ಯುವಜನರ ವಲಸೆಯಿಂದ ಯಕ್ಷಗಾನ ಪ್ರದರ್ಶನ ಕುಂಠಿತ: ಶೇಷಗಿರಿ

ವಿಜಯ ಸಂಘರ್ಷ
ಸಾಗರ: ಗ್ರಾಮೀಣ ಪ್ರದೇಶದಲ್ಲಿ ಯಕ್ಷಗಾನ ಪ್ರದರ್ಶನಗಳ ಕುಂಠಿತಕ್ಕೆ ಯುವಜನರು ನಗರ ಪ್ರದೇಶಕ್ಕೆ ವಲಸೆ ಹೋಗಿರುವುದು ಕಾರಣವಾಗಿದೆ ಎಂದು ಹಿರಿಯ ಕಲಾವಿದ ಐ.ಎನ್.ಶೇಷಗಿರಿ ಹೇಳಿದರು.

ತಾಲ್ಲೂಕಿನ ನಂದೋಡಿ ಗ್ರಾಮದಲ್ಲಿ ಮಹಾಗಣಪತಿ ಯಕ್ಷಕಲಾ ಬಳಗವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ದೊಂದಿಗೆ ಈಚೆಗೆ ಏರ್ಪಡಿಸಿದ್ದ ಯಕ್ಷಗಾನ ಕಮ್ಮಟ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಯಕ್ಷಗಾನ ಕುರಿತ ಕಮ್ಮಟಗಳಿಂದ ಆ ಕಲೆಗೆ ಇರುವ ವಿವಿಧ ಆಯಾಮಗಳ ಪರಿಚಯ ವಾಗುತ್ತದೆ. ಇದರ ಜೊತೆಗೆ ಕಲೆಯ ಮಹತ್ವದ ಕುರಿತು ಅಧ್ಯಯನ ನಡೆಸುವ ಆಸಕ್ತಿ ಕೂಡ ಮೂಡುತ್ತದೆ. ಈ ನಿಟ್ಟಿನಲ್ಲಿ ಕಮ್ಮಟಗಳ ಸಂಖ್ಯೆ ಹೆಚ್ಚಾಗ ಬೇಕು ಎಂದು ಅಭಿಪ್ರಾಯಪಟ್ಟರು.

ಕಮ್ಮಟದ ನಿರ್ದೇಶಕ ರಮಾನಂದ ಹೆಗಡೆ ನಂದೋಡಿ, ಭಾಗವತ ನಾಗರಾಜ ಮಗಳ್ಳೆ, ರಮೇಶ್ ಐ.ಎಸ್. ಇದ್ದರು. ನಂತರ 'ಸುದರ್ಶನ ವಿಜಯ' ಯಕ್ಷಗಾನ ಪ್ರದರ್ಶನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು