ವಿಜಯ ಸಂಘರ್ಷ
ಶಿಕಾರಿಪುರ: ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಶನಿವಾರ ಆಯೋಜಿಸಿದ್ದ “ಸಂಪನ್ಮೂಲ ಸಂರಕ್ಷಣೆ ಯಲ್ಲಿ ಯುವಕರ ಪಾತ್ರ” ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೋ.ಪ್ರಕಾಶ ಕರಿಯಜ್ಜನವರು ಮಾತನಾಡಿ, ಇಂಧನ ಸಂಪನ್ಮೂಲ ಸಂರಕ್ಷಣೆಯ ಬಗ್ಗೆ ಎಳೆ ಎಳೆಯಾಗಿ ತಿಳಿಸಿದರು.
ಸಂಪನ್ಮೂಲವನ್ನು ಅನವಶ್ಯಕ ವಾಗಿ ಹಾಳು ಮಾಡದಂತೆ ಸಂರಕ್ಷಿಸಿ ಮುಂದಿನ ಪೀಳಿಗೆಗೆ ದೊರಕುವಂತೆ ಬಳಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಜಿ.ಆರ್. ಹೆಗಡೆ ಇಂದಿನ ಮಕ್ಕಳು ಸಂಪನ್ಮೂಲ ಗಳನ್ನು ಅನಾವಶ್ಯವಾಗಿ ಬಳಸಿ ಹಾಳು ಮಾಡುತಿದ್ದಾರೆ ಎಂದರು.
ಕುಮದ್ವತಿ ಶಿಕ್ಷಣ ಮಾಹಾವಿದ್ಯಾಲಯ ವಿಭಾಗದ ಪ್ರಾಚಾರ್ಯರಾದ ಡಾ. ಶಿವಕುಮಾರ್ ಜಿ.ಎಸ್ ಮಾತನಾಡಿದರು.
ಐಕ್ಯೂಎಸಿ ಸಂಚಾಲಕರು ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಪರಶುರಾಮ ಟಿ.ಆರ್, ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು. ಪ್ರಾಧ್ಯಾಪಕ ಕೋಟೋಜಿರಾವ್ ಆರ್, ಕಾರ್ತಿಕ್ ಎಸ್. ಎಂ, ಧಾನೇಶ್ವರಿ, ಅಪೂರ್ವ, ಸುರೇಖ, ಪೂರ್ಣಿಮ ಮತ್ತು ಅಶ್ವಿನಿ ಮುಂತಾದವರಿದ್ದು, ಮುಸ್ಕಾನ್ ಸ್ವಾಗತಿಸಿ, ಸಿಂದುರಾಣಿ ನಿರೂಪಿಸಿ, ಬಿ ಬಿ ಸಾಧಿಕಾ ವಂದಿಸಿದರು.
(ವರದಿ ಹುಲಿಗಿ ಕೃಷ್ಣ )
Tags:
ಶಿಕಾರಿಪುರ ವರದಿ