ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕುವೆಂಪು ವಿವಿ ಯಲ್ಲಿ ಭ್ರಷ್ಟಾಚಾರ ಹಾಗೂ ಭ್ರಷ್ಠಾಚಾರದಲ್ಲಿ ಭಾಗಿಯಾದ ಕುಲಸಚಿವರನ್ನ ಅಮಾನತ್ತು ಗೊಳಿಸಿ ಸೂಕ್ತ ತನಿಖೆ ಗೊಳಿಸಬೇಕೆಂದು ಆಗ್ರಹಿಸಿ ವಿವಿ ಆವರಣದಲ್ಲಿ ಎಬಿವಿಪಿ ಪ್ರತಿಭಟನೆ ನಡೆಸಿದೆ.
ದೂರ ಶಿಕ್ಷಣ ಇಲಾಖೆಯಲ್ಲಿ ಪ್ರವೇಶಾತಿಗೆ ಮತ್ತು ಇನ್ನಿತರೆ ನಿರ್ವಹಣೆಗೆ ಎಲ್ ಎಂಎಸ್ ಸಾಫ್ಟ್ ವೇರ್ ಅಳವಡಿಕೆಯಲ್ಲಿ ಭ್ರಷ್ಠಾಚಾರ, ಅಂಕಪಟ್ಟಿ ಮುದ್ರಣದಲ್ಲಿ ಸರ್ಕಾರದ ನಿಯಮಗಳನ್ನ ಬದಿಗೊತ್ತಿ ಖಾಸಗಿ ಯವರಿಗೆ ಗುತ್ತಿಗೆ ನೀಡಿರುವ ಕುಲಪತಿ, ಕುಲಸಚಿವರು ಮತ್ತು ಪರೀಕ್ಷಾಂಗ ಕುಲಸಚಿವರ ವಿರುದ್ಧ ದೂರು ದಾಖಲಾಗಿದ್ದು ಸೂಕ್ತ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾ ರರು ಅಗ್ರಹಿಸಿದರು.
ಕುಲಸಚಿವ ಚಂದ್ರಕಾಂತ್ ಪ್ರಕರಣ, ಯುಯುಸಿಎಂಎಸ್ ತಂತ್ರಾಂಶವನ್ನ ಸರಿಯಾಗಿ ಬಳಸಿಕೊಳ್ಳದೆ ಅಧಿಕಾರಿ ಗಳ ದಿವ್ಯನಿರ್ಲಕ್ಷ ತೋರುತ್ತಿದ್ದಾರೆ. ವಿವಿಯ ವಿದ್ಯಾರ್ಥಿಗಳಿಗೆ ನೈಜ ಅಂಕ ಪಟ್ಟಿ ನೀಡದೆ ತೊಡಕು ಉಂಟಾಗಿ ದ್ದು ಇದನ್ನ ಬಗೆಹರಿದುವಲ್ಲಿ ವಿವಿ ವಿಫಲ ವಾಗಿದೆ. ವಿವಿಯಲ್ಲಿನ ಲ್ಯಾಬ್ ಗಳಲ್ಲಿನ ಉಪಕರಣಗಳ ಕೊರತೆ, ರಾಜ್ಯ ವಿವಿಗಳಲ್ಲಿ ಏಕರೂಪ ವೇಳಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟಿಸಿದೆ.