ವಿಜಯ ಸಂಘರ್ಷ
ಭದ್ರಾವತಿ :ಚುನಾವಣೆ ಮುಗಿದ ಬೆನ್ನಲ್ಲೇ ಭದ್ರಾವತಿಗೆ ಆಗಮಿಸಿದ ಶಾಸಕ ಬಿ. ಕೆ. ಸಂಗಮೇಶ್ವರ್ ರವರನ್ನು ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ನನಗೆ ಪದವಿ ಮುಖ್ಯವಲ್ಲ ಅಭಿವೃದ್ಧಿ ಮುಖ್ಯ, ನನ್ನನ್ನು ಗೆಲ್ಲಿಸಿದ ಸಮಸ್ತ ತಾಲೂಕಿನ ಜನತೆಗೆ ಹಾಗೂ ಸಮಾಜದ ಬಂಧುಗಳಿಗೆ ಕೃತಜ್ಞತೆ ಹೇಳಿದರು.
ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ, ಗ್ರಾಮಾಂತರ ಪ್ರದೇಶಗಳಿಗೆ ಭೇಟಿ, ಪ್ರಗತಿಗಾಗಿ ಜನಪರ ಕಾರ್ಯಕ್ರಮ, ಸಮಾಜದ ಅಭಿವೃದ್ಧಿ, ನಗರದ ಜನತೆಗೆ ಅನುಕೂಲವಾಗುವ ಕಾರ್ಯಗಳನ್ನು ರೂಪಿಸುವುದು ಮತ್ತು ಅಭಿವೃದ್ಧಿಗಾಗಿ ಶ್ರಮಿಸುವುದು, ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಎಲ್ಲ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವುದು ನನ್ನ ಪ್ರಮುಖ ಅಧ್ಯತೆಯಾಗಿದೆ ಎಂದರು. ಮುಂಗಾರು ವಿಳಂಭವಾಗಿರುವ ಕಾರಣ ಕುಡಿಯುವ ನೀರಿಗೆ ಕೊರತೆ ಎದುರಾಗಿದ್ದು ಅದರ ನಿವಾರಣೆಯಾಗಬೇಕು, ಶಿಕ್ಷಣ, ಕೃಷಿ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು, ಜಿಲ್ಲೆಯಲ್ಲಿ ಗಾಣಿಗ ಸಮಾಜದ ಭವನವಾಗಬೇಕಿದೆ ಎಂದರು. ಗುರುವಾರ ಅವರ ನಿವಾಸದಲ್ಲಿ ಗಾಣಿಗ ಸಮಾಜದ ಅಭಿನಂದನಾ ಸ್ವೀಕರಿಸಿ ಮಾತನಾಡಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ ವಿಜಯಕುಮಾರ್ ಶಾಸಕರು ನಮ್ಮ ಗಾಣಿಗ ಸಮಾಜದ ಆಸ್ತಿ ಅವರ ಗೆಲುವು ಸಮಾಜದ ಹೆಮ್ಮೆ, ಅವರು ಇದುವರಿಗೂ ಗಾಣಿಗ ಸಮಾಜದ ಗೌರವ ಅಧ್ಯಕ್ಷ ಸಮಾಜದ ಎಳಿಗೆಗೆ ಶ್ರಮಿಸಿದ್ದಾರೆ, ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿ, ಜಿಲ್ಲೆಯಲ್ಲಿ ಭವನ ನಿರ್ಮಾಣಕ್ಕಾಗಿ ಹಾಗೂ ಎಲ್ಲಾ ಸಮಾಜದ ಸಂಘನೆಯತ್ತ ಗಮನ ಹರಿಸಬೇಕು, ಜಿಲ್ಲೆಯ ಮಾದರಿ ಶಾಸಕರಾಗಿ ಮುಂದುವರಿಯಲಿ ಮತ್ತು ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃಧಿ ಗುರುತಿಸಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಕಾರ್ಯದರ್ಶಿ ಕಿರಣ್ ಸಜ್ಜನ್, ಖಜಾಂಚಿ ರವಿ, ನಿರ್ದೇಶಕರಾದ ಗುರುರಾಜ್, ವಾಗೀಶ್ ಕೋಟಿ, ರವೀಶ್, ಮಹೇಶ್, ಎಸ್.ಸತೀಶ್,ಮಲ್ಲಿಕಾರ್ಜುನ ಕಾನೂರ್, ಪ್ರೊ.ನೀಲಗುಂದ್, ಪ್ರೊ.ಸತೀಶ್, ಭದ್ರಾವತಿ ತಾಲೂಕು ಗಾಣಿಗ ಕ್ಷೇಮಾ
ಭಿವೃದ್ಧಿ ಸಂಘದ ಅಧ್ಯಕ್ಷರು ಆನಂದ್ ಕುಮಾರ್, ಶಿವಾನಂದ ಷಣ್ಮುಕಪ್ಪ, ಮಹದೇವಪ್ಪ, ದೀಪು ಇತರರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ +919743225795
Tags:
MLA Sangameshvar Honner