ಭದ್ರಾವತಿ-ಸಿಲಿಂಡರ್‌ ಸ್ಪೋಟ: ದಂಪತಿಗೆ ಗಂಭೀರ ಗಾಯ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹಳೇನಗರ ಶ್ರೀಕಾಳಿಕಾಂಬ ರಸ್ತೆಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡ‌ರ್ ಸ್ಫೋಟ ಗೊಂಡು ದಂಪತಿ ತೀವ್ರ ಗಾಯ ಗೊಂಡಿದ್ದಾರೆ. 

ಹೊಸಮನೆ ಮುಖ್ಯರಸ್ತೆಯ ಗೋಬಿ ಮಂಚೂರಿ ಅಂಗಡಿ ಮಾಲೀಕ ಕೇಶವ ಅವರು ಮನೆಯಲ್ಲಿ ಘಟನೆ ಸಂಭವಿಸಿದೆ.

 ಅಂಗಡಿಗೆ ಸಾಮಗ್ರಿ ತೆಗೆದುಕೊಂಡು ಹೋಗುವ ಮುನ್ನ ಮನೆಯ ಬಚ್ಚಲಿನಲ್ಲಿದ್ದ ಸಿಲಿಂಡರ್‌ನ್ನು ಆನ್‌ ಮಾಡಿದಾಗ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. ಗಾಯಗೊಂಡ ಕೇಶವ ಮತ್ತು ಅವರ ಪತ್ನಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಮನೆಯಲ್ಲಿದ್ದ ಗೃಹೋಪ ಯೋಗಿ ವಸ್ತುಗಳು ಬೆಂಕಿಗಾಹುತಿ ಯಾಗಿವೆ. ಸ್ಥಳಕ್ಕೆ ಆಮಿಸಿದ ಅಗ್ನಿಶಾಮಕದಳ ಮುಖ್ಯಾಧಿಕಾರಿ ವಸಂತ ಕುಮಾ‌ರ್ ನೇತೃತ್ವದಲ್ಲಿ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು