ನಾಡು ನುಡಿ ಉಳಿಸೋಣ ಜಯ ಕರ್ನಾಟಕ ಜನಪರ ವೇದಿಕೆ ಕಟ್ಟೋಣ: ಹುಲಿಗಿ ಕೃಷ್ಣ

ವಿಜಯ ಸಂಘರ್ಷ
ಶಿಕಾರಿಪುರ : ತಾಲೂಕು ಜಯ ಕರ್ನಾಟಕ ಜನಪರ ವೇದಿಕೆಯ ನೂತನ ಪದಾಧಿಕಾರಿ ಗಳ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಹಾಗೂ ತಾಲೂಕು ಕಾನೂನು ಘಟಕದ ವಕೀಲ ರಾಜು ನಾಯ್ಕ್ ರವರ ನೇತೃತ್ವದಲ್ಲಿ ಸಂಸ್ಥಾಪಕ ಅಧ್ಯಕ್ಷ ಗುಣನಂಜನ್ ಶೆಟ್ಟಿ ರವರ ಮಾರ್ಗದರ್ಶನ ಹಾಗೂ ಆದೇಶ ದಂತೆ ತಾಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಮಾತನಾಡಿ ಯುವ ಸಂಸ್ಥಾಪಕ ಅಧ್ಯಕ್ಷ ಗುಣರಂಜನ್ ಶೆಟ್ಟಿ ರವರ ಆದೇಶದಂತೆ ತಾಲೂಕಿನಲ್ಲಿ ಕನ್ನಡ ನಾಡು ನುಡಿ ಉಳಿಸೋಣ ಬನ್ನಿ ಭ್ರಷ್ಟಾಚಾರ ಅಳಿಸೋಣ ಎಂಬ ತತ್ವದ ಅಡಿಯಲ್ಲಿ ಸಂಘಟನೆ ಕಟ್ಟಲಾಗುತ್ತಿದ್ದು, ನೊಂದವರ ಪರವಾಗಿ ಧ್ವನಿ ಎತ್ತುವ ಕೆಲಸ ಆಗಬೇಕಿದ್ದು, ಪಕ್ಷಾತೀತವಾಗಿ ಜಾತ್ಯಾತೀತ ವಾಗಿ ಎಲ್ಲಾ ಸಮಾಜದವರನ್ನು ಒಟ್ಟು ಗೂಡಿಸಿ ನಾಡು ನುಡಿಗೆ ದಕ್ಕೆ ಬಂದಾಗ ಭ್ರಷ್ಟಾಚಾರ ಮಿತಿಮೀರಿದಾಗ ಪ್ರತಿಭಟನೆ ಧರಣಿ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಬೇಕಾಗಿರುತ್ತದೆ. ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಬೆಂಬಲಿ ಸುವ ಮೂಲಕ ಯಾವುದೇ ಪಕ್ಷ ಅಧಿಕಾರಕ್ಕೆ ಬಂದಿರಲಿ ಸಾರ್ವಜನಿಕರ ಸಮಸ್ಯೆಗಳು ಬಂದಾಗ ಸರ್ಕಾರದ ಗಮನ ಸೆಳೆಯಬೇಕಿದೆ ಎಂದರು.

ಈ ಹಿಂದೆ ತಾಲೂಕು ಕಾರ್ಯಾಧ್ಯಕ್ಷರಾಗಿದ್ದ ಶಿವಯ್ಯ ಎನ್ ಶಾಸ್ತ್ರಿ ರವರನ್ನು ನೂತನ ತಾಲೂಕು ಅಧ್ಯಕ್ಷರನ್ನಾಗಿ ಸರ್ವಾನುಮತ ದಿಂದ ಆಯ್ಕೆ ಮಾಡಿ ನೇಮಕ ಮಾಡಲಾಯಿತು.

ಇದೇ ಸಂದರ್ಭದಲ್ಲಿ ತಾಲೂಕು ಹಾಗೂ ನಗರ ಪದಾಧಿಕಾರಿಗಳನ್ನಾಗಿ ಇಮ್ರಾನ್, ಮಾಲತೇಶ್, ಸುರೇಶ್, ಯಮುನಪ್ಪ, ಹುಸೇನ್ ಸಾಬ್, ಕಿರಣ್, ಶಪಿ, ಹನುಮಂತಪ್ಪ ಯಾವ್ಗಲ್, ಮುಕ್ರಂ, ಉಬೈದ್, ನವೀನ್, ಸಲ್ಮಾನ್, ಕಿರಣ್, ಜಾಫರ್ ಸೇರಿದಂತೆ ಸಂಘಟನೆಯಲ್ಲಿ ಸಕ್ರಿಯವಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದವರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಯಿತು.

ಸಮಾಜಸೇವಕ ಪಟ್ಟಣದ ಹುಸೇನ್ ಸಾಬ್ ರವರನ್ನು ತಾಲೂಕು ಗೌರವ ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಿ ಎಸ್ ಎನ್ ಬಾಬು ರವರನ್ನು ಗೌರವ ಸಲಹೆಗಾರರನ್ನಾಗಿ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.

(ವರದಿ ಹುಲಿಗಿ ಕೃಷ್ಣ )

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು