ಆಕಾಶವಾಣಿ ಕೇಂದ್ರದಿಂದ ಜು:17ರಿಂದ 'ನೇಗಿಲ ಮಿಡಿತ' ಕಾರ್ಯಕ್ರಮ ಪ್ರಸಾರ

ವಿಜಯ ಸಂಘರ್ಷ
ಭದ್ರಾವತಿ: ನಗರದ ಜೆಪಿಎಸ್ ಕಾಲೋನಿಯ ಆಕಾಶವಾಣಿ ಭದ್ರಾವತಿ ಎಫ್‍ಎಂ 103.5 ಎಂಡಬ್ಲ್ಯು 675 ಕೆಎಚ್‍ಝೆಡ್‌ನಲ್ಲಿ ಜು:17 ರಿಂದ 'ಯುಎಎಚ್‍ಎಸ್ ನೇಗಿಲ ಮಿಡಿತ' ಕಾರ್ಯಕ್ರಮದ ಸರಣಿ ಪ್ರಸಾರವಾಗಲಿದೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್ ಭಟ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮವನ್ನು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ವತಿಯಿಂದ ಆಯೋಜಿಸಿದೆ. ಜು:17 ರಿಂದ 2024ರ ಜು: 15ರವರೆಗೆ ಪ್ರತಿದಿನ ಬೆಳಿಗ್ಗೆ 6.40ಕ್ಕೆ ಈ ಕಾರ್ಯಕ್ರಮ ಮೂಡಿಬರಲಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ,ಪ್ರಾಣಿ-ಮೀನು ಸಾಕಾಣಿಕೆ, ಮುಂತಾದ ಕೃಷಿ ಚಟುವಟಿಕೆ ಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ ಹಾಗೂ ಇನ್ನಿತರ ಕೇಂದ್ರಗಳ ವಿಜ್ಞಾನಿಗಳು, ತಜ್ಞರು ಮತ್ತುಸಂಶೋಧಕರು ಮಾತನಾಡಲಿದ್ದಾರೆ. ಸಮಗ್ರ ಬೆಳೆ ಪದ್ದತಿ, ಆಧುನಿಕ ಕೃಷಿ ತಂತ್ರಜ್ಞಾನ, ರೋಗ ನಿರ್ವಹಣೆ, ತಳಿ ನಿರ್ವಹಣೆ, ಕೀಟಬಾಧೆ ನಿರ್ವಹಣೆ, ಮೌಲ್ಯವರ್ಧನೆ, ಮಾರುಕಟ್ಟೆ ಹಾಗೂ ಇನ್ನಿತರ ಮಾಹಿತಿಯನ್ನು ನೀಡುವರು.

ಭದ್ರಾವತಿ ಆಕಾಶವಾಣಿ ಸಿದ್ದಪಡಿಸಿದ ಈ ಕಾರ್ಯಕ್ರಮ ಆಕಾಶವಾಣಿ ಚಿತ್ರದುರ್ಗ, ಮಡಿಕೇರಿ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಮಂಗಳೂರು ಜಿಲ್ಲಾ ಕೇಂದ್ರ ದಿಂದಲೂ ಪ್ರಸಾರವಾಗಲಿದೆ.

ಪ್ರಸಾರ ಸಮಯದಲ್ಲಿ NewsOnAir App ನಲ್ಲೂ ಕಾರ್ಯಕ್ರಮ ಆಲಿಸಬಹುದು. ರೈತರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು. ಅನಿಸಿಕೆಗಳನ್ನು ವಾಟ್ಸ್‌ಆಯಪ್ ಸಂಖ್ಯೆ: 9481572600 ಮೂಲಕ ಹಂಚಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು