ವಿಜಯ ಸಂಘರ್ಷ
ಭದ್ರಾವತಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಂದಿ ಪರ್ವತದಲ್ಲಿ ಕುಳಿತಿದ್ದ ದಿಗಂಬರ
ಜೈನ್ ಸಂತ ಗಣಧಾರಾಚಾರ್ಯ
ಶ್ರೀ ಕುಂತುನಾಥ ಜೀ ರವರ ಶಿಷ್ಯರಾದ ಆಚಾರ್ಯ ಶ್ರೀಕಾಮ್ ಕುಮಾರ್ ನಂದಿ ಜೀ ರವರನ್ನು ಜು 5 ರಂದು ಅಪಹರಿಸಿ ನಂತರ ಅವರನ್ನು ಅಮಾನುಷವಾಗಿ ಭರ್ಬರವಾಗಿಹತ್ಯೆ ಮಾಡಿರುವುದನ್ನು ಅಖಿಲ ಭಾರತ ಕ್ಯಾಥೋಲಿಕ್ ಯೂನಿ ಯನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂತೋಣಿ ವಿಲ್ಸನ್ ತೀವ್ರ ಖಂಡಿಸಿದ್ದಾರೆ.
ಆಧ್ಯಾತ್ಮ ಪ್ರವರ್ತಕರು ಶಾಂತಿ ಪ್ರಿಯರು ಅಹಿಂಸೆಯ ಪ್ರತಿಪಾದಕರು ಆಗಿರುವ ಜೈನ ಮುನಿಗಳಿಗೆ ಮತ್ತು ಸಾಧು ಸಾಧ್ವಿ ಗಳಿಗೆ ಇಂತಹ ಅಹಿತಕರ ಘಟನೆಗಳಿಂದ ತೊಂದರೆ ಉಂಟಾಗದoತೆ ಸೂಕ್ತ ಭದ್ರತೆ ಯನ್ನು ನೀಡಬೇಕು. ಜೊತೆಗೆ ಎಲ್ಲಾ
ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ರಾಜ್ಯ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795
Tags:
ಭದ್ರಾವತಿ ವರದಿ