಈಜು ಪ್ರಿಯರ ಬೇಡಿಕೆ ಈಡೇರಿಸಬೇಕೆಂದು ಇರುವೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಅಂತರ ರಾಷ್ಟ್ರೀಯ ಈಜು ಕ್ರೀಡಾಪಟು ಮತ್ತು ತರಬೇತುದಾರರು ಮನವಿ ಸಲ್ಲಿಸಿದ್ದಾರೆ.

ಕ್ರೀಡಾಪಟುಗಳಿಗೆ ಓಟ, ಓಟದ ನಡಿಗೆ, ಕಬ್ಬಡ್ಡಿ, ವಾಲಿಬಾಲ್, ಕ್ರಿಕೆಟ್, ಖೊಖೋ ಮುಂತಾದ ಕ್ರೀಡೆಗಳಿಗೆ ಕೊರತೆಯಿಲ್ಲದಂತೆ ಹತ್ತಾರು ಕ್ರೀಡಾಂಗಣಗಳಿವೆ. ಆದರೆ ದೇಶದಲ್ಲಿ ಈಜು ಕ್ರೀಡೆಗೆ ಮಹತ್ವವಿದ್ದರೂ ತಾಲೋಕಿನಲ್ಲಿ ಈಜು ಕೊಳವಿಲ್ಲದೆ ಈಜು ಉತ್ಸಾಹಿಗಳಿಗೆ ನಿರಾಶೆ ಹುಟ್ಟಿಸಿದೆ. ಅನೇಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಈಜು ಕ್ರೀಡಾ ಪ್ರೇಮಿಗಳು ಬೇರೆ ಬೇರೆ ನಗರಗಳಿಗೆ ತೆರಳಿ ಈಜು ಕಲಿಯುತ್ತಿದ್ದಾರೆ. ಇದರಿಂದ ಪೋಷಕರಿಗೆ ತುಂಬಾ ಹೊರೆಯಾಗುತಿದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಚಕ್ಕರ್ ಹಾಕಿ ರಜಾ ದಿನಗಳಲ್ಲಿ ಹೊಳೆ ನದಿ ಕೆರೆ ಚಾನಲ್ ಮತ್ತಿತರೆಡೆ ಈಜು ಕಲಿಯಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ನಿದರ್ಶನ ಗಳು ಕಂಡು ಬರುತ್ತಿವೆ.
ಕಾರ್ಮಿಕ ರೈತರ ಹಾಗೂ ಬಡ ಮಕ್ಕಳಿಗೆ ಈಜು ಕಲಿಯುವುದು ತುಂಬಾ ಆಸೆ ಇದ್ದರೂ ಕೊಳವಿಲ್ಲದೆ ಪರಿತಪಿಸಿದ್ದಾರೆ. ಅದೆಷ್ಟೋ ಮಕ್ಕಳು ಈಜು ಕೊಳವನ್ನೂ ಕಾಣದೆ ಅದೊಂದು ಶ್ರೀಮಂತರ ಕ್ರೀಡೆ ಎಂದೂ ಭಾವಿಸಿದ್ದಾರೆ.

ಅಭಿವೃದ್ದಿ ಹೆಸರಲ್ಲಿ ಅನೇಕ ಯೋಜನೆ ಗಳನ್ನು ಕೈಗೆತ್ತಿಕೊಳ್ಳುವ ಸಂಸದರು, ಶಾಸಕರು, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ನಗರಸಭಾ ಆಡಳಿತಗಳು ಶಾಲಾ ಮಕ್ಕಳ ಆರೋಗ್ಯ ದೃಷ್ಟಿಗಾಗಿ ಹಾಗೂ ಮಕ್ಕಳಲ್ಲಿ ಧೈರ್ಯ ತುಂಬುವ ಹಾಗೂ ಕ್ರೀಡೆಗಳಲ್ಲೂ ಸಮಾನತೆ ಕಾಣು ವಂತಾಗುತ್ತದೆ ಎಂದು ಇರುವೆ ಟ್ರಸ್ಟ್ ಅಧ್ಯಕ್ಷ ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕಿರಣ್‌ ಕುಮಾರ್, ಸುಂದರ್‌ಬಾಬು, ಕೀರ್ತಿ, ಬಿಆರ್‌ಪಿ ಹೇಮಂತ್‌ಕುಮಾರ್, ಆರ್.ಮೋಹನ್, ಈಜು ತರಬೇತಿದಾರರು ಪ್ರಕಾಶ್, ವೆಂಕಟೇಶ್, ಕೂಡ್ಲಿಗೆರೆ ತಿಪ್ಪೇಸ್ವಾಮಿ, ಅಂತರ ರಾಷ್ಟ್ರೀಯ ಈಜು ಪಟು ಮೋತಿನಾಯ್ಕ್ ಇದ್ದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು