ವಿಜಯ ಸಂಘರ್ಷ
ಶಿಕಾರಿಪುರ : ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿ ಆಗಿದ್ದ ಅವಧಿಯಲ್ಲಿ ಶಿಕಾರಿ ಪುರದ ಕೊಟ್ರಳ್ಳಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಡಿಪೋಗಾಗಿ ಸರ್ಕಾರ ದಿಂದ ಕೋಟ್ಯಾಂತ ರೂಗಳ ಅನು ದಾನ ದಲ್ಲಿ ನಿರ್ಮಿಸಿದ ಕೆ ಎಸ್ ಆರ್ ಟಿ ಸಿ ಬಸ್ ಡಿಪೋದಲ್ಲಿ ಇದುವರೆಗೂ ಒಂದು ಬಸ್ ಸಹ ಇರದೇ ಇರುವು ದನ್ನು ವಿರೋಧಿಸಿ ಜಯಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಗುಣರಂಜನ್ ಶೆಟ್ಟಿ ರವರ ಮಾರ್ಗ ದರ್ಶನದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಮಾತ ನಾಡಿ ಸರ್ಕಾರದ ಹಣದಲ್ಲಿ ನಿರ್ಮಾಣ ಗೊಂಡಿ ರುವ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳು ನೆಪಕ್ಕೆ ಮಾತ್ರ ಇದ್ದು ಉದ್ಘಾಟನೆ ಆಗಿ ಆರು ತಿಂಗಳಾ ದರೂ ಇದುವರೆಗೂ ಒಂದು ಬಸ್ಸು ಕೂಡ ಶಿಕಾರಿಪುರದ ಡಿಪೋದಿಂದ ಸಂಚಾರ ಮಾಡುತ್ತಿಲ್ಲ. ಬಸ್ ಡಿಪೋ ಖಾಲಿ ಖಾಲಿ ಇದ್ದು ಖಾಲಿ ಇರುವ ಬಸ್ ಡಿಪೋಗೆ ನಾಲ್ಕು ನೌಕರರಿದ್ದು ಅವರಿಗೆ ನಿಗಮ ಪುಕ್ಕಟೆ ಸಂಬಳ ವನ್ನು ನೀಡುತ್ತಾ ಬಂದಿದೆ. ಆ ನೌಕರರು ಖಾಲಿ ಡಿಪೋ ಕಾಯುವ ಕಾವಾಲುಗಾರರಾಗಿದ್ದಾರೆ.
ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ದಲ್ಲಿ ಇಬ್ಬರು ಟೀಸಿಗಳಿದ್ದು ಸಂಜೆ 5 -6 ಗಂಟೆಗಳು ಆಗುತ್ತಿದ್ದಂತೆಯೇ ಮನೆಗೆ ಹೋಗಿರುತ್ತಾರೆ. ಬಸ್ ನಿಲ್ದಾಣದಲ್ಲಿ ಮಾಹಿತಿ ನೀಡುವ ಅಧಿಕಾರಿಗಳೇ ಇಲ್ಲದೇ ಬೆರಳಣಿಕೆ ಯಷ್ಟು ಬರುವ ಬಸ್ ಗಳು ಪಕ್ಕದ ಹಿರೇಕೇರೂರು ತಾಲ್ಲೂಕು ಶಿವ ಮೊಗ್ಗ ಬಸ್ ಡಿಪೋ ಹೊನ್ನಳ್ಳಿ ಡಿಪೋ ಗಳಿಂದ ಶಿಕಾರಿಪುರ ಮಾರ್ಗವಾಗಿ ಕೆಲವೇ ಕೆಲವು ಬಸ್ಸು ಗಳು ಸಂಚರಿಸುತ್ತಾ ಇವೆ. ಇಲ್ಲಿ ಯಾರು ಹೇಳುವರು ಇಲ್ಲ ಕೇಳುವರು ಇಲ್ಲದ ಕಾರಣ ರಾತ್ರಿಯ ಹೊತ್ತು ಬಸ್ಸು ಗಳು ಬಸ್ ನಿಲ್ದಾಣದ ಒಳಗೆ ಬರದೇ ಹೊರಗಿನಿಂದಲೇ ಸಂಚರಿಸು ತ್ತಿದ್ದು ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ ಕಾಯುತ್ತಿರುತ್ತಾರೆ.
ಶಿಕಾರಿಪುರ ಅಭಿವೃದ್ಧಿ ಆಗಿದೆ ಎಂದು ಹೇಳುವ ಮಾಜಿ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಮೊದಲು ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಕರ್ಯ ಕಲ್ಪಿಸಿ, ಅನೇಕ ಹಳ್ಳಿಗಳಿಗೆ ಬಸ್ ಸಂಚಾರವಿಲ್ಲದೇ ಜನ ಪರದಾಡುತ್ತಿದ್ದಾರೆ. ನೂತನ ಶಾಸಕರು ವಿಜಯೇಂದ್ರ ಈಗಲಾದ ರೂ ಸರ್ಕಾರದಿಂದ ಎಲ್ಲಾ ಹಳ್ಳಿಗಳಿ ಗೂ ಬಸ್ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಶಿವಯ್ಯ ಎನ್ ಶಾಸ್ತ್ರಿ ಮಾತನಾಡಿ ರಾಜ್ಯ ದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆ ಆದ ಸ್ತ್ರೀಶಕ್ತಿ ಯೋಜನೆಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದು ನಮ್ಮ ತಾಲೂಕಿಗೂ ಕೂಡ ಮಹಿಳೆ ಯರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗಲು ಶಿಕಾರಿಪುರದಿಂದ ಬಸ್ ಸಂಚಾರ ಆರಂಭಿಸಲು ಸರ್ಕಾರ ಮುಂದಾಗಬೇಕು ಎಂದು ಅಗ್ರಹಿಸಿದರು.
ತಾಲೂಕು ಕಾರ್ಯದರ್ಶಿ ಇಮ್ರಾನ್ ಮಾತ ನಾಡಿ ಬಸ್ ನಿಲ್ದಾಣ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನೌಕರಿ ಮಾಡುವ ವರಿಗೆ ಕೆಲಸವಿಲ್ಲದೆ ನಿಗಮದಿಂದ ಪ್ರತಿ ತಿಂಗಳು ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದು ಕೂಡಲೇ ರಾಜ್ಯ ಸರ್ಕಾರ ಮುಖ್ಯ ಮಂತ್ರಿಗಳು ಮತ್ತು ಸಾರಿಗೆ ಸಚಿವರು ಶಿಕಾರಿಪುರ ದಲ್ಲಿ ಖಾಲಿ ಇರುವ ಡಿಪೋಗಳಲ್ಲಿ ಬಸ್ ಗಳನ್ನು ಉಳಿದ ನೌಕರರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಮಂಜುನಾಥ್ ಆರ್ ಪಿ ಮಾತನಾಡಿ ಸರ್ಕಾರ ಹಾಗೂ ಶಾಸಕರು ಈ ಬಗ್ಗೆ ಗಮನ ಹರಿಸದೆ ಹೋದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂ ಡರಾದ ಸುರೇಶ್, ಮಟ್ಟಿ ಕೋಟೆ ಮಾಲತೇಶ್, ಶಿರಾಳಕೊಪ್ಪ ಸತೀಶ್, ಹುಸೇನ್ ಸಾಬ್, ರವಿ, ಇಮ್ರಾನ್ ಖಾನ್, ಮುಕ್ರಂ, ರಾಜ ಶೇಖರ್, ಯೋಗೇಶ್, ರಫೀಕ್ ನರಸಾಪುರ, ಪುನೀತ್ ನವೀನ್, ಸೇರಿದಂತೆ ಹಲವರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795
Tags:
ಶಿಕಾರಿಪುರ ನ್ಯೂಸ್