ವಿಐಎಸ್ ಎಲ್ ಕಾರ್ಖಾನೆ ಉಳಿವಿಗಾಗಿ ಸಚಿವರಲ್ಲಿ ಗುತ್ತಿಗೆ ಕಾರ್ಮಿಕರ ಮನವಿ

ವಿಜಯ ಸಂಘರ್ಷ
ಭದ್ರಾವತಿ: ಖಾಸಗಿ ಕಾರ್ಯಕ್ರಮದ ನಿಮ್ಮಿತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರುನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ವಿಐಎಸ್ ಎಲ್ ಗುತ್ತಿಗೆ ಕಾರ್ಮಿಕ ಸಂಘದ ಪದಾಧಿಕಾರಿ ಗಳು ಭಾನುವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಸರ್ಕಾರವಿದ್ದ ಸಂದರ್ಭದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ರವರ ಸತತ ಪ್ರಯತ್ನ ದಿಂದ ಕಾರ್ಖಾನೆಗೆ 150 ಎಕರೆ ಸ್ವಂತ ಕಬ್ಬಿಣದ ಅದಿರು ಗಣಿಯನ್ನು ಮಂಜೂರು ಮಾಡಿಸಲಾಗಿತ್ತು.

ಹಿಂದಿನ ಸರ್ಕಾರ ಗಣಿಯನ್ನು ಬಳಸಿ ಕೊಂಡು ಸೂಕ್ತ ಬಂಡವಾಳ ತೊಡಗಿಸದೆ, ಕೇಂದ್ರ ಸರ್ಕಾರದ ನಿರ್ದೇಶನದಂತೆ ಸೈಲ್ ಆಡಳಿತ ವರ್ಗ ನಮ್ಮ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ತೀರ್ಮಾನ ತೆಗೆದುಕೊಂಡಿದೆ.

ಈ ತೀರ್ಮಾನದಿಂದ ಸಾವಿರಾರು ಕಾರ್ಮಿಕ ರ ಹಾಗೂ ಭದ್ರಾವತಿಯ ಭವಿಷ್ಯ ಆತಂತ್ರವಾಗಲಿದೆ. ಹಾಗಾಗಿ ಮುಂಬರುವ ಅಧಿವೇಶನದಲ್ಲಿ ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಮುಚ್ಚಬಾರದೆಂದು ಹಾಗೂ ಕೇಂದ್ರ ಸರ್ಕಾರವೇ ಸೂಕ್ತ ಬಂಡ ವಾಳ ತೊಡಗಿಸಿ ಅಭಿವೃದ್ಧಿ ಪಡಿಸಬೇಕೆಂಬ ನಿರ್ಣಯವನ್ನು ಕೈಗೊಂಡು, ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದರ ಮೂಲಕ ಕಾರ್ಖಾನೆಯನ್ನು ಉಳಿಸಿ ಕೊಡುವಂತೆ ಕಾರ್ಮಿಕರು ಸಚಿವರಲ್ಲಿ ಮನವಿ ಮಾಡಿಕೊಂಡರು.

ಈ ಹಿನ್ನಲೆಯಲ್ಲಿ ಸಚಿವರು ಮನವಿಗೆ ಸ್ಪಂದಿಸಿ, ಕ್ಷೇತ್ರದ ಶಾಸಕ ಬಿ. ಕೆ.ಸಂಗಮೇಶ್ವರ್ ನವರ ಜೊತೆಗೂಡಿ ಕಾರ್ಖಾನೆ ಉಳಿಸುವಲ್ಲಿ ಎಲ್ಲಾ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂರಾರು ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು