ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕಿನಲ್ಲಿರುವ ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ನಿಯೋಜನೆ ಗೊಂಡಿರುವ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಥವಾ ನಾಡ ಕಛೇರಿಯಲ್ಲಿ ತಮ್ಮ ಕಚೇರಿಗಳನ್ನು ತೆರೆದು ಕರ್ತವ್ಯ ನಿರ್ವಹಿಸಲು ಸೂಚಿಸುವಂತೆ ಆಗ್ರಹಿಸಿ ಶುಕ್ರವಾರ ಕೆಆರ್ ಎಸ್ ಪಕ್ಷದವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಗ್ರಾಮ ಲೆಕ್ಕಾಧಿಕಾರಿಗಳು ನಗರದಲ್ಲಿ ಕಛೇರಿಗಳನ್ನು ತೆರೆದಿರುವುದರಿಂದ ಸ್ಥಳೀಯ ನಾಗರೀಕರಿಗೆ ಹಾಗೂ ರೈತರಿಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಹುಡುಕುವುದೆ ಒಂದು ಕೆಲಸವಾಗಿದೆ. ಅವರನ್ನು ಹುಡುಕಿಕೊಂಡು ನಗರದ ಕಛೇರಿ ಬಳಿ ಬಂದರು ಅವರವರ ಕಛೇರಿಯಲ್ಲಿಲ್ಲದೆ ಸ್ಥಳ ಪರಿಶೀಲನೆಗೆಂದು ಹೊರಗಡೆ ಇರುವುದಾಗಿ ಕಾರಣ ನೀಡುತ್ತಾರೆ.
ಇದರಿಂದ ಸ್ಥಳೀಯರಿಗೆ ನೆರವಾಗಿ ಸಂಪರ್ಕಕ್ಕೆ ಸಿಗದೆ ಮಧ್ಯವರ್ತಿಗಳ ಮೂಲಕ ಹಣ ವಸೂಲಿ ಹಾಗೂ ಭಷ್ಟಾಚಾರ ನಡೆಸುತ್ತಿದ್ದು ಇದಕ್ಕೆ ಕಡಿವಾಣ ಹಾಕಿ ಸೂಕ್ತ ಕ್ರಮವನ್ನು ಜರುಗಿಸುವಂತೆ ಒತ್ತಾಯಿಸಿದರು.
ಲೆಕ್ಕಾಧಿಕಾರಿಗಳು ಅವರಿಗೆ ನಿಯೋಜನೆ ಗೊಂಡಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಚೇರಿಯನ್ನು ತೆರೆದು ಕಾರ್ಯನಿರ್ವಹಿಸುವಂತೆ ಸೂಚನೆ ಮಾಡಿಕೊಡಬೇಕೆಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸಮೀರ್. ಸಂಘಟನಾ ಕಾರ್ಯದರ್ಶಿ ಪ್ರದೀಪ್, ತಾಲೂಕು ಅಧ್ಯಕ್ಷ ನಾಗರಾಜ್ ರಾವ್, ಯುವ ಘಟಕದ ಅಧ್ಯಕ್ಷ ಅರಳಿಹಳ್ಳಿ ತ್ಯಾಗರಾಜ್ ಕಾರ್ಯದರ್ಶಿ ಚಿಂಪಯ್ಯ, ಸಂಘಟನಾ ಕಾರ್ಯದರ್ಶಿ ರಾಜೇಂದ್ರ, ಮಲ್ಲಿಕಾರ್ಜುನ್ ಸೇರಿದಂತೆ ಹಲವರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795