ಏಕಾಏಕಿ ಸುರಿದ ಮಳೆ ಹಿನ್ನೆಲೆ-ಟೊಮೊಟೊ ಬೆಲೆ ಎಷ್ಟು ಗೊತ್ತಾ...?

ವಿಜಯ ಸಂಘರ್ಷ
ಭದ್ರಾವತಿ : ಬೇಸಿಗೆ ಮುಗಿಯುತ್ತ ಬರುತ್ತಿದ್ದಂತೆ ತರಕಾರಿ ಬೆಲೆ ಬಹಳಷ್ಟು ದುಬಾರಿಯಾಗಿದೆ. ಸಾರ್ವಜನಿಕರ ಜೇಬಿಗೆ  ಪೆಟ್ಟು ಬೀಳುತ್ತಿದೆ. ಬಹುತೇಕ ಕಡೆಗಳಲ್ಲಿ ಟೊಮೆಟೊ ಬೆಲೆ ದುಪ್ಪಟ್ಟಾಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಟೊಮೆಟೊ ದರ ಕೆಜಿಗೆ 80 ರೂಪಾಯಿಗೆ ಏರಿಕೆಯಾಗಿದೆ.

ಏಕಾಏಕಿ ಸುರಿದ ಮಳೆಯಿಂದಾಗಿ ತರಕಾರಿ ಬೆಲೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಕೆಜಿಗೆ ಕೇವಲ 20-25 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೊ ಬೆಲೆ ಈಗ ಮಾರುಕಟ್ಟೆಯಲ್ಲಿ ಕೆಜಿಗೆ 80 ರೂಪಾಯಿಗೆ ತಲುಪಿದೆ.

ಕಳೆದ 4 ರಿಂದ 5 ದಿನಗಳಲ್ಲಿ ಟೊಮೆಟೊ ಬೆಲೆ 4 ಪಟ್ಟು ಹೆಚ್ಚಾಗಿದೆ. ಟೊಮೆಟೊ ಜತೆಗೆ ಇನ್ನೂ ಹಲವು ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಮಳೆಗಾಲದ ವಿಳಂಬ ಮತ್ತು ಅತಿಯಾದಶಾಖದಿಂದಾಗಿ, ಟೊಮೆಟೊ ಬೆಲೆಯಲ್ಲಿ ಏರಿಕೆಯಾಗುತ್ತಿದೆ.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು