ಕನ್ನಡ ಉತ್ಸವಗಳು ಸ್ವಾಭಿಮಾನದ ಸಂಕೇತವಾಗಿ ಆಚರಿಸಬೇಕು:ಡಾಲು ರವಿ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ನಾಡಿನಲ್ಲಿ ಕನ್ನಡ ಭಾಷಿಕರ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಮುಂದಿನ ಯುವ ಪೀಳಿಗೆಗೆ ಕನ್ನಡ ಅಭಿಮಾನಿ ಹೆಮ್ಮನಹಳ್ಳಿ ಗಂಗೆಗೌಡ ಮಾದರಿ ಯಾಗಿದ್ದಾರೆ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಹೆಮ್ಮನಹಳ್ಳಿ ಗ್ರಾಮದಲ್ಲಿ ಗ್ರಾಮದ ಹಿರಿಯ ಮುಖಂಡ ಹೆಚ್.ಎಸ್ ಗಂಗೇಗೌಡ ನೇತೃತ್ವದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. 

ಮುಂದಿನ ಪೀಳಿಗೆಯ ಯುವಕರಿಗೆ ಹೆಮ್ಮನಹಳ್ಳಿ ಗಂಗೆಗೌಡರು ನೇತೃತ್ವ ದಲ್ಲಿ 24ವರ್ಷಗಳಿಂದ ನಿರಂತರವಾಗಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಯೋಜಿಸಿವ ಮೂಲಕ ಕನ್ನಡ ಮೇಲಿನ ಅಭಿಮಾನವನ್ನು ಇನ್ನು ಗಟ್ಟಿಗೊಳಿಸುವ ಕಾಯಕಕ್ಕೆ ಕನ್ನಡ ಪ್ರೇಮಿ ಗಂಗೆಗೌಡ ಅಪಾರ ಚಿಂತನೆ ನಡೆಸುತ್ತಿದ್ದಾರೆ .ಪ್ರಸ್ತುತ ಇಂಗ್ಲೀಷ್ ಭಾಷೆ ವ್ಯಾಮೋಹದಲ್ಲಿ ಕನ್ನಡ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದೆ. ನಿತ್ಯ ಬಳಸುವ ಅನೇಕ ಪದಗಳು ಕನ್ನಡದಲ್ಲಿ ನುಡಿ ಬೆರಕೆಯಾಗಿವೆ. ಕನ್ನಡ ಉತ್ಸವಗಳು ತೋರಿಕೆಗಷ್ಟೇ ನಡೆಬಾರದು, ಸ್ವಾಭಿಮಾನದ ಸಂಕೇತವಾಗಿ ಆಚರಿಸಬೇಕು ಎಂದರು.

ಕನ್ನಡ ಪ್ರೇಮಿ ಹೆಮ್ಮನಹಳ್ಳಿ ಹೆಚ್.ಎಸ್ ಗಂಗೆಗೌಡ ಮಾತನಾಡಿ ನಮ್ಮ ಗ್ರಾಮದ ಕನ್ನಡ ಪ್ರೇಮಿಗಳು ಹಾಗೂ ಸಮಾಜ ಸೇವಕರ ಸಹಾಯದಿಂದ ಸತತವಾಗಿ 24 ವರ್ಷಗಳಿಂದ ನಮ್ಮ ಮಾತೃಭಾಷೆ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೇವೆ ಮುಂಬರುವ ನಾಡ ಹಬ್ಬವನ್ನು ಅದ್ದೂರಿಯಾಗಿ ಮಾಡಲು ಚಿಂತಿಸಿದ್ದೇವೆ ಆದರೆ ನಾವು ಕನ್ನಡ ಹಬ್ಬದ ಆಚರಣೆಗೆ ಸಿಮಿತರಾಗ ಬಾರದು.ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿ ಕನ್ನಡ ನಾಡು ನುಡಿ ಚಿಂತನೆ ಭಾಷಾ ಶಿಕ್ಷಣದ ಬೆಳವಣಿಗೆಗೆ ಹೆಚ್ಚು ಹೊತ್ತು ಮಾಧ್ಯಮಗಳ ಮುಖಾಂತರ ಮಕ್ಕಳಲ್ಲಿ ಶಿಕ್ಷಣದ ಮಹತ್ವ ಹೆಚ್ಚೆಚ್ಚು ಬರುವಂತೆ ಆದ್ಯತೆ ನೀಡುವ ಮುಖಾಂತರ ಭಾಷಾ ಬಲ ವರ್ಧನೆಗೆ ಪ್ರೇರಣೆಯಾಗಬೇಕು ಎಂದರು.

ಬಳಿಕ ಮಾತನಾಡಿದ ಸಮಾಜ ಸೇವಕ ಆರ್. ಟಿ ಓ ಮಲ್ಲಿಕಾರ್ಜುನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗಂಜೀಗೆರೆ ಮಹೇಶ್ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ನಮ್ಮ ಭಾಷೆಗೆ ಏಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಭಾಷಾವಾರು ಪ್ರಾಂತ್ಯವಾಗಿ ಉದಯಿಸಿ, ಭೌಗೋಳಿಕ ಹಾಗೂ ಸಾಂಸ್ಕೃತಿಕ ವಾಗಿ ವಿಶಿಷ್ಠತೆ ಹೊಂದಿದೆ. ಸಂಸ್ಕೃತಿ ಮತ್ತು ಕಲೆಗಳಿಂದ ನಾಡು ಶ್ರೀಮಂತ ಗೊಂಡಿರುವ ಕನ್ನಡ ಭಾಷೆಯ ಉಳಿವಿಗೆ ಇಳಿ ವಯಸ್ಸಿನಲ್ಲೂ ಗಂಗೆಗೌಡರು ಕನ್ನಡದ ಮೇಲೆ ಇಟ್ಟಿರುವ ಅಪಾರ ಪ್ರೇಮಕ್ಕೆ ನಮಗೆಲ್ಲರಿಗೂ ಸ್ಪೂರ್ತಿಯಾಗಿ ಯುವಕರಿಗೂ ಮಾದರಿಯಾಗಿದ್ದಾರೆ ತಿಳಿಸಿದರು.

ಕನ್ನಡದ ಇತಿಹಾಸದ ಬಗ್ಗೆ ಶಾಲಾ ಮಕ್ಕಳು ಏಕ ಅಭಿನಯ ಪಾತ್ರ ಹಾಗೂ ಕನ್ನಡ ಪರಂಪರೆಯ ಇತಿಹಾಸವುಳ್ಳ ಭಾವಗೀತೆ,ಭಕ್ತಿಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.

ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಜಯರಂಗಣ್ಣ ,ಗ್ರಾ.ಪಂ ಮಾಜಿ ಸದಸ್ಯ ಹೆಚ್.ಜಿ ಕೃಷ್ಣಗೌಡ,ಮುಖಂಡ ಹೆಚ್.ಜೆ ರವಿ,ಶಿಕ್ಷಕ ಮದೆವ್,ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ತಮ್ಮಣ್ಣ, ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಸೇನೆ ಅಧ್ಯಕ್ಷ ಸಮೀರ್,ಆಟೋ ಘಟಕದ ಅಧ್ಯಕ್ಷ ವಾಸು, ಪ್ರಧಾನ ಕಾರ್ಯದರ್ಶಿ ಸಂತೆಬಾಚಹಳ್ಳಿ ಮಂಜುನಾಥ್, ಕಾರ್ಮಿಕ ಘಟಕದ ಅಧ್ಯಕ್ಷ ದಯಾನಂದ ರಾವ್, ಆಟೋ ಜಾವಿದ್, ಆಟೋ ಹಜ್ಜು,ಸೇರಿದಂತೆ ಹೆಮ್ಮನಹಳ್ಳಿ ಗ್ರಾಮಸ್ಥರಿದ್ದರು.

*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು