ವಿಜಯ ಸಂಘರ್ಷ
ಭದ್ರಾವತಿ: ನಗರ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಾಗದ ಪಡಿತರದಾರರಿಗೆ ತೊಂದರೆಯಾಗುತ್ತಿದೆ. ಕೂಡಲೇ ಪಡಿತರ ವಿತರಿಸುವಂತೆ ಸಾಮಾಜಿಕ ಕಾರ್ಯಕರ್ತ ಶಶಿಕುಮಾರ್ ಎಸ್ ಗೌಡ ಒತ್ತಾಯಿಸಿದರು.
ಶುಕ್ರವಾರ ನಗರದ ತಾಲೂಕು ಕಚೇರಿ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ನಗರ ಪ್ರದೇಶ ದಲ್ಲಿರುವ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಜುಲೈ ತಿಂಗಳ ಪಡಿತರ ವಿತರಣೆಯಾಗದೆ ಇರುವುದು ಆಹಾರ ಇಲಾಖೆಯ ಬೇಜವಾಬ್ದಾರಿ ಎಂದು ಕಿಡಿಕಾರಿದರು.
ಸಂಬಂಧಿಸಿದ ಅಧಿಕಾರಿಗಳು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚಿಸಿ, ಪಡಿತರವನ್ನು ವಿತರಣೆ ಮಾಡುವಂತೆ ಅಗ್ರಹಿಸಿದರು.
ಈಗಾಗಲೇ ಜುಲೈ ತಿಂಗಳ ಹದಿನೈದು ದಿನಗಳು ಕಳೆದರು ಮೀನಾ ಮೇಷ ಎನಿಸುತ್ತಿರುವುದು ಭ್ರಷ್ಟಾಚಾರಕ್ಕೆ ಮಣೆ ಹಾಕಿದಂತಾಗಿದೆ. ಕೂಡಲೇ ಪಡಿತರ ವಿತರಣೆ ಮಾಡದಿದ್ದಲ್ಲಿ ನಗರ ಪ್ರದೇಶದ ಎಲ್ಲಾ ನ್ಯಾಯ ಬೆಲೆ ಅಂಗಡಿಗಳ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿವುದು ಎಂದು ಎಚ್ಚರಿಸಿ ಆಹಾರ ಇಲಾಖೆ ಹಾಗೂ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.