ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಶರತ್‌ಗೆ ಅಂತಿಮ ವಿದಾಯ

ವಿಜಯ ಸಂಘರ್ಷ
ಭದ್ರಾವತಿ :ಉಡುಪಿಯ ಕೊಲ್ಲೂರು ಬಳಿಯ ಅರಿಶಿನಗುಂಡಿ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಭದ್ರಾವತಿ ಮೂಲದ ಶರತ್‌ಗೆ ಸೋಮವಾರ ಹೃದಯಸ್ಪರ್ಶಿ ಅಂತಿಮ ವಿದಾಯ ಹೇಳಲಾಗಿದೆ.

ತಾಲೂಕಿನ ಕೆ.ಎಚ್.ನಗರದಲ್ಲಿರುವ ಶರತ್‌ ಮನೆಯಿಂದ ರುದ್ರಭೂಮಿಗೆ ಹೊರಟ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕುಟುಂಬಸ್ಥರು, ಸಂಬಂಧಿಕರು, ಹಿತೈಷಿಗಳು ಭಾಗಿಯಾಗಿ ಅಂತಿಮ ವಿದಾಯ ಹೇಳಿದರು.

ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆದಿದ್ದು, ಶರತ್‌ ತಂದೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಇದಕ್ಕೂ ಮೊದಲು ತಮಿಳ್ ಗೌಂಡರ್ ಸಂಪ್ರದಾಯದಂತೆ ಶರತ್ ಅವಿವಾಹಿತನಾಗಿದ್ದರಿಂದ ಬಾಳೆಗಿಡಕ್ಕೆ ತಾಳಿ ಕಟ್ಟಿ ಮದುವೆ ಸಂಪ್ರದಾಯ ನೆರವೇರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು