ಸರ್ಕಾರಿ-ಖಾಸಗಿ ಆಸ್ಪತ್ರೆ- ಶಾಲೆಗಳಲ್ಲಿ ಪತ್ರಕರ್ತ- ವಿತರಕರ ಮಕ್ಕಳಿಗೆ ಉಚಿತ ಸೇವೆ ನೀಡಿ

ವಿಜಯ ಸಂಘರ್ಷ
ಶಿವಮೊಗ್ಗ: ಬಿಸಿಲು ಮಳೆ ಗಾಳಿ ಚಳಿ ಎನ್ನದೇ ಸುದ್ದಿ ಬಿತ್ತರಿಸುವ ಪತ್ರಿಕೆಗಳನ್ನು ವಿತರಿಸುತ್ತಿರುವ ಪತ್ರಿಕಾ ವಿತರಕರಿಗೆ ಹಾಗೂ ಪತ್ರಕರ್ತರಿಗೆ ಯಾವುದೇ ಸೌಲಭ್ಯಗಳನ್ನು ಸರ್ಕಾರ ಒದಗಿಸಿಲ್ಲ. ಪತ್ರಕರ್ತರ ಹಾಗೂ ಪತ್ರಿಕಾ ವಿತರಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
 
 ಜಿಲ್ಲಾಧ್ಯಕ್ಷ ಮಾಲತೇಶ್ ಮಾತನಾಡಿ ಪತ್ರಿಕೆಗಳನ್ನು ಹಂಚುವವರಿಗೆ ಯಾವುದೇ ಸರ್ಕಾರದ ಭದ್ರತೆ ಇಲ್ಲ. ಪತ್ರಿಕೆ ಹಂಚು ವಾಗ ಅಪಘಾತಗೊಂಡಲ್ಲಿ ಸರ್ಕಾರವೇ ವೆಚ್ಚಹರಿಸಬೇಕು ಹಾಗೂ ಮರಣ ಹೊಂದಿದಲ್ಲಿ 5 ಲಕ್ಷ ಪರಿಹಾರ ಹಣ ನೀಡಬೇಕು. ಪತ್ರಿಕೆ ಹಂಚಲು ದ್ವಿಚಕ್ರ ವಾಹನ ಅವಶ್ಯಕವಾಗಿದ್ದು ಬಡ್ಡಿ ರಹಿತ ಸಾಲ ಸೌಲಭ್ಯ ನೀಡಬೇಕು. ಪತ್ರಕರ್ತರು ಮತ್ತು ವಿತರಕರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
  
ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಮಾತನಾಡಿ ಪತ್ರಿಕೆಗಳು ಇಂದು ಅಳಿವಿ ನಂಚಿನಲ್ಲಿದ್ದು ಓದುಗರ ಸಂಖ್ಯೆ ಹೆಚ್ಚಿಸಲು ಮತ್ತು ಪತ್ರಿಕೆಯ ಉಳಿವಿಗಾಗಿ ಸರ್ಕಾರ ಸಬ್ಸಿಡಿ ಹಾಗೂ ಪತ್ರಿಕಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವದರೊಂದಿಗೆ ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ಆರೋಗ್ಯ ತಪಾಸಣೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಸೌಲಭ್ಯ ನೀಡಬೇಕು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಉಚಿತ ಅವಕಾಶ ದೊರಕಬೇಕು, 65 ವರ್ಷ ದಾಟಿದ ಪತ್ರಿಕಾ ವಿತರಕರು ಮತ್ತು ಪತ್ರಕರ್ತರಿಗೆ ಪಿಂಚಣಿ ಸೌಲಭ್ಯ ಸರ್ಕಾರ ಘೋಷಿಸಬೇಕು ಹಾಗೂ ಕಟ್ಟಡ ಕಾರ್ಮಿಕ ರಿಗೆ ನೀಡಿರುವ ಉಚಿತ ಸೌಲಭ್ಯಗಳನ್ನು ಪತ್ರಿಕಾ ವಿತರಕರಿಗೂ ವಿಸ್ತರಿಸಬೇಕು ಎಂದರು.

  ಈ ಬಾರಿಯ ಸರ್ಕಾರದ ಬಜೆಟ್ ನಲ್ಲಿ ಪತ್ರಕರ್ತರ ಮತ್ತು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವುದ ರೊಂದಿಗೆ ನಮ್ಮ ಬೇಡಿಕೆಗಳನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಪರಶು ರಾಮ್ ರಾವ್ ಭದ್ರಾವತಿ , ಗಜೇಂದ್ರ ಶಿಕಾರಿಪುರ, ವೆಂಕಟೇಶ್ ಶಿವಮೊಗ್ಗ, ಮಲ್ಲಿಕಾರ್ಜುನ್, ಮಾಲತೇಶ್, ಹಾಗೂ ಹಿರಿಯ ಪತ್ರಿಕಾ ವಿತರಕರಾದ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ನಜೀರ್, ರಾಮು ದುರ್ಘೋಜಿ ಉಪಸ್ಥಿತರಿದ್ದರು.

 ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು