ವೃತ್ತಿ ಕ್ಷೇತ್ರದ ಯಶಸ್ಸಿಗೆ ಕೌಶಲ್ಯ ಅತ್ಯಂತ ಮುಖ್ಯ: ಬಿ.ವಿ.ಗೋಪಾಲರೆಡ್ಡಿ

ವಿಜಯ ಸಂಘರ್ಷ
ಶಿವಮೊಗ್ಗ: ವೃತ್ತಿ ಕ್ಷೇತ್ರಕ್ಕೆ ಅವಶ್ಯಕತೆ ಇರುವ ಕೌಶಲ್ಯ ತರಬೇತಿ ನೀಡುವ ಹಾಗೂ ಕೌಶಲ್ಯಯುತ ಯುವ ಸಮಾಜ ರೂಪಿಸುವ ಆಶಯದಿಂದ ರಾಜ್ಯದ ವಾಣಿಜ್ಯ ಸಂಘ ಕಾರ್ಯ‌ ನಿರ್ವಹಿಸುತ್ತಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ ಹೇಳಿದರು.

ಶಿವಮೊಗ್ಗ ನಗರದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಣಿಜ್ಯ ಉದ್ಯಮಿ, ಕೈಗಾರಿಕೋದ್ಯಮಿ ಹಾಗೂ ಎಲ್ಲ ವೃತ್ತಿ ಕ್ಷೇತ್ರದವರಿಗೂ ಉತ್ತಮ‌ ಸೇವೆ ಒದಗಿಸುವ ದೃಷ್ಟಿಯಿಂದ ರಾಜ್ಯ ಸಂಘನಟನೆಯು ಸದಾ ಬೆಂಬಲ‌ ಒದಗಿಸುತ್ತದೆ. ಕೌಶಲ್ಯಯುತ ಯುವ ಸಮೂಹ ಹೊಸ‌ ಅಲೋಚನೆ ಹಾಗೂ ಯೋಜನೆಗಳನ್ನು ಕಾರ್ಯರೂಪಕ್ಕೆ ತರ ಲಿದೆ. ಅಗತ್ಯವಿರುವ ಕೌಶಲ್ಯ ಕೋರ್ಸು ಗಳನ್ನು ಸಂಘಟನೆ ಆಯೋಜಿಸುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ‌ವಾಣಿಜ್ಯ ಮತ್ತು ಕೈಗಾ ರಿಕಾ ಸಂಘದ ಅಧ್ಯಕ್ಷ ಎನ್.ಗೋಪಿ ನಾಥ್ ಮಾತನಾಡಿ, ಸಂಘವು ಅಮೃತ ಮಹೋತ್ಸವ ವರ್ಷ ಆಚರಿಸುತ್ತಿದ್ದು, ನಮ್ಮ ಸಂಘವು ಜಿಲ್ಲೆಯ ಸಮಗ್ರ ಅಭಿ ವೃದ್ಧಿಯಲ್ಲಿ ನಿರಂತರ ಸಲಹೆ,‌ ಮಾರ್ಗದ ರ್ಶನ ಹಾಗೂ ಸಹಕಾರ ನೀಡುತ್ತಾ ಬರುತ್ತಿದೆ. ಮಾಜಿ ಅಧ್ಯಕ್ಷರ ಮಾರ್ಗದರ್ಶ ನದಲ್ಲಿ ಸಂಘವು ಮುನ್ನಡೆಯುತ್ತಿದೆ ಎಂದು ಹೇಳಿದರು.

ಸ್ಕೀಲ್ ಅಕಾಡೆಮಿ ಸ್ಥಾಪಿಸುವ ಕುರಿತು ಯೋಜನೆ ಪ್ರಗತಿಯಲ್ಲಿದೆ. ರಾಜ್ಯ ಸಂಘ ಹಾಗೂ ರಾಜ್ಯ ಸರ್ಕಾರದ ಸಹಯೋಗ ದಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಮುಂದಿನ ದಿನಗಳಲ್ಲಿ ಸಂಘಟನೆ ಮತ್ತಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

ರಾಜ್ಯ ಸಂಘಟನೆಯ ಪ್ರಮುಖ ಕಿರಣ್ ಕುಮಾರ್ ಮಾತನಾಡಿ, ಉದ್ಯಮಿ ಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಪಾಸ್ ಪೋರ್ಟ್, ವೀಸಾ ಸೇರಿದಂತೆ ಯಾವುದೇ ಸಮಸ್ಯೆ ಆದರೂ ಕೂಡಲೇ ಪರಿಹರಿಸುವ ಕೆಲಸ‌ ಮಾಡುತ್ತೇವೆ. ಸಂಘದಲ್ಲಿ ಸದಸ್ಯತ್ವ ಪಡೆಯುವುದರಿಂದ ರಾಷ್ಟ್ರೀಯ, ಅಂತರಾ ಷ್ಟ್ರೀಯ ಮಟ್ಟದಲ್ಲಿ ತುಂಬಾ ಪ್ರಯೋಜನ ದೊರೆಯುತ್ತವೆ ಎಂದು ತಿಳಿಸಿದರು.

ರಾಘವೇಂದ್ರ ರಾವ್, ಡಿ.ಎಂ.ಶಂಕರಪ್ಪ‌ ಸಹೋದರರು, ಎ.ಎಂ.ಸುರೇಶ್ ಅವರಿಗೆ 2023ನೇ ಸಾಲಿನ ಹೆಮ್ಮೆಯ ವಾಣಿಜ್ಯ ಪ್ರಶಸ್ತಿ ಪುರಸ್ಕಾರ ‌ನೀಡಿ‌ ಗೌರವಿಸ ಲಾಯಿತು. ಆರ್.ರಂಗಪ್ಪ ಅವರಿಗೆ ವಿಶೇಷ ಪುರಸ್ಕಾರ ನೀಡಿ‌ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಯೋಗಪಟು ಸವಿತಾ ಮಾಧವ್, ರಾಜ್ಯ ಜ್ಯೂವೆಲ್ಲರಿ ಫೆಡರೇಷನ್ ಉಪಾಧ್ಯಕ್ಷ ವಿನೋದ್ ಕುಮಾರ್ ಜೈನ್ ಅವರಿಗೆ ಸನ್ಮಾನಿಸಲಾಯಿತು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರಿಗೆ ನೂತನ ಯೋಜನೆಯಡಿ ಗುರುತೀನ‌ ಚೀಟಿಗಳನ್ನು ವಿತರಿಸಲಾ ಯಿತು. ಉದ್ಯಮಿಗಳಿಗೆ ಪ್ರೋತ್ಸಾಹಿಸಲು ವಿಶೇಷ ಮಳಿಗೆಗಳನ್ನು ಹಾಕಲಾಗಿತ್ತು.

ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಟಿ.ಆರ್. ಅಶ್ವತ್ಥ ನಾರಾಯಣ ಶೆಟ್ಟಿ, ಜೆ.ಆರ್. ವಾಸುದೇವ, ಕೆ.ವಿ.ವಸಂತ್ ಕುಮಾರ್ ಅವರಿಗೆ ಅಭಿನಂದಿಸಲಾಯಿತು. ಸಂಘದ ಕನಸಿನ ಯೋಜನೆಯಾದ ಅಡ್ವಾನ್ಸ್ಡ್ ಕೌಶಲ್ಯ ಅಕಾಡೆಮಿಯ ಲೋಗೋ‌ ಅನಾವರಣಗೊಳಿಸಲಾಯಿತು.

ಜಿಲ್ಲಾ ‌ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ‌ ಅಧ್ಯಕ್ಷ ಜೆ.ಆರ್. ವಾಸುದೇವ್, ಉಪಾಧ್ಯಕ್ಷ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿ ದಾರ್, ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್, ಖಜಾಂಚಿ ಎಂ.ರಾಜು, ನಿರ್ದೇಶಕ ಬಿ.ಆರ್. ಸಂತೋಷ್, ಸಂಘದ ಎಲ್ಲ ನಿರ್ದೇಶ ಕರು, ಮಾಜಿ ಅಧ್ಯಕ್ಷರು,‌ ಪದಾಧಿಕಾರಿ ಗಳು, ಸಂಘದಸಂಯೋಜಿತ ಸಂಸ್ಥೆಯ ‌ಅಧ್ಯಕ್ಷರು ಹಾಗೂ ಪದಾಧಿ ಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು