ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಕನ್ನಡ ನಾಡು, ಭಾಷೆ, ನುಡಿ ಪರಂಪರೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿ, ಅನ್ಯ ಭಾಷಿಕರಿಗೆ ಕನ್ನಡ ಕಲಿಸಿಕೊಡುವ ಹಾಗೂ ಕನ್ನಡ ದಲ್ಲಿ ವ್ಯವಹರಿಸುವಂತೆ ಮಾಡುವ ಪ್ರಯತ್ನ ಮಾಡಬೇಕಾಗಿದೆ ಎಂದು ತಿಳಿಸಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿ ಪ್ರಕಾಶ್ ಮಾತನಾಡಿ, ವ್ಯವಹಾರಿಕ ವಾಗಿ ಇಂಗ್ಲಿಷ್, ಹಿಂದಿ, ಇತರ ಭಾಷೆ ಗಳನ್ನು ಕಲಿಯುವುದರ ಜತೆಗೆ ಕನ್ನಡ ಭಾಷೆಯ ಅವಶ್ಯಕತೆ ಹಾಗೂ ಮಹತ್ವ ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಗಂಗಾ ಯೋಗ ಕೇಂದ್ರದ ಸಂಸ್ಥಾಪಕ ಕಾರ್ಯಾಧ್ಯಕ್ಷ, ಯೋಗಾಚಾರ್ಯ ಡಾ. ಸಿ.ವಿ. ರುದ್ರಾರಾಧ್ಯ ಮಾತನಾಡಿ, ಕನ್ನಡದ ಏಕೀಕರಣಕ್ಕಾಗಿ ಅನೇಕ ಮಹನೀಯರು ದುಡಿದಿದ್ದು, ಅವರ ಕೊಡುಗೆಗಳನ್ನು ನೆನೆಸಿಕೊಳ್ಳಬೇಕು.
ಇಂದಿನ ಯುವ ಜನತೆಗೆ, ವಿಶೇಷವಾಗಿ ಮಕ್ಕಳಿಗೆ ಕನ್ನಡ ಭಾಷೆಯ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿ ಕಲಿಸ ಬೇಕು. ಭಾಷೆ ಪರಂಪರೆಯನ್ನು ಮುಂದುವರಿಸಲು ಪ್ರೇರೇಪಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಶ್ರೀ ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆ ಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಎಲ್ಲ ಯೋಗಭ್ಯಾಸಿ ಗಳಿಂದ ಕನ್ನಡ ನಾಡಗೀತೆ ಹಾಗೂ ಇತರ ಕನ್ನಡ ಗೀತೆಗಳ ಸಾಮೂಹಿಕ ಗಾಯನ ನಡೆಯಿತು.
ಜಿ.ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿ, ಮಹೇಶ್ ಸ್ವಾಗತಿಸಿದರೆ, ನರಸೋಜಿ ರಾಯರು ವಂದಿಸಿದರು.
ರಾಘವ ಶಾಖೆ ಶಿಕ್ಷಕರಾದ ಜಿ.ಎಸ್.ಓಂಕಾರ್, ವೈ.ಎಸ್.ವಿಜಯ ಕೃಷ್ಣ, ಎಚ್.ಕೆ.ಹರೀಶ್, ಕಾಟನ್ ಜಗದೀಶ್, ಸುಜಾತಾ ಮಧುಕೇಶ್ವರ್, ಗಾಯತ್ರಿ ಅಶೋಕ್, ಜಿ.ಶ್ರೀನಿವಾಸ್, ಶಶಿಧರ್ ಸೇರಿದಂತೆ 40 ಯೋಗಾ ಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಯೋಗಬಂಧುಗಳಿಂದ ಕನ್ನಡ ಗೀತೆಗಳ ಗಾಯನ ನಡೆಯಿತು.
Tags:
ಶಿವಮೊಗ್ಗ ವರದಿ