ಅಧಿವೇಶನಗಳಲ್ಲಿ ಶಾಸಕ- ಸಂಸದರು ಗೌರವಯುತವಾಗಿ ನಡೆದುಕೊಳ್ಳಲು ರಾಷ್ಟ್ರಪತಿಗಳು ಸೂಚಿಸಲಿ: ಶಶಿಕುಮಾರ್ ಎಸ್ ಗೌಡ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ ಸ್ಪೀಕರ್ ಹಾಗೂ ಸಭಾಪತಿ ಯವರುಗಳಿಗೆ ರಾಷ್ಟ್ರಪತಿ ಗಳು ಮಧ್ಯ ಪ್ರವೇಶ ಮಾಡಿ ಅಧಿವೇಶನಗಳಲ್ಲಿ ಶಾಸಕರು ಸಂಸದರು ಗೌರವಯುತವಾಗಿ ನಡೆದು ಕೊಳ್ಳಲು ಸೂಚಿಸುವಂತೆ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಮಾನಗಳಲ್ಲಿ ಲೋಕಸಭೆ,ರಾಜ್ಯಸಭೆ ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ದೇಶದ ರೈತರ ಎಲ್ಲಾ ವರ್ಗದ ನಾಗರಿಕರ ಹಾಗೂ ಉತ್ತಮ ರೀತಿಯ ಚರ್ಚೆಗಳು ಆಗದೆ ಕೇವಲ ವೈಯಕ್ತಿಕ ಹಿತಾಸಕ್ತಿ ಗಳಿಂದ ರಾಜಕಾರಣಿಗಳು ಅಧಿವೇಶನ ನಡೆಯುವ ಸಂದರ್ಭದಲ್ಲಿ ಒಬ್ಬರಿಗೊ ಬ್ಬರು ಜಗಳ ಮಾಡಿಕೊಳ್ಳುವುದು ಬೈದುಕೊಳ್ಳುವುದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಸಾಮಾಜಿಕ ಜಾಲತಾಣ ದಲ್ಲಿ ಹೆಚ್ಚು ಚರ್ಚೆಗಳ ಪಟ್ಟಿರುವ ವಿಚಾರ ವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. 

ಶಾಸಕರ,ಸಂಸದರ ಇಂತಹ ನಡವಳಿಕೆ ಯಿಂದ ದೇಶದ ನಾಗರಿಕರು ತಲೆತಗ್ಗಿಸು ವಂತಾಗಿದೆ. ಪ್ರಜಾಪ್ರಭುತ್ವದ ಭಾರತ ದೇಶದಲ್ಲಿ ಸಂವಿಧಾನದ ಉದ್ದೇಶ ಗಳನ್ನು ಇಂದಿನ ರಾಜಕಾರಣಿಗಳು ಅನುಸರಿಸದೇ ಇರುವುದು ವಿಪರ್ಯಾಸದ ಸಂಗತಿ ಎಂದು ಕಿಡಿಕಾರಿದರು. 

ಬುದ್ಧ,ಬಸವ, ಅಂಬೇಡ್ಕರ್,ಮಹಾತ್ಮ ಗಾಂಧೀಜಿಯವರು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳ ಜನ್ಮ ಪಡೆದ ದೇಶ ನಮ್ಮ ಭವ್ಯ ಭಾರತ.ಆದರೆ ಇಂದಿನ ರಾಜಕಾರಣಿ ಗಳಿಂದ ದೇಶ ಮುಂದುವರೆಯುವುದು ಕಷ್ಟ ಸಾಧ್ಯ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಅಧಿವೇಶನಗಳು ಸಾರ್ವಜನಿಕರ ರೈತರ ದೀನದಲಿತರ ಎಲ್ಲ ಧರ್ಮದವರ ಬದುಕಿಗೆ ಪೂರಕ ವಾಗಿರುವಂತಹ ಚರ್ಚೆ ಆಗಬೇಕೆ ಹೊರತು ಭ್ರಷ್ಟ ರಾಜಕಾರಣಿಗಳ ಕಚ್ಚಾಟದಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿವೇಶನ ನಡೆಯುವ ಸಂದರ್ಭಗಳಲ್ಲಿ ರಾಜಕಾರಣಿಗಳು ಕ್ಷುಲ್ಲಕ ಕಾರಣಕ್ಕೆ ಅಧಿವೇಶನದ ಸಮಯ ವ್ಯರ್ಥ ಮಾಡಿ ಸದನಗಳು ಸರಿಯಾಗಿ ನಡೆಯದಂತೆ ಮಾಡಿದರೆ ಅಂತಹ ರಾಜಕಾರಣಿಗಳೆ ನೇರ ಹೊಣೆ ಹೊತ್ತು ಅಧಿವೇಶನ ನಡೆಯಲು ಆಗುವ ಖರ್ಚು ವೆಚ್ಚಗಳನ್ನು ಸಂಬಂಧ ಪಟ್ಟ ರಾಜಕಾರಣಿಗಳ ಬರಿಸುವಂತಾ ಗಬೇಕೆಂದು ಒತ್ತಾಯಿಸಿದ ಅವರು ಅಂತಹ ರಾಜಕಾರಣಿಗಳ ಸಂಸತ್ ಸದಸ್ಯತ್ವ ವಿಧಾನಸಭೆಯ ಸದಸ್ಯತ್ವ, ವಿಧಾನ ಪರಿಷತ್ತಿನ ಸದಸ್ಯತ್ವಗಳನ್ನು ಸಂಪೂರ್ಣವಾಗಿ ವಜಾ ಮಾಡುವ ಬಗ್ಗೆ ಕಾನೂನು ಜಾರಿಯಾಗಬೇಕು. ಆಗ ಮಾತ್ರ ದೇಶ ಮುಂದುವರೆಯಲು ಸಾಧ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು