ಸಮಾಜದ ಋಣವನ್ನು ತೀರಿಸಿ ವಿದ್ಯಾರ್ಥಿ ಗಳಿಗೆ ಎನ್‌ಇಎಸ್ ಅಧ್ಯಕ್ಷ ನಾರಾಯಣ ರಾವ್ ಕರೆ

ವಿಜಯ ಸಂಘರ್ಷ
ಶಿವಮೊಗ್ಗ: ವಿದ್ಯಾಥಿಗಳು ಸಮಾಜದ ಋಣವನ್ನು ತೀರಿಸುವ ಕೆಲಸವನ್ನು ಮಾಡ ಬೇಕೆಂದು ಎನ್ ಇ ಎಸ್ ಸಂಸ್ಥೆಯ ಅಧ್ಯಕ್ಷ  ಜಿ. ಎಸ್. ನಾರಾಯಣರಾವ್ ಹೇಳಿದರು.
ಎಟಿಎನ್‌ಸಿಸಿ ಕಾಲೇಜಿನಲ್ಲಿ  ಶುಕ್ರವಾರ ಜರುಗಿದ ನೇತ್ರದಾನದ ಬಗ್ಗೆ ಉಪನ್ಯಾಸ ಮತ್ತು  ವಿಶ್ವವಿದ್ಯಾಲಯ ಮಟ್ಟದಲ್ಲಿ ಎನ್ ಎಸ್ ಎಸ್ ಪ್ರಶಸ್ತಿ ಪಡೆದವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಎನ್‌ಎಸ್ ಎಸ್ ಮೂಲಕ ವಿದ್ಯಾರ್ಥಿಗಳು ಭವ್ಯ ಭವಿಷ್ಯವನ್ನು ಕಟ್ಟಿಕೊಳ್ಳಬೇಕು. ಸೇವಾ ಸಂಕಲ್ಪ ಮಾಡಬೇಕು.  ಗ್ರಾಮಾಂತರದಲ್ಲಿ ಶಿಬಿರ ಮಾಡುವ ಮೂಲಕ ಅಲ್ಲಿನ ಜನರ ಜೀವನ, ಅವರ ಸ್ಥಿತಿ-ಗತಿ, ಸಮಸ್ಯೆಗಳನ್ನು ಅರ್ಥಮಾಡಿ ಕೊಳ್ಳಬೇಕು. ವಿದ್ಯಾರ್ಥಿ ಜೀವನದ ನಂತರ ನಮ್ಮ ಕಾಲ ಮೇಲೆ ನಾವು ನಿಂತಾಗ  ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎಂದರು.

ಕಣ್ಣು ದಾನ ಮಾಡುವ ಮೂಲಕ ಕತ್ತಲೆ ಯಲ್ಲಿರುವವರಿಗೆ ಬೆಳಕು ಕೊಡಬೇಕು. ಕತ್ತಲೆ ಅಂದರೆ ಭಯ. ಬೆಳಕು ಎಂದರೆ ಧರ‍್ಯ. ಇನ್ನೊಬ್ಬರ ಬಾಳು ಬೆಳಗಲು ಕಣ್ಣು ಬೇಕು. ನೇತ್ರದಾನದಂತಹ ಮಹಾನ್ ಕರ‍್ಯದಲ್ಲಿ ಎಲ್ಲರೂ ಭಾಗಿಯಾಗಬೇಕು. ಇನ್ನೊಬ್ಬರಿಗೆ ಬೆಳಕು ಕೊಡುವುದು ದೊಡ್ಡ ಕೆಲಸ. ಕೇವಲ ಮಾತನಾಡುವುದನ್ನೇ ಸಾಧನೆ ಎಂದುಕೊಳ್ಳದೆ ಇಂತಹ ಮಹತ್ತರ ಕೆಲಸ ಮಾಡಿ ನಮ್ಮತನವನ್ನು ಪ್ರಚುರ ಪಡಿಸಿಕೊಳ್ಳಬೇಕು ಎಂದರು.

ಕಾಲೇಜು ಶಿಕ್ಷಣ  ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ.ಕೆ.ಎ. ವಿಷ್ಣುಮೂರ್ತಿ ಮಾತನಾಡಿ, ಇಂದಿನ ಮಕ್ಕಳಿಗೆ ಯಾವ ವಿಷಯದಲ್ಲೂ ಆಸಕ್ತಿ ಇಲ್ಲ. ಮೊಬೈಲ್ ಅವರ ಜೀವನವಾಗಿದೆ. ಅದರ ಮೂಲಕ ಭಾಷೆಯ ಅಂದವನ್ನು ಹಾಳುಗೆಡವುತ್ತಿದ್ದ್ದಾರೆ. ಪರೀಕ್ಷೆಯಲ್ಲೂ ಮೊಬೈಲ್ ಭಾಷೆಯ ಬಳಕೆಯನ್ನೇ ಮಾಡು ತ್ತಿದ್ದಾರೆ. ಇದನ್ನೆಲ್ಲ ತೊರೆದು ನಮ್ಮ ಮಾತೃ ಭಾಷೆ ಅಥವಾ ರಾಷ್ಟ ಭಾಷೆಯಲ್ಲಿ ಪ್ರೌಢಿಮೆ ಬೆಳೆಸಿಕೊಳ್ಳಬೇಕು ಎಂದರಲ್ಲದೆ, ಎನ್ ಎಸ್ ಎಸ್ ಬದುಕು ಕಟ್ಟಿಕೊಡುತ್ತದೆ.ನಮ್ಮಲ್ಲಿ ಪ್ರಾಮಾಣಿಕತೆ, ಸಮಯ ಪ್ರಜ್ಞೆ, ಕ್ರಿಯಾಶೀಲತೆ ಮತ್ತು ಸರಳ ಜೀವನವನ್ನು ಕಲಿಸುತ್ತದೆ. ಎನ್ನೆಸ್ಸೆಸ್ ಸೇರುವ ಮೂಲಕ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂದು ಅವರು  ಕರೆ ನೀಡಿದರು.

ಶಂಕರ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕಿ ಗಾಯತ್ರಿ ಶಾಂತಾರಾಮ ಮಾತನಾಡಿ, ನೇತ್ರದಾನದ ಬಗ್ಗೆ ಹೆಚ್ಚೆಚ್ಚು ಜನರನ್ನು ಪ್ರೋತ್ಸಾಹಿಸಬೇಕಿದೆ. ವಿದ್ಯಾಥಿಗಳು ಶಾಲಾ-ಕಾಲೇಜುಗಳಲ್ಲಿ, ತಮ್ಮ ಮಿತ್ರ ವೃಂದದಲ್ಲಿ, ಗ್ರಾಮಗಳಲ್ಲಿ ಈ ಬಗ್ಗೆ ಬೆಳಕು ಚೆಲ್ಲಬೇಕು. ನೇತ್ರದಾನ ಎನ್ನುವುದು ಒಂದು ಮಹಾಕರ‍್ಯವಾಗಿದ್ದು, ಶಂಕರ ಕಣ್ಣಿನ ಆಸ್ಪತ್ರೆ ಸುಮಾರು 3 ಸಾವಿರ ಜನರಿಗೆ ಕಣ್ಣು ನೀಡಿದೆ. ನೇತ್ರದಾನ ಮಾಡುವವರು ಹೆಚ್ಚಿದರೆ ಬೆಳಕು ಪಡೆಯುವವರ ಸಂಖ್ಯೆಯೂ ಹೆಚ್ಚುತ್ತದೆ. ನಟ ದಿವಂಗತ ಪುನೀತ್ ರಾಜಕುಮಾರ್ ಅವರು ನೇತ್ರದಾನ ಮಾಡಿದ ನಂತರ ಈಗ ನೇತ್ರದಾನಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.

ಈ ಸಂದರ್ಭದಲ್ಲಿ ಎನ್ನೆಸ್ಸೆಸ್ ಪ್ರಶಸ್ತಿ ಪಡೆ ಪ್ರೊ.ಜಗದೀಶ್ ಅವರನ್ನು ಅತಿಥಿಗಳು ಅಭಿನಂದಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚರ‍್ಯೆ ಪ್ರೊ. ಪಿ.ಆರ್. ಮಮತಾ ವಹಿಸಿದ್ದರು.

ವೇದಿಕೆಯಲ್ಲಿ  ನಿವೃತ್ತ ಪ್ರಾಂಶುಪಾಲ ಎಚ್.ಎಂ. ಸುರೇಶ್, ಚೇಂಬರ್ ಆಫ್ ಕಾಮರ್ಸಿನ ಸಹಕರ‍್ಯದರ್ಶಿ ಜಿ. ವಿಜಯ ಕುಮಾರ್, ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿಗಳಾದ ಪ್ರೊ. ಜಗದೀಶ್ ಮತ್ತು ಪ್ರೊ. ಕೆ. ಎಂ ನಾಗರಾಜ ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು