ವಿಜಯ ಸಂಘರ್ಷ
ತೀರ್ಥಹಳ್ಳಿ: ರಾಜ್ಯದ ಜನತೆಗೆ ಬಿಟ್ಟಿ ಭಾಗ್ಯ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದ್ದು ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ನಡೆಸಲು ಆಗುತ್ತಿಲ್ಲ. ಹಾಗಾಗಿ ಬಾಯಿ ಮಾತಿನಲ್ಲಿ ಅಧಿಕಾರಿಗಳಿಗೆ ವಿದ್ಯುತ್ ನಿಲ್ಲಿಸಲು ಹೇಳಿದ್ದಾರೆ ಇದರಿಂದ ಹಲವರಿಗೆ ತೊಂದರೆ ಆಗುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸೋಮವಾರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿ, ಗಂಟೆ ಗಟ್ಟಲೆ ಲೋಡ್ ಶೇಡ್ಡಿಂಗ್ ಮಾಡುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ, ವರ್ಕ್ ಶಾಪ್ ಮಾಲಕರಿಗೆ, ಹಿಟ್ಟಿನ ಅಂಗಡಿಯವರಿಗೆ ಕೆಲಸ ನಿಲ್ಲಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಈ ರಾಜ್ಯದ ಆರ್ಥಿಕತೆ ದುಸ್ಥಿತಿಗೆ ಬರುತ್ತಿದೆ. 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿ ವಿದ್ಯುತ್ ಕಡಿತಗೊಳಿಸಿದರೆ ಉಚಿತ ವಿದ್ಯುತ್ ಕೊಡುವುದೇನು ಎಂದು ಪ್ರಶ್ನೆ ಮಾಡಿದರು.
ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಎಂದರು. ಕಳೆದ ತಿಂಗಳು 720 ಕೋಟಿ ಕೆ ಎಸ್ ಆರ್ ಟಿಸಿ ಗೆ ಕಟ್ಟಬೇಕು.120ಕೋಟಿ ಕಟ್ಟಿದ್ದಾರೆ.ಮುಂದಿನ ತಿಂಗಳಿನಿಂದ ಬಸ್ ಗಳಿಗೆ ಡೀಸೆಲ್ ಇಲ್ಲ. ನೌಕರರಿಗೆ ಸಂಬಳ ಕೊಡಲು ಆಗುವುದಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಸಾಲೆಕೊಪ್ಪ ರಾಮಚಂದ್ರ, ಬಾಳೆಬೈಲು ರಾಘವೇಂದ್ರ, ಸಂದೇಶ್ ಜವಳಿ, ಕಾಸರವಳ್ಳಿ ಶ್ರೀನಿವಾಸ, ಸುಮಾ ರಾಮಚಂದ್ರ, ನಾಗರಾಜ್ ಶೆಟ್ಟಿ, ಕುಕ್ಕೆ ಪ್ರಶಾಂತ್ ಮತ್ತಿತರಿದ್ದರು.
Tags:
ತೀರ್ಥಹಳ್ಳಿ ಸುದ್ದಿ