ನೊಂದವರ ಕುಂದು ಕೊರತೆಗಳನ್ನು ಆಲಿಸಿ:ಬಿ.ವೈ.ವಿಜಯೇಂದ್ರ

ವಿಜಯ ಸಂಘರ್ಷ
ಶಿಕಾರಿಪುರ: ನೂತನ ಶಾಸಕ ಬಿ.ವೈ. ವಿಜಯೇಂದ್ರ  ಕ್ಷೇತ್ರದಲ್ಲಿ ಸಾರ್ವಜನಿಕ ರಿಗೆ ಅನಾನುಕೂಲ ಉಂಟಾಗಬಾರ ದೆಂದು, ಭ್ರಷ್ಟಾಚಾರ ವ್ಯವಸ್ಥೆ ಸರಿಪಡಿ ಸಲು ಖುದ್ದಾಗಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಆರಂಭಿಸಿದ್ದಾರೆ. ವಿವಿಧ ಇಲಾಖೆಗಳಿಗೆ ದಿಢೀರ್ ಭೇಟಿಗಳನ್ನು ನೀಡುವ ಮೂಲಕ ಕೆಲವು ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ್ದಾರೆ.

ಪುರಸಭೆಯ ಲೋಪ ದೋಷಗಳನ್ನು ಸರಿಪಡಿಸಲು ಸಾರ್ವಜನಿಕರ ಕೆಲಸಗಳು ಸುಗಮವಾಗುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿ ಇದೇ ತಿಂಗಳ 30ರಂದು ಸಭೆ ಸೇರಿಸಲು ಆದೇಶ ನೀಡಿದ್ದಾರೆ. ಹಾಗೂ ಸಾರ್ವಜನಿಕರ ದೂರುಆಲಿಸಲು ದೂರು ಪೆಟ್ಟಿಗೆ ಇಡುವಂತೆ ಸೂಚಿಸಿದ್ದಾರೆ.

ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಪರಿಶೀಲಿಸಿದ್ದಾರೆ. ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ಯೊಂದಿಗೆ ಉಚಿತ ಔಷಧೋಪ ಚಾರಗಳು ಸೇರಿದಂತೆ ರೋಗಿಗಳ ಬಡವರ ಕಾಳಜಿ ವಹಿಸುವಂತೆ ಆಸ್ಪತ್ರೆಯ ವೈದ್ಯಾಧಿ ಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸೂಚಿಸಿ ದ್ದಾರೆ, ಮತ್ತು ಸ್ಥಳದಲ್ಲಿದ್ದ ಸಾರ್ವಜನಿಕ ರೋಗಿಗಳ ಹವಾಲು ಸ್ವೀಕರಿಸಿ ಆಸ್ಪತ್ರೆಯ ಗುಣಮಟ್ಟ ಹೆಚ್ಚಿಸುವ ಬಗ್ಗೆ ಸಾರ್ವಜನಿ ಕರಿಗೆ ಭರವಸೆ ನೀಡಿದರು.

ತಾಲೂಕಿನ ಭಗನಕಟ್ಟೆ ಗ್ರಾಮದಲ್ಲಿ ಗ್ರಾಮದ ಸಾರ್ವಜನಿಕರ ಕುಂದು ಕೊರತೆ ನಿಭಾಯಿಸುವ ಅಹವಾಲು ಸ್ವೀಕರಿಸುವ ಸಭೆಯನ್ನು ಏರ್ಪಡಿಸಿ ಸಭೆಯಲ್ಲಿ ಭಾಗವಹಿಸಿ ಪಕ್ಷಾತೀತವಾಗಿ ಜಾತ್ಯತೀತ ವಾಗಿ ಗ್ರಾಮಸ್ಥರ ಮತ್ತು ನೊಂದವರ ಕುಂದು ಕೊರತೆಗಳನ್ನು ಆಲಿಸಿ ಸ್ಥಳದಲ್ಲಿದ್ದ ತಾಲೂಕು ಪಂಚಾಯಿತಿ ಇ ಓ ಪರಮೇಶ್ ಉಪ ತಹಶಿಲ್ದಾರ್ ಹರ್ಷವರ್ಧನ್ ಮತ್ತಿತರೆ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರನ್ನು ಸರ್ಕಾರಿ ಕಚೇರಿಗೆ ಅಲೆದಾಡಿಸಬೇಡಿ ಹಾಗೂ ಅಗತ್ಯ ದಾಖಲೆ ಪಡೆಯಲು ಸಾರ್ವಜನಿ ಕರು ಸರ್ಕಾರಿ ಕಚೇರಿಗೆ ಬಂದಾಗ ಅಧಿ ಕಾರಿಗಳು ಸೌಜನ್ಯದಿಂದ ವರ್ತಿಸಬೇಕು ಎಂಬ ಎಚ್ಚರಿಕೆ ನೀಡಿದರು.

ತಾಲೂಕಿನ  ಸಾರ್ವಜನಿಕರ ಕುಂದು ಕೊರತೆ ಆಲಿಸಲು ಶೀಘ್ರದಲ್ಲಿಯೇ ಆಡಳಿತ ಸೌಧದಲ್ಲಿ ಕಚೇರಿ ಆರಂಭಿಸು ತ್ತಿರುವ ಬಗ್ಗೆ ಮಾಹಿತಿ ನೀಡಿದರು.
ವಿಜಯೇಂದ್ರರವರ  ಜನಪರ ಕಾಳಜಿಗೆ ಅಭಿಮಾನಿಗಳು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಮರಿ ರಾಜಾಹುಲಿಗೆ ಜೈ ಎಂದು ಜೈಕಾರ ಹಾಕುತ್ತಾ  ಸ್ವಾಗತಿಸಿ, ತಂದೆಗೆ ತಕ್ಕ ಮಗ ಎಂದು ತಾಲೂಕಿನಲ್ಲಿ ಚರ್ಚೆ ಆರಂಭಿಸಿದ್ದಾರೆ. ಇದೇ ಕಾಳಜಿ ಕೇವಲ ಬರುವ ಗ್ರಾಮ ಪಂಚಾಯಿತಿ ಜಿಲ್ಲಾ ಪಂಚಾಯಿತಿ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗದೇ ಸಂಪೂರ್ಣ ಐದು ವರ್ಷ ಮುಂದು ವರಿಯಲಿ ಎಂದು ಆಶಿಸುತ್ತಿದ್ದಾರೆ.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು