ಚುನಾಯಿತ ಸರ್ಕಾರಗಳು ಮಹಿಳಾ ಕುಸ್ತಿಪಟುಗಳಿಗೆ ರಕ್ಷಣೆ ನೀಡಲಿ: ಶಶಿಕುಮಾರ್

ವಿಜಯ ಸಂಘರ್ಷ
ಭದ್ರಾವತಿ: ದೇಶದ ರಾಜಧಾನಿ ಹೊಸದಿಲ್ಲಿ ಯಲ್ಲಿ ಕುಸ್ತಿಪಟುಗಳು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ವಿರುದ್ಧ ತಿಂಗಳು ಗಳಿಂದ ನಡೆಸುತ್ತಿರುವ ಪ್ರತಿಭಟನೆ ಕಾವು ಪಡೆಯುತ್ತಿರುವಂತೆಯೇ ಯಾವೊಬ್ಬ ಜನಪ್ರತಿನಿಧಿಗಳಾಗಲಿ, ಸರ್ಕಾರಗಳು ಮುಂದಾಗದಿರುವುದು ವಿಪರ್ಯಾಸ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ಗಂಭೀರವಾದ ಆರೋಪ ಮಾಡಿದ್ದಾರೆ.

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಲಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಓರ್ವ ಮಹಿಳೆಯಗಿದ್ದು ಕುಸ್ತಿಪಟುಗಳ ಪರಧ್ವನಿ ಎತ್ತದಿರುವುದು ವಿಷಾಧನೀಯ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ‌ ಕೀರ್ತಿ ಪತಾಕೆ ಹಾರಿಸಿದವರ ಬದುಕು ಈಗ ಬೀದಿಗೆ ಬಂದಾಗಿದೆ. ಮಹಾನ್ ದೇಶಾಭಿ ಮಾನಿ ಮತ್ತು ತಾನೇ ದೇಶ ಎಂದುಕೊಳ್ಳು ವ ಸರ್ಕಾರದ ನಿಜವಾದ ಮುಖವಾಡವೂ ಕೂಡ ಕಳಚಿ ಬಿದ್ದಿದೆ. ಕ್ರೀಡಾಲೋಕದಲ್ಲಿ ತಮ್ಮದೇ ಸಾಧನೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ, ಗೌರವ ಹೆಚ್ಚಿಸಿದವ ರಿಗಾದ ಅನ್ಯಾಯದ ವಿರುದ್ಧದ ಕೂಗಿಗೆ ಸರ್ಕಾರ ಕಿವುಡಾಗಿದೆ.

ಪ್ರತಿಭಟನೆಯನ್ನು ಆಳುವವರು ಪೊಲೀಸ್ ದೌರ್ಜನ್ಯದ ಮೂಲಕ ದಮನ ಮಾಡಲು ಯತ್ನಿಸುತ್ತಿದ್ದಾರೆ ಎಂದರೆ, ಕ್ರೀಡಾ ಪಟು ಗಳು ಕಷ್ಟಪಟ್ಟು, ಹಗಲು- ರಾತ್ರಿ ನಿದ್ದೆ ಇಲ್ಲದೆ ಕಣ್ಣಿಗೆ ಎಣ್ಣೆ ಬಿಟ್ಟು ಕೊಂಡು ತರಬೇತಿ ಪಡೆದು ಅಂತರಾ ಷ್ಟ್ರೀಯ ಮಟ್ಟದಲ್ಲಿ ಯಾಕೆ ಗೆಲ್ಲಬೇಕು ? ಕುಸ್ತಿ ಪಟುಗಳ ಪ್ರತಿಭಟನೆಯ ಬಗ್ಗೆ ಕೇಂದ್ರ ಸರ್ಕಾರ ತೋರುತ್ತಿರುವ ಜಾಣ ಮೌನವು ಕ್ರೀಡೆಯ ಬಗ್ಗೆ, ಕ್ರೀಡಾ ಪಟುಗಳ ಬಗ್ಗೆ ಅದಕ್ಕಿರುವ ತಾತ್ಸಾರದ ಮನೋಭಾವ ವನ್ನು ಬಟಾಬಯಲು ಮಾಡಿದೆಯೇ ಹೊರತು ಮತ್ತೇನೂ ಅಲ್ಲ.

ಬ್ರಿಜ್‌ ಭೂಷಣ್ ಶರಣ್‌ ಸಿಂಗ್ ಹರಿಯಾಣದ ಬಿಜೆಪಿ ಸಂಸದ ಹಾಗೂ ಭಾರತ ಕುಸ್ತಿ ಫೇಡರೇಷನ್‌ ಅಧ್ಯಕ್ಷ. ಈತನ‌ ಮೇಲೆ ಈಗ ಲೈಂಗಿಕ ದೌರ್ಜನ್ಯದ ಆರೋಪ ಬಂದಿದೆ‌.‌ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದಾರೆನ್ನಲಾದ 7 ಜನ ಮಹಿಳಾ ಕುಸ್ತಿಪಟುಗಳು ಸತತ ಒಂದು ತಿಂಗಳಿ ನಿಂದ ದೆಹಲಿಯ ಜಂತರ್‌ ಮಂಥರ್‌ನಲ್ಲಿ ನ್ಯಾಯ ಕ್ಕಾಗಿ ಪ್ರತಿಭಟನೆ ನಡೆಸುತ್ತಲೆ ಇದ್ದಾರೆ. ಅವರಿಗೆ ಭಾರೀ ಬೆಂಬಲವೂ ವ್ಯಕ್ತವಾಗಿದೆ.

ಬ್ರಿಜ್‌ ಭೂಷಣ್‌ ಸಿಂಗ್‌ನನ್ನು ಬಂಧಿಸ ಬೇಕೆನ್ನುವ ಕೂಗಿಗೆ ಸರ್ಕಾರ ಕಿವಿಗೊಡು ತ್ತಿಲ್ಲ. ಆತನ ಮೇಲಿನ ಆರೋಪಕ್ಕೆ ಸಂಬಂಧಿ ಸಿದಂತೆ ಸುಪ್ರೀಂಕೋರ್ಟ್‌ ಕೂಡ ಮಧ್ಯ ಪ್ರವೇಶಿಸಿದೆ. ಆದರೂ ಆತನನ್ನು ಬಂಧಿಸಬೇಕೆಂಬ ಕುಸ್ತಿಪಟು ಗಳ ಬೇಡಿಕೆಗೆ ಕೇಂದ್ರ ಕ್ಯಾರೆ ಅಂದಿಲ್ಲ ಎಂದು ಕಿಡಿಕಾರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು