ವಿಜಯ ಸಂಘರ್ಷ
ಭದ್ರಾವತಿ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶ್ವನಗರದಲ್ಲಿ ನಿರ್ಮಲ ಆಸ್ಪತ್ರೆಯ ಸಹಯೋಗ ದೊಂದಿಗೆ ಹಣ್ಣಿನ ಹಾಗೂ ಹೂವಿನ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಎಜಿಟಿ ಶಿಕ್ಷಕ ಎಂ.ಈ.ವಿಜಯ್ ಕಾರ್ಯ ಕ್ರಮದಲ್ಲಿ ಮಾತನಾಡಿ, ನಾವು ಈ ಪ್ರಕೃತಿಯ ಮಡಿಲಲ್ಲಿ ಜೀವಿಸುತ್ತಿದ್ದೇವೆ. ಹಿಂದಿನಿಂದಲೂ ಅನೇಕ ಹೋರಾಟ ಗಳಿಂದ ನಮ್ಮ ಕಾಡನ್ನು ನಾವು ರಕ್ಷಿಸಿ ಕೊಂಡು ಬರುತ್ತಿದ್ದೇವೆ ಎಂದು ಸುಂದರ್ ಲಾಲ್ ಬಹುಗುಣ ರವರ ಅಪ್ಪಿಕೋ ಚಳುವಳಿ ಮತ್ತು ಸಾಲುಮರದ ತಿಮ್ಮಕ್ಕನ ಸಾಧನೆಗಳನ್ನು ನೆನೆದರು.
ಶಿಕ್ಷಕ ಸಾಹಿತಿ ರಂಗನಾಥ ಕ.ನಾ. ದೇವರ ಹಳ್ಳಿ ಮಾತನಾಡಿ, ಹಸಿರು ನಮ್ಮೆಲ್ಲರ ಉಸಿರಾಗಬೇಕು, ಅದಕ್ಕಾಗಿ ನಾವೆಲ್ಲರೂ ಗಿಡಗಳನ್ನು ಬೆಳೆಸಬೇಕು, ಆಕ್ಸಿಜನ್ ನಮಗೆ ಸಿಗುತ್ತಿರುವುದೇ ಗಿಡ ಮರಗಳಿಂದ. ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು ಎಂಬ ಸಂದೇಶ ನೀಡಿದರು.
ನಿರ್ಮಲಾ ಸೇವಾ ಕೇಂದ್ರ ಮುಖ್ಯಸ್ಥ ರಾದ ಮೇರಿ ಯವರು ಕಾರ್ಯಕ್ರಮ ದಲ್ಲಿ ಗಿಡಗಳನ್ನು ಶಾಲೆಗೆ ವಿತರಿಸಿ, ಎಲ್ಲರಿಗೂ ಪರಿಸರದ ಬಗ್ಗೆ ಕಾಳಜಿ ಇರಬೇಕು, ಸಸಿಗಳನ್ನು ಬೆಳೆಸುವ ಕೈಂಕರ್ಯ ತೊಡಬೇಕು ಎಂಬ ಸಂದೇಶ ನೀಡಿದರು. ಮುಖ್ಯ ಶಿಕ್ಷಕ ರಾದ ಸಾವಿತ್ರಮ್ಮ ಎಲ್ಲರನ್ನೂ ಸ್ವಾಗತಿಸಿದರು, ಕು. ಯೋಗಿತ, ಶ್ರೀ ಗೌರಿ, ಸಿಂಚನ ಪ್ರಾರ್ಥಿಸಿದರು, ಶಿಕ್ಷಕಿ ಪದ್ಮಾವತಿ ನಿರೂಪಿಸಿದರು. ನಿರ್ಮಲ ಸೇವಾ ಕೇಂದ್ರದ ಸದಸ್ಯೆ ನಿರ್ಮಲಾ ಎಲ್ಲರಿಗೂ ಶುಭ ಕೋರಿದರು.
ನಂತರ ಶಾಲೆಯ ಆವರಣದಲ್ಲಿ ಮಾವು, ಹಲಸು, ಬೇವು, ಗಸಗಸೆ, ನೆಲ್ಲಿಕಾಯಿ, ಅಂಟುವಾಳ, ಹಾಗೂ ನೇರಳೆ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣ ವಾಗಿ ಆಚರಿಸಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795