ವಿಜಯ ಸಂಘರ್ಷ
ಭದ್ರಾವತಿ : ಬಿಹಾರಿ ರಾಜ್ಯದ ಮುಖ್ಯ ಮಂತ್ರಿಗಳು ಹಾಗೂ ಜೆಡಿಯು ರಾಷ್ಟ್ರೀಯ ಮುಖಂಡರಾದ ನಿತೀಶ್ ಕುಮಾರ್ ಅವರು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಕೆಲವು ಬಿಜೆಪಿ ಮುಖಂಡರು ಅಸ್ಥಿರ ಪ್ರಧಾನಮಂತ್ರಿ ಯೆಂದು ಲೇವಡಿ ಮಾಡಿರುವುದು ಖಂಡನೀಯ ಎಂದು ಜೆಡಿಯು ಮುಖಂಡ ಶಶಿಕುಮಾರ್ ಎಸ್ ಗೌಡ ಆರೋಪಿಸಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಓರ್ವ ರಾಷ್ಟ್ರ ನಾಯಕರು ಕರ್ನಾಟಕಕ್ಕೆ ಆಗಮಿಸಿದ ಸಂದರ್ಭದಲ್ಲಿ ಕೀಳುಮಟ್ಟದ ನುಡಿಗಳನ್ನಾಡಿ ಹಾಗೂ ಕೆಲವು ಫ್ಲೆಕ್ಸ್ ಗಳನ್ನು ಹಿಡಿದುಕೊಂಡು ಅವಮಾನ ಮಾಡಿರುವುದನ್ನು ಪಕ್ಷದ ಪರವಾಗಿ ಖಂಡನೀಯ ಎಂದಿದ್ದಾರೆ.
ಯಾವುದೇ ಪಕ್ಷದ ಪ್ರಧಾನಿಗಳು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಸುವುದು ಧರ್ಮ ಅದು ಬಿಟ್ಟು ಅಪಮಾನ ಮಾಡುವುದು ಸಲ್ಲದು.
ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಅಗ್ರಹಿಸಿ ಇವರ ವಿರುದ್ದ ಸಿಬಿಐ ತನಿಖೆ ನಡೆಸಲು ಅಗ್ರಹಿಸಿದರು.
Tags:
ಶಶಿಕುಮಾರ್ ಗೌಡ ಸುದ್ದಿ