ನೆಟ್‌ವರ್ಕ್ ಸಮಸ್ಯೆ:ಆಧಾರ್ ಕಾರ್ಡ್ ಸರಿಪಡಿಸಲು ಜನರು ಕ್ಯೂ

ವಿಜಯ ಸಂಘರ್ಷ
ಸಾಗರ : ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 30 ಗ್ರಾಮ ಪಂಚಾಯತಿಗಳಿವೆ ಆದರೆ ಮೂರು ಕ್ಷೇತ್ರಗಳಲ್ಲಿ ನಗರ ಮತ್ತು ರಿಪ್ಪನ್‌ ಪೇಟೆ ನಾಡ ಕಛೇರಿ ಗಳಲ್ಲಿ ಆಧಾರ್ ಕಾರ್ಡ್ ನೋಂದಣಿ ಮತ್ತು ಲೋಪಗಳನ್ನು ಸರಿಪಡಿಸುತ್ತಿ ದ್ದರೂ ನೆಟ್‌ವರ್ಕ್ ಸೇವೆ ಇಲ್ಲದೆ ಹೊಸನಗರ ತಾಲ್ಲೂಕು ಕಛೇರಿಗೆ ಜನರು ಬರುತ್ತಿದ್ದಾರೆ.

ತಾಲ್ಲೂಕು ಕಛೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಆಧಾರ್ ಕಾರ್ಡ್ ಲೋಪ ಸರಿಪಡಿಸುತ್ತಿದ್ದರೂ ಸಂಜೆಯವರೆಗೆ 25 ಆಧಾರ್ ಕಾರ್ಡ್ ಲೋಪ ಸರಿಪಡಿಸುವುದು ಕಷ್ಟಕರ ವಾಗಿದೆ. ಬೆಳಿಗ್ಗೆಯಿಂದ ಸಂಜೆಯ jjiವರೆಗೆ ಸುಮಾರು ನೂರಾರು ಜನ ಆಧಾರ್ ಕಾರ್ಡ್ ಸರಿಪಡಿಸಲು ಜನರು ಕಾದು ಕಾದು ಸುಸ್ತಾಗಿ ಮನೆಗೆ ಮರಳು ತ್ತಿದ್ದಾರೆ. ಇದರಿಂದ ಜನರಿಗೆ ಬಹಳ ತೊಂದರೆಯಾಗುತ್ತಿದೆ ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕಾದರೆ ಹೊಸನಗರ ತಾಲ್ಲೂಕಿನ 30 ಗ್ರಾಮ ಪಂಚಾಯತಿ ಮಟ್ಟದಲ್ಲಿ 30 ಆಧಾರ್ ನೋಂದಣಿ ಆರಂಭಿಸಿ ತಾಲ್ಲೂಕಿನ ಜನರ ಕಷ್ಟಗಳನ್ನು ಬಗೆ ಹರಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ +919743

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು