ವಿಜಯ ಸಂಘರ್ಷ
ಭದ್ರಾವತಿ: ದೇಶದಲ್ಲಿನ ಆಚಾರ, ವಿಚಾರ, ಸಂಸ್ಕತಿ,ಸoಪ್ರದಾಯಗಳು ಉಳಿದು ಬೆಳೆದು ಅನುಸರಿಸಿದರೆ ಮಾತ್ರ ಉತ್ತಮ ವ್ಯವಸ್ಥೆಯ ಸಮಾಜ ದ ನಿರ್ಮಾಣ ಸಾಧ್ಯ ಎಂದು ಮಾಚೇನಹಳ್ಳಿಯ ಟಿಎಂ ಎಇಎಸ್ ಆರ್ಯುವೇದಿಕ್ ಮೆಡಿಕಲ್ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ಚಿತ್ರಲೇಖ ಅಭಿಪ್ರಾಯಿಸಿದರು.
ಅವರು ನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ವೇದಿಕೆ ಯ ವತಿಯಿಂದ ಹಳೇ ನಗರದ ಮಹಿಳಾ ಸೇವಾ ಸಮಾಜ ದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.
ಸಮಾಜದಲ್ಲಿ ಬಹಳಷ್ಟು ಸಾಹಿತ್ಯಗಳು ಬಂದು ಹೋಗಿದ್ದರೂ, ಅದರಲ್ಲಿ ಸಾಮಾನ್ಯಜನರಿಗೆ ಅರ್ಥವಾಗುವಂತೆ ಅವರ ಜೀವನ ಪದ್ದತಿಯನ್ನು ಬದಲಿಸಿ ಆರೋಗ್ಯವಂತ ವ್ಯಕ್ತಿಯ ನ್ನಾಗಿ ಬಾಳಲು ಸರಳ ಕನ್ನಡದಲ್ಲಿ ವಚನಕಾರರು ತಿಳಿಸಿದ್ದಾರೆ. ಆಧ್ಯಾತ್ಮಚಿಂತನೆಗೆ ಪ್ರಕೃತಿ ಆರಾಧನೆ
ಮಾಡಲು ಹಾಗು ಅದರ ಮಹತ್ವ ಗಳನ್ನು ತಿಳಿಸಿರುವ ಕಾರಣ ಅವುಗಳು ಇಂದಿಗೂ ಜನ ಸಾಮಾನ್ಯರ ಭಾಷೆ ಯಲ್ಲಿ ಉಳಿದಿದೆ.ಬಸವಾದಿ ಶಿವಶ ರಣರುಕೇವಲ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಮೇಲು ಕೀಳು ತಾರತಮ್ಯಗಳನ್ನು ಹೋಗಲಾಡಿಸಿ
ಉತ್ತಮ ಸ್ವಾಸ್ಥ ಸಮಾಜವನ್ನು ನಿರ್ಮಾಣ ಮಾಡಲಿಲ್ಲ.ಮನುಷ್ಯನು ತಾನು ನೆಮ್ಮದಿ ಯಿಂದ ಆರೋಗ್ಯ ದಿoದ ಬಾಳುವಂತಹ ಉತ್ತಮ ವೈಧ್ಯರಾಗಿಯೂ ಸಹ ಅನೇಕ ವಿಚಾರಗಳನ್ನು ಔಷಧಿ ಗಳನ್ನು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದು ವಚನಕಾರರ ಮತ್ತೋಂದು ಮುಖವನ್ನು ಬಹಿರಂಗ ಪಡಿಸಿ, ಬಸವಣ್ಣ,ಸರ್ವಜ್ಞ, ವೈಧ್ಯ ಸಂಗಣ್ಣ, ಮಡಿವಾಳ ಮಾಚಿದೇವ, ಜೇಡರ ದಾಸಿಮಯ್ಯ ಸೇರಿದಂತೆ ಇತರ
ವಚನಕಾರರು ಆರೋಗ್ಯದ ಬಗ್ಗೆ ನೀಡುವ ಸಲಹೆ ಜೀವನ ಕ್ರಮಗಳನ್ನು ವಿವರಿಸಿ ಅದರಂತೆ ಬದುಕಿ ಬಾಳಿ ತಮ್ಮ ಜೀವನ ದಲ್ಲಿ ಅನುಸರಿಸಿ ಇತರಿಗೆ ಮಾರ್ಗದರ್ಶಕರಾದರು ಎಂದರು.
ಶರಣರು ಪ್ರತಿಪಾದಿಸಿದ ಅಂಶಗಳನ್ನು ಇಂದು ನಾವು ಆರೋಗ್ಯದ ವಿಷಯ ದಲ್ಲಿ ಅನುಭವಿಸುತ್ತಿರುವ ಪಾಡು ಗಳನು,12 ನೇ ಶತಮಾನದಲ್ಲಿ ಅಂದೇತಮ್ಮ ವಚನಗಳ ಮೂಲಕ ಬರೆದಿರಬೇಕಾದರೆ ಅವರುಗಳ ದೂರದೃಷ್ಟಿ ಎಷ್ಟೀತ್ತು ಎಂಬುದು 21 ನೇ ಶತಮಾನದಲ್ಲಿ ಈಗ ಅರ್ಥವಾ ಗುತ್ತಿದೆ. ಇದನ್ನೇ ಈಗ ವಿಶ್ವ ಆರೋಗ್ಯ ಸಂಸ್ಥೆ ತಿಳಿಸುತ್ತಿದೆ ಎಂದರು.
ಮನುಷ್ಯ ಕೇವಲ ಹೊರ ನೋಟಕ್ಕೆ ಚನ್ನಾ ಗಿದ್ದರೆ ಆತ ಆರೋಗ್ಯವಂತ ನಾಗಿದ್ದನೆ ಎಂದು ಹೇಳಲು ಸಾಧ್ಯ ವಿಲ್ಲ. ಆರೋಗ್ಯ ಎಂದರೆ ಅದು ಕೇವಲ ಶರೀರಕ್ಕೆ ಮಾತ್ರ ವನ್ನಲದ್ದೂ ಮನಸ್ಸಿಗೂ ಸಂಭoಧಿಸಿದೆ. ಆತ ಮಾನಸಿಕವಾಗಿ, ಶಾರೀರಿಕವಾಗಿ, ಆದ್ಯಾಥ್ಮಿಕವಾಗಿ, ವೈಯುಕ್ತೀಕವಾಗಿ ನೆಮ್ಮದಿ ಯಿಂದ ಇದ್ದರೆ ಮಾತ್ರ ಆತನು ಆರೋಗ್ಯವಂತ ವ್ಯಕ್ತಿ ಎನ್ನಬಹುದು ಎಂದರು.
ಆಧುನಿಕ ವೈಧ್ಯಕೀಯಚಿಕಿತ್ಸೆಗಳು ಕೇವಲ ದೇಹಕ್ಕೆ ಮಾತ್ರ ಚಿಕಿತ್ಸೆಯನ್ನು ನೀಡಿ ರೋಗವನ್ನು ಗುಣ ಪಡಿಸುತ್ತವೆ ವಿನಃ, ಆತನ ಮನಸ್ಸಿಗೆ ಹಾಗು ರೋಗದ ಮೂಲಕ್ಕೆ ಚಿಕಿತ್ಸೆಯನ್ನು ನೀಡುವುದಿಲ್ಲ. ಇದರಿಂದ ಕೇವಲ ರೋಗ ಹೋಗುತ್ತದೆ ಹೋರತು ಸಂಪೂರ್ಣವಾಗಿ ನಿರ್ಮೂಲ
ನವಾಗುವುದಿಲ್ಲ ಎಂದು ವೈಧ್ಯಕೀಯ
ಚಿಕಿತ್ಸೆಯ ಬಗ್ಗೆ ಅದರ ಹಿಂದೆ ಇರುವ ಮಹತ್ವ ಹಾಗು ಚಿಕಿತ್ಸೆಯನ್ನು ತೆಗೆದು ಕೊಳ್ಳಬೇಕಾದ ರೀತಿಯನ್ನು ಮನ ಮುಟ್ಟು ವಂತೆ ವಿವರಿಸಿದರು.
ನಮ್ಮ ಪೂರ್ವಜರು ತಮ್ಮಬದುಕಿನ ಬಗ್ಗೆ ಉತ್ತಮ ಅಂಶಗಳನ್ನು ಹೊಂದಿ ಅದರ ಬಗ್ಗೆ ತಕ್ಕ ತಿಳುವಳಿಕೆಯನ್ನು ಪಡೆದಿದ್ದ ಕಾರಣ ಅದರಂತೆ ನೂರಾರು ವರ್ಷಗಳ ಕಾಲ ಬಾಳಿ ಬದುಕಿ ದರು.ಆದರೆ ಇಂದಿನ ತಲೆಮಾರಿ ನವರು ಅದರ ಮಹತ್ವನ್ನು ಅರಿಯದೆ ಅವವುಗಳನ್ನು ಕಡೆಗಣಿಸಿ ದರು. ಈ ಬಗ್ಗೆ ಯಾರೂ ತಿಳಿಹೇಳುವ ವರು ಇಲ್ಲ. ಹೇಳುವವರು ಮುಚ್ಚಿಟ್ಟರು. ಕೇಳುವವರು ಮೋದಲೆ ಇಲ್ಲ.
ಹಾಗಾಗಿ ಇಂದು ನಾವು ಆನಾ ರೋಗ್ಯದ ಗೋಂದಲದ ಗೂಡಾಗಿ ಜೀವನ ನಡೆಸುತ್ತಿದ್ದೇವೆ.ಇಂದು ನಮಗೆ ಆನೇಕ ರೀತಿಯ ಖಾಯಿಲೆ ಗಳು ಬರಲು ಮೂಲ ಕಾರಣನಾಲಿಗೆ ಯ ಚಪಲ, ಆಸೆ, ಗುಹ್ಯೇಂದ್ರಿಯ ಗಳನ್ನು ನಿಯಂತ್ರಣ ಮಾಡದಿದ್ದರೆ ಅವುಗಳೇ ನಮಗೆ ರೋಗಗಳು ಬರಲು ರಹದಾರಿಯಾಗಿ ಮೂಲ ಕಾರಣವಾಗುತ್ತದೆ.
ಎಲ್ಲದಕ್ಕಿಂತ ಬಹುಮುಖ್ಯವಾಗಿ ನಾವು ಆದ್ಯಾತ್ಮಿಕ ಚಿಂತನೆಯನ್ನು ಮಾಡುತ್ತಿಲ್ಲ, ದೇವರು ಧರ್ಮದ ಅವಶ್ಯಕತೆ ಬೇಡ ವಾಗಿದೆ. ಆದರೆ ನಮ್ಮ ಕಷ್ಟಗಳು ಆನಾ ರೋಗ್ಯದ ಬಗ್ಗೆ ಶಿವನ ಬಳಿ ಹೋಗಿ ನಿಷ್ಠೇಯಿಂದ ಪ್ರಾರ್ಥನೆ ಭಕ್ತಿ ಪೂರ್ವಕ ವಾಗಿ ಪ್ರಾರ್ಥನೆ ಸಲ್ಲಿಸಬೇಕು. ನಿಸ್ವಾರ್ಥ ರೀತಿಯಲ್ಲಿ ಹೇಳಿಕೊಳ್ಳಬೇಕು. ಆಗ ಆತಪ್ರಸನ್ನನಾಗಿ ನಮ್ಮ ಕಷ್ಟಗಳನ್ನು ಕಂಡು ಮರುಗಿ ಹರಸುತ್ತಾನೆ.
ಇದರಲ್ಲಿ ಎಂದಿಗೂ ಅಹಂಕಾರ ಇರಬಾರ ದು. ಸಂಪೂರ್ಣ ಶರಣಾಗತಿ ಆದಾಗ ಮಾತ್ರ ಸಮಸ್ಯೆ ನಿವಾರಣೆ ಆಗುತ್ತದೆ. ಆದರೆ ಇದಕ್ಕೆ ಬಹುಮುಖ್ಯ ವಾಗಿಬೇಕಾದದು ನಂಬಿಕೆ ಎಂದರು.
ನಮ್ಮ ಎಲ್ಲಾ ಖಾಯಿಲೆಗಳಿಗೆ ಪ್ರಕೃತಿ ಯಲ್ಲಿ ಸಿಧ್ಧಔಷಧಗಳಿವೆ.ಬಹು ಮುಖ್ಯ ವಾಗಿ ನಾವು ಜೀವಿಸುವ ಜೀವನ ಕ್ರಮವನ್ನು ಶಿಸ್ತುಬಧ್ಧ ಮಾಡಿಕೊಳ್ಳ ಬೇಕು.ಉಪವಾಸ ಇತರೆ ಸಂಗತಿ ಗಳನ್ನು ಪಾಲಿಸಿದಾಗ ಸಂಪೂರ್ಣ ರೋಗ ಮುಕ್ತ ಜೀವನ ನಡೆಸಲು ಸಾಧ್ಯ ಇದೆ ಎಂದರಲ್ಲದೆ,
ಆಯುರ್ವೇಧ ಪಧ್ದಿತಿ ಚಿಕಿತ್ಸೆಗೂ ಶರಣರ ವಚನಗಳಲ್ಲಿ ಪ್ರತಿಪಾದಿಸಿದ ಚಿಕಿತ್ಸೆಗಳ ಅಂಶಗಳಿಗೂ ಬಹಳ ಸಾಮ್ಯತೆ ಇದ್ದು ಅವುಗಳು ಬೇರೆ ಬೇರೆಯಲ್ಲ. ಒಂದಕ್ಕೋOದು ಪೂರಕವಾಗಿ ಮೂಲಅಂಶಗಳನ್ನು ಹೊಂದಿದ್ದು, ಅದರಮೇಲೆ ಚಿಕಿತ್ಸೆ ನೀಡಿ ರೋಗಗಳನ್ನು ಗುಣಪಡಿಸ ಲಾಗುತ್ತದೆ ಎಂದರು.
ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಗಾಯಿತ್ರಿ ಪಾಟೀಲ್ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಮಲ್ಲಿಕಾಂಬ ವಿರುಪಾ ಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಹೆಚ್.ಎನ್. ಮಹಾರುದ್ರ,ಹೇಮಾವತಿ ಚಿಗಟೇರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾರ್ಷಿಕೋತ್ಸವದ ನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಗಳನ್ನು ವಿತರಿಸಲಾಯಿತು.
ಕದಳಿ ವೇದಿಕೆ ಸದಸ್ಯರುಗಳು ಧ್ಯೇಯ ಗೀತೆ ಹಾಡಿದರು. ಕವಿತಾರಾವ್ ಸ್ವಾಗತಿಸಿದರು. ಗಂಗಾಕುಬ್ಸದ್ ಪ್ರಸ್ತಾವಿಕ ಭಾಷಣ ಮಾಡಿದರು. ವಿಜಯಪ್ರಭ ವಂದನಾರ್ಪಣೆ ಮಾಡಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795
Tags:
Bhadravati News