ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಚಾಲನೆ

ವಿಜಯ ಸಂಘರ್ಷ
ಭದ್ರಾವತಿ: ಆರೋಗ್ಯ ಇಲಾಖೆವತಿ ಯಿಂದ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮ ಸೋಮ ವಾರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಲಾಯಿತು.

ಜು: 6 ರವರೆಗೆ ತಾಲ್ಲೂಕಿನಾದ್ಯಾಂತ ನಡೆಯಲಿದ್ದು, ತಾಲ್ಲೂಕಿನ 82,967 ಮನೆಗಳ 337570 ಜನಸಂಖ್ಯೆಯನ್ನು ಈ ಆಂದೋಲನ ಕಾರ್ಯಕ್ರಮದಲ್ಲಿ ಸಮೀಕ್ಷೆ ಮಾಡಲಾಗುವುದು.

ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯ ಕರ್ತೆಯರು ಹಾಗೂ ಸ್ವಯಂ ಸೇವಕರನ್ನು ಒಳಗೊಂಡ 293 ತಂಡಗಳಿ0ದ ಮನೆ- ಮನೆ ಸಮೀಕ್ಷೆ ಮತ್ತು ಪರೀಕ್ಷೆ ಕಾರ್ಯ ಕ್ರಮ ಆರಂಭವಾಗಿದ್ದು,ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವ ಮೂಲಕ ಸಂಶಯಾ ತ್ಮಕ ಚರ್ಮರೋಗದ (ಕುಷ್ಠ) ಲಕ್ಷಣ ಗಳಿರುವ ವ್ಯಕ್ತಿಗಳು ಪರೀಕ್ಷೆ ಮಾಡಿಸಿ ಕೊಂಡು ಕುಷ್ಠರೋಗ ಪತ್ತೆ ಹಚ್ಚುವಲ್ಲಿ ಸಹಕರಿಸು ವಂತೆ ತಾಲ್ಲೂಕು ಆರೋಗ್ಯಾ ಧಿಕಾರಿ ಡಾ: ಎಂ.ವಿ. ಅಶೋಕ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ:ಶಿವಪ್ರಕಾಶ್, ಡಾ: ರಶ್ಮಿ, ಡಾ: ಮಯೂರಿ, ಡಾ: ಕಿರಣ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಾ ಬಾಯಿ, ಆನಂದ ಮೂರ್ತಿ, ಜಿಲ್ಲಾ ಕಛೇರಿಯ ಉಮೇಶ್, ಮಧು, ಮೋಹನ್,ಹಾಲೇಶ್ ಮುಂತಾದವರು ಹಾಜರಿದ್ದರು. 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :+919743225795 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು