ಶಿಕಾರಿಪುರದಲ್ಲಿ ಸಾರ್ವಜನಿಕರ ಸಮಸ್ಯೆ ಗಳಿಗೆ ಸ್ಪಂದಿಸುವಲ್ಲಿ ತಾ..ಮುಂದು ನಾ..ಮುಂದು....?

ವಿಜಯ ಸಂಘರ್ಷ
ಶಿಕಾರಿಪುರ: ತಾಲೂಕಿನ ಜನರ ಸಮಸ್ಯೆ ಆಲಿಸಲು ಜನಪ್ರತಿನಿಧಿಗಳು ಕೈಗೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿದ್ದೇವೆ, ಆದರೆ ಈಗ ಶಿಕಾರಿಪುರದ ಹಾಲಿ ಬಿಜೆಪಿ ಶಾಸಕ ಬಿ. ವೈ.ವಿಜಯೇಂದ್ರ, ಪರಾಜಿತ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ, ಕಾಂಗ್ರೆಸ್ ಮುಖಂಡ ಗೋಣಿ ಮಾಲತೇಶ್, ಹುಲ್ಮಾರ್ ಮಹೇಶ್, ಉಳ್ಳಿ ದರ್ಶನ್ ಕ್ಷೇತ್ರದಲ್ಲಿ ಎಲ್ಲಿಯೇ ಸಮಸ್ಯೆ ಆದರೂ ಸ್ಥಳಗಳಿಗೆ ತಕ್ಷಣ ಭೇಟಿ ನೀಡಿ ಪರಿಹರಿ ಸುವ ಕೆಲಸದಲ್ಲಿ ತೊಡಗಿದ್ದಾರೆ. ಇದು ತಾಲೂಕಿನಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಿದೆ.

ಶಿಕಾರಿಪುರ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದ ಶಾಸಕ ಜನಪ್ರತಿನಿಧಿ ( ಬಿ.ಎಸ್. ಯಡಿ ಯೂರಪ್ಪ ) ಈ ಹಿಂದೆ ಬೆಂಗಳೂರು ಸೇರುತ್ತಿದ್ದರು ರಾಜ್ಯ ರಾಜಕಾರಣದಲ್ಲಿ ತೊಡಗುತ್ತಿದ್ದರು ಹಿಂದಿನ ಶಾಸಕರ ಆಪ್ತ ಸಹಾಯಕರು ಗುರುಮೂರ್ತಿ ತಾಲೂಕಿನಲ್ಲಿ ಶಾಸಕರ ಆಡಳಿತ ನಡೆಸುತ್ತಿದ್ದರು.

ಜನರು ಸಮಸ್ಯೆಗಳನ್ನು ಹೊತ್ತುಕೊಂಡು ಶಾಸಕರ ಮನೆ ಅಲೆಯುತ್ತಿದ್ದರು ಕಾಡಿ ಬೇಡಿ ಅಲೆದು ಅಲೆದು ಶಾಸಕರ ಅನುಪ ಸ್ಥಿತಿಯಲ್ಲಿ ಕಷ್ಟದಲ್ಲಿರುವವ ಬಿಜೆಪಿ ಯವನ? ಕಾಂಗ್ರೆಸ್ ನವನ? ಎಂದು ಮುಖ ನೋಡಿ ಮಣೆ ಹಾಕುವ ಕಾಲವೊಂದಿತ್ತು. ಇದು 2023ರ ವಿಧಾನಸಭಾ ಚುನಾವಣೆ ಯಲ್ಲಿ ತಂದೆ ಮಾಜಿ ಮುಖ್ಯಮಂತ್ರಿ ಆಗಿ ರಾಜ್ಯದ ಮಾಸ್ ಲೀಡರ್ ಆಗಿದ್ದರೂ ಸಹ . ಸಂಸದ ಬಿ. ವೈ.ರಾಘವೇಂದ್ರ ಜನಪರ ಕಾಳಜಿ ಉಳ್ಳರಾಗಿದ್ದರೂ ಕೂಡ ಸ್ಥಳೀಯ ರೊಂದಿಗಿನ ಒಡನಾಟ ಕಡಿಮೆ ಮಾಡಿ ಕೊಂಡು ಆಪ್ತ ಸಹಾಯಕರಿಗೆ ಹೆಚ್ಚಿನ ಜವಾಬ್ದಾರಿ ಕೊಟ್ಟ ಪರಿಣಾಮವಾಗಿ ಚುನಾವಣೆಯಲ್ಲಿ ಪ್ರಯಾಸವಾಗಿ ಗೆಲ್ಲ ಬೇಕಾಯಿತು. ತಾಲೂಕಿನಲ್ಲಿ ಅಭಿವೃದ್ಧಿ ಮಾಡಿದ್ದರೂ ಕೂಡ ಗೆದ್ದ ಮೇಲೆ ಇವರು ಜನಸಾಮಾನ್ಯರ ಕೈಗೆ ಸಿಗುವುದಿಲ್ಲ ಎಂಬ ಆರೋಪಗಳು ಪ್ರತಿಪಕ್ಷಗಳದಾಗಿತ್ತು. ಆದರೆ ಇದೆಲ್ಲವನ್ನೂ ಸುಳ್ಳು ಮಾಡಿ ಜನ ಸಾಮಾನ್ಯರಲ್ಲಿ ನೂತನ ಶಾಸಕ ಬಿ.ವೈ. ವಿಜಯೇಂದ್ರ ಸಾರ್ವಜನಿಕರೊಡನೆ ಬೆರೆಯುವ ಮೂಲಕ ಎಲ್ಲಿಯೇ ಅನಾ ಹುತ ಆದರೂ ಕೂಡಲೇ ಆ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಆಲಿಸಿ, ಪಕ್ಷಬೇಧ ಜಾತಿಭೇದ ತೋರಿಸದೆ ಪರಿಹಾರ ದೊರಕಿಸಿ ಕೊಡುತ್ತಿರುವುದು, ಎಲ್ಲಾ ಜನರೊಂದಿಗೆ ಸ್ಪಂದಿಸುತ್ತಿರುವುದು, ತಾಲೂಕಿನ ಜನರಲ್ಲಿ ಅಭಿಮಾನ ಹಾಗೂ ಯುವ ನಾಯಕನ ಮೇಲೆ ಭರವಸೆ ಮೂಡಿಸುತ್ತಿದೆ. ಜನರ ಬಳಿ ಹೋಗಿ ಸಮಸ್ಯೆ ಆಲಿಸುತ್ತಿರುವ ಶಾಸಕರು ಸಹೋದರ ರಾಘವೇಂದ್ರ ರವರೊಂದಿಗೆ ಬಿಜೆಪಿ ಪಕ್ಷ ಬಲಗೊಳಿಸುತ್ತಿದ್ದಾರೆ.

ಶಿಕಾರಿಪುರ ವಿಧಾನಸಭಾಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾಗರಾಜ್ ಗೌಡ, ಕಾಂಗ್ರೆಸ್ ಪಕ್ಷದ ಕೈ ಟಿಕೇಟ್ ತಪ್ಪಿದ್ದರು ಕೂಡ ಕಾಂಗ್ರೆಸ್ ಪಕ್ಷದ ಮತದಾರರನ್ನು ಸೆಳೆಯಲು ಸಫಲರಾಗಿ ಕ್ಷೇತ್ರದ ಯುವಕರನ್ನು, ಹಿರಿ, ಕಿರಿಯರನ್ನು ಗೌರವಿಸುವುದರೊಂದಿಗೆ ಗೆಲ್ಲುವ ಕುದುರೆ ಯಂತೆ ಪೈಪೋಟಿಗಿಳಿದು ಪರಾಜಿತ ರಾದರೂ ಕೂಡ ರಾಜಕಾರಣದಿಂದ ಹಿಂದೆ ಸರಿಯದೇ ಕ್ಷೇತ್ರದ ಮೂಲೆ ಮೂಲೆಯಲ್ಲಿ ಯೂ ಕೂಡ ಮತದಾರರ ಸಾರ್ವಜನಿಕರ ಉತ್ತಮ ಒಡನಾಟ ಸಂಪರ್ಕ ಹೊಂದಿ ಈಗಲೂ ಜನಸಾಮಾನ್ಯರ ಕಷ್ಟ ಸುಖ ಗಳಿಗೆ ಸ್ಪಂದಿಸುತ್ತಾ, ಅನಾಹುತ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಆಲಿಸಲು ಸಾರ್ವಜನಿಕರಿಗಾಗಿ ಕಚೇರಿಯನ್ನೇ ಪ್ರಾರಂಭಿಸಿ ಕ್ಷೇತ್ರದಲ್ಲಿ ಎಲ್ಲಾ ಸಮಾಜದವ ರೊಂದಿಗೆ ಉತ್ತಮ ಒಡನಾಟ ಇಟ್ಟು ಕೊಂಡು ಸಕ್ರಿಯರಾಗಿದ್ದಾರೆ.

ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ತಾಲೂಕಿನ ನಾಯಕ ರೊಡನೆ ಸಂಘಟಿಸಿ, ಬಿಜೆಪಿ ಪಕ್ಷ ಸತತ ಅಧಿಕಾರ ನಡೆಸಿದ್ದರು ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳಲು ಸಫಲರಾಗಿದ್ದರು. ಅವರ ಪಕ್ಷ ನಿಷ್ಠೆ ಕಾರ್ಯನಿಷ್ಠೆಗೆ ಎರಡು ಬಾರಿ ಪಕ್ಷದಿಂದ ಟಿಕೆಟ್ ನೀಡಿದ್ದಾರೆ. ಪರಾಜಿತ ರಾದರು ರಾಜ್ಯ ನಾಯಕರೊಂದಿಗೆ, ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.ಈಗ ಹಾಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಹುಲ್ಮಾರ್ ಮಹೇಶ್ ತಾಲೂಕಿನ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಪಕ್ಷ ಸಂಘಟಿಸಲು ಮುಂದಾಗಿದ್ದು ತಾಲೂಕಿ ನಲ್ಲಿ ಎಲ್ಲಿಯೇ ಸಮಸ್ಯೆ ಆದರೂ ಕೂಡ ಆ ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತಿದ್ದು ಜನಸಾಮಾನ್ಯರೊಂದಿಗೆ ಬೆರೆಯುವ ಮೂಲಕ ಕಾಂಗ್ರೆಸ್ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
ಸಾರ್ವಜನಿಕರ ಸಮಸ್ಯೆ ಆಲಿಸಲು ನೂತನ ಕಾಂಗ್ರೆಸ್ ಕಚೇರಿ ಆರಂಭಿಸಲು ಸಕಲ ಸಿದ್ಧತೆ ನಡೆಸಿದ್ದಾರೆ. 2023ರ ವಿಧಾನಸಭೆ ಚುನಾವಣೆಯ ನಂತರ ಶಿಕಾರಿಪುರದಲ್ಲಿ ರಾಜಕೀಯ ಹೊಸ ಬದಲಾವಣೆ ಉಂಟಾ ಗಿದ್ದು ಜನಪ್ರತಿನಿಧಿಗಳು ರಾಜಕೀಯ ನಾಯಕರು ಜನರ ಸಮಸ್ಯೆ ಆಲಿಸಲು, ಪರಿಹರಿಸಲು ತಾ ಮುಂದು ನಾ ಮುಂದು ಎಂದು ಪೈಪೋಟಿಗಿಳಿದಂತಿದೆ. ತಾಲೂಕಿನ ಅಧಿಕಾರಿಗಳಿಗೆ ಎಲ್ಲರ ಮಾತನ್ನು ಕೇಳು ವಂತಾಗಿದ್ದು, ಕೆಲವೊಮ್ಮೆ ಇಕ್ಕಟ್ಟಿಗೆ ಸಿಲುಕಿಕೊಳ್ಳುವ ಪರಿಸ್ಥಿತಿ ಆಗಿದೆ.

ಒಟ್ಟಿನಲ್ಲಿ ಶಿಕಾರಿಪುರ ತಾಲೂಕಿನಲ್ಲಿ ಜನರ ಸಮಸ್ಯೆ ಆಲಿಸಲು ಜನಪ್ರತಿನಿಧಿ ಹಾಗೂ ಪಕ್ಷೇತರರು ಕಾಂಗ್ರೆಸ್ ನಾಯಕರು ನೊಂದ ವರ ಬಳಿ ದಾವಿಸುತ್ತಿರುವುದು ಸಂತಸ ಉಂಟುಮಾಡಿದೆ. ಕಷ್ಟ ಹೇಳಿಕೊಳ್ಳಲು, ಪರಿಹಾರ ಕೊಡಿಸಿರಿ ಎಂದು ಜನಪ್ರತಿ ನಿಧಿಗಳ ಮನೆಗಳಿಗೆ ಅಲೆಯುತ್ತಿದ್ದ ಸಾರ್ವಜನಿಕರ ಮನೆ ಬಾಗಿಲಿಗೆ ಇಂದು ಶಾಸಕರು, ಪಕ್ಷೇತರರು, ಕಾಂಗ್ರೆಸ್ ಮುಖಂಡರು ದಾವಿಸಿ ಬರುತ್ತಿರುವುದು ಕ್ಷೇತ್ರದ ಜನತೆಗೆ ಉತ್ಸಾಹ ತುಂಬಿದೆ. ಇದೇ ರೀತಿ ಕ್ಷೇತ್ರದ ಅಭಿವೃದ್ಧಿಯು ಆಗಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವರದಿ : ಹುಲಿಗಿ ಕೃಷ್ಣ.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು