ವಿಜಯ ಸಂಘರ್ಷ
ಸಾಗರ: ಜೈನ ದಿಗಂಬರ ಮುನಿ ಮಹಾ ರಾಜರ ಭೀಕರ ಹತ್ಯೆ ಖಂಡನೀಯ, ರಾಜ್ಯ ಸರ್ಕಾರ ಹತ್ಯೆ ನಡೆದು 3 ದಿನ ಕಳೆದರೂ ಸರಿಯಾದ ತನಿಖೆ ನಡೆಸದೆ ಕೇವಲ ಹಣ ಕಾಸಿನ ವಿಚಾರಕ್ಕೆ ಎಂದು ಹೇಳುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆರೋಪಿಸಿದರು.
ಅವರು ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬಿ ಜೆ ಪಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆ ಉದ್ದೇಸಿಸಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಮೀಪದ ನಂದಿಪರ್ವತದಲ್ಲಿ ಚಾತುರ್ಮಾಸ ಆಚರಿಸುತ್ತಿದ್ದ ಜೈನ ದಿಗಂಬರ ಮಿನಿ ಯವರನ್ನು ಹತ್ಯೆ ಮಾಡುವ ಮೂಲಕ ಸಮಾಜದ ಶಾಂತಿ ಕದಡುವ ಕೃತ್ಯಕ್ಕೆ ಕೈಹಾಕಿರುವ ದುಷ್ಕರ್ಮಿಗಳ ಬಂಧಿಸಿ ಪ್ರಕರಣ ಬೇದಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ಸನಾತನ ಸಂಸ್ಕೃತಿಯಲ್ಲಿ ಚಾತುರ್ಮಾಸಕ್ಕೆ ಹೆಚ್ಚಿನ ಮಹತ್ವವಿದೆ.೪ ತಿಂಗಳು ಧಾರ್ಮಿಕ ಚಟುವಟಿಕೆಗಳನ್ನು ತೀವ್ರಗೊಳಿಸುವ ಮೂಲಕ ಲೋಕಕಲ್ಯಾಣ ವನ್ನು ಬಯಸುವ ಪರ್ವ ಕಾಲದಲ್ಲಿ ಸಾದು ಸಂತರ ಕೊಲೆ ಮಾಡುವಂತಹ ನೀಚ ಸಂಸ್ಕೃತಿಯನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ +919743225795
Tags:
ಸಾಗರ ಸುದ್ದಿ