ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕಳುವಾಗಿದ್ದ ದ್ವಿಚಕ್ರ ವಾಹನದ ಪತ್ತೆಗೆ ಬೆನ್ನುಹತ್ತಿದ ಪೊಲೀಸರಿಗೆ 10 ದ್ವಿಚಕ್ರ ವಾಹನ ಪತ್ತೆಯಾಗಿದೆ. ದ್ವಿಚಕ್ರ ವಾಹನ ಕದ್ದ ಕಳ್ಳ ಮತ್ತು ಕದ್ದವಾಹನವನ್ನ ಮಾರಾಟ ಮಾಡಲು ಸಿದ್ದವಾಗಿದ್ದ ಗುಜರಿ ವ್ಯಾಪಾರಿ ಯನ್ನ ಪೊಲೀಸರು ಬಂಧಿಸಿದ್ದಾರೆ.
ಜೂ.4 ರಂದು ಅಂತರಗಂಗೆ ವಾಸಿ ಷಣ್ಮುಖಪ್ಪ ಎಸ್(60) ತಮ್ಮ ಬಜಾಜ್ CT-100 ಬೈಕ್ ನ್ನು ನಗರದ ಬಿಳಕಿ ಕ್ರಾಸ್ ಹತ್ತಿರ ರೇಣುಕಾಂಬ ರೆಸ್ಟೋರೆಂಟ್ ಮುಂದೆ ನಿಲ್ಲಿಸಿ, ಕೆಲಸ ಮುಗುಸಿಕೊಂಡು ಬಂದಾಗ ಅವರ ವಾಹನ ಕಳ್ಳತನ ವಾಗಿದೆ. ಪ್ರಕರಣ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಅಡಿಷನಲ್ ಎಸ್ಪಿಗಳಾದ ಅನೀಲ್ ಕುಮಾರ್ ಭೂಮರೆಡ್ಡಿ ಮತ್ತು ಕಾರಿಯಪ್ಪ ಎ.ಜಿ.ರವರ ಮಾರ್ಗ ದರ್ಶನದಲ್ಲಿ, ಭದ್ರಾವತಿ ಡಿವೈಎಸ್ಪಿ ನಾಗರಾಜ್ ರವರ ಮೇಲ್ವಿಚಾರಣೆ ಯಲ್ಲಿ , ನಗರ ವೃತ್ತ ಡಿವೈಎಸ್ಪಿ ಶ್ರೀಶೈಲ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಟಿ ರಮೇಶ ಮತ್ತು ಎಎಸ್ಐ ಟಿ.ಪಿ ಮಂಜಪ್ಪ ಹಾಗೂ ಸಿಬ್ಬಂದಿಗಳಾದ ಸಿಹೆಚ್ ಸಿ ನವೀನ, ಸಿಪಿಸಿ ಪ್ರಸನ್ನ ಮತ್ತು ರಘು ಬಿ ಎಂ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ತನಿಖಾ ತಂಡವು ದಿನಾಂಕಃ-28-11-2024 ರಂದು ಪ್ರಕರಣದ ಆರೋಪಿ 1) ನವೀನ ಕುಮಾರ್ ಎಂ ಬಿ, (32), ಎಲೆಕ್ಟ್ರಿಷಿಯನ್ ಕೆಲಸ, ಸುಗ್ಗಿಹಳ್ಳಿ ಹತ್ತಿರ, ಕೋಟೆ ಅಗ್ರಹಾರ ಸರ್ಕಲ್, ಚಿಕ್ಕಮಗಳೂರು ಟೌನ್ ಮತ್ತು 2) ಉಮ್ಮರ್ ಬೇಗ್, (26) ವರ್ಷ, ಗುಜರಿ ವ್ಯಾಪಾರ, ಬಸ್ ಸ್ಟ್ಯಾಂಡ್ ಎದುರು ವೀರಾಪುರ ಗ್ರಾಮ ಇವರುಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಆರೋಪಿತರನ್ನು ವಿಚಾರಣೆ ಗೊಳಪಡಿಸಿ ದಾಗ ಆರೋಪಿ ನವೀನ ಈತನು ಭದ್ರಾವತಿ ಟೌನ್ ವ್ಯಾಪ್ತಿ ಯಲ್ಲಿ ಒಟ್ಟು 10 ಬೈಕ್ ಗಳನ್ನು ಕಳ್ಳತನ ಮಾಡಿದ್ದು, ಅದರಲ್ಲಿ 07 ಬೈಕ್ ಗಳನ್ನು, ಪ್ರಕರಣದ ಇನ್ನೊಬ್ಬ ಆರೋಪಿ ಗುಜುರಿ ವ್ಯಾಪಾರಿ ಉಮ್ಮರ್ ಬೇಗ್ ನಿಗೆ ಮಾರಾಟ ಮಾಡಿರುವುದು ತಿಳಿದು ಬಂದಿರುತ್ತದೆ.
ನ್ಯೂಟೌನ್ ಪೊಲೀಸ್ ಠಾಣೆಯ 06, ಹಳೇನಗರ ಪೊಲೀಸ್ ಠಾಣೆಯ 03 ಮತ್ತು ಹೊಸಮನೆ ಪೊಲೀಸ್ ಠಾಣೆಯ 01 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 10 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ, ಆರೋಪಿತ ರಿಂದ ಅಂದಾಜು ಮೌಲ್ಯ 55 ಸಾವಿರ ರೂಗಳ ಒಟ್ಟು 3 ದ್ವಿ ಚಕ್ರ ವಾಹನ ಗಳನ್ನು ಮತ್ತು 7 ದ್ವಿಚಕ್ರ ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡಿಗಳಿಸಿದ್ದ ರೂ 2,10 ಸಾವಿರ ನಗದು ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 60 ಸಾವಿರ ರೂಗಳ ಪಲ್ಸರ್ ಬೈಕ್ ಸೇರಿ ಒಟ್ಟು 3,25 ಸಾವಿರ ರೂಗಳ ಮಾಲನ್ನು ವಶಕ್ಕೆ ಪಡಿಸಿಕೊಳ್ಳ ಲಾಗಿರುತ್ತದೆ.
ತನಿಖಾ ತಂಡದ ಉತ್ತಮ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
Tags:
ಭದ್ರಾವತಿ ಕ್ರೈಂ ನ್ಯೂಸ್