ರಕ್ತದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ : ಎನ್. ಮಂಜುನಾಥ್

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಎಲ್ಲಾ ದಾನಗಳಿಗಿಂತ ರಕ್ತದಾನ ತುಂಬಾ ಶ್ರೇಷ್ಠವಾದ ದಾನ ಎಂದು ಕ್ರಾಂತಿದೀಪ ಸಂಪಾದಕ ಎನ್. ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ವಜ್ಞನಗರದ ಇನ್ನ ವೇಟಿವ್ ಕೇಡ್ಡೋಸ್ ಪೂರ್ವ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳ ಲಾದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

 ಈ ಕೆಡ್ಡೂಸ್ ಶಾಲೆ ಆಟ ಪಾಠ ಶಿಕ್ಷಣದ ಜೊತೆಗೆ ಸಮಾಜಮುಖಿ ಕೆಲಸಗಳಿಗೆ ಸಾಕ್ಷಿಯಾಗಿದ್ದು ಇದರ ಅಂಗವಾಗಿ ಇಂದು ಪೋಷಕರಿಗೆ ಮತ್ತು ನಾಗರೀಕರಿಗೆ ಹಮ್ಮಿಕೊಳ್ಳ ಲಾದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಿದ ಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರಿಗೆ ಮತ್ತು ಪೋಷಕರಿಗೆ ಅಭಿನಂದನೆ ಸಲ್ಲಿಸಿದರು.

ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಶ್ರೇಷ್ಠ ಕಾರ್ಯ ಆಗುತ್ತದೆ. ಆರೋಗ್ಯವಂತ ರಾಗಿರುವ ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದು ತಿಳಿಸಿದರು. ಇದೇ ಸಂದರ್ಭ ದಲ್ಲಿ ಪೋಷಕರಾದ ಶರತ್ ರಾಜ್ ಯೋಗೀಶ್ ವಿನೋದ್ ಪ್ರಥಮ ಬಾರಿಗೆ ರಕ್ತದಾನ ಮಾಡಿ ದೀಪ ಬೆಳಗಿಸಿದರು. 

ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ.ವಿಜಯ್‌ ಕುಮಾರ್ ಮಾತನಾಡಿ, ಎಲ್ಲ ದಾನಗಳಿ ಗಿಂತ ರಕ್ತದಾನ ಶ್ರೇಷ್ಠ. ರಕ್ತದಾನ ಮಾಡುವುದರಿಂದ ನಮ್ಮ ದೇಹದ ಆರೋಗ್ಯ ಸದೃಢ ಆಗುತ್ತದೆ. ಅನೇಕ ರೀತಿಯಲ್ಲಿ ಉಪಯೋಗವಾಗುತ್ತದೆ. ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.

116 ಬಾರಿ ರಕ್ತ ದಾನ ಮಾಡಿದ ರಕ್ತದಾನಿ ಧರಣೇಂದ್ರ ದಿನಕರ್ ಮಾತನಾಡಿ, ಪ್ರತಿ ನಾಲ್ಕು ತಿಂಗಳಿ ಗೊಮ್ಮೆ ರಕ್ತದಾನ ಮಾಡಬಹುದು. ರಕ್ತದ ಬೇಡಿಕೆ ಹೆಚ್ಚಿದ್ದು, ರಕ್ತದಾನ ಶಿಬಿರಗಳಿಂದ ಹೆಚ್ಚಿನ ಉಪಯೋಗ ಆಗುತ್ತಿದೆ. ಹೆಚ್ಚು ಬಾರಿ ರಕ್ತದಾನ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಅವಶ್ಯಕತೆ ಇರುವವರಿಗೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀರೇಖಾ ಬಸವರಾಜ್ ದಂಪತಿಗಳು 116 ಬಾರಿ ರಕ್ತ ದಾನ ಮಾಡಿದ ದಾನಿನ ಧರಣೇಂದ್ರ ದಿನಕರ್ ಅವರನ್ನು ಸನ್ಮಾನಿಸಿ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಪೋಷಕರು ಶಿಕ್ಷಕರು ಸಾರ್ವಜನಿಕರು ರಕ್ತದಾನ ಮಾಡಿದರು ಸಮಾರಂಭದಲ್ಲಿ ಗುರುರಾಜ್. ಸುರೇಶ್. ರಕ್ತದಾನಿ ವಿಜಯಕುಮಾರ್ ವಸಂತ ಹೋಬಳಿದಾರ್ ಮತ್ತಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು