ಜನ್ಮದಿನಾಚರಣೆಗಳು ಕೇವಲ ಆಚರಣೆ ಗಳಾಗದೆ ಇತರರ ಬದುಕಿಗೂ ನೆರವಾಗು ವಂತಿರಬೇಕು

ವಿಜಯ ಸಂಘರ್ಷ
ಜನ್ಮದಿನಗಳನ್ನು ಆಚರಿಸುವು ದಕ್ಕಿಂತಲೂ, ಅದನ್ನು ಸಮಾಜಕ್ಕೆ ಉಪಯೋಗವಾಗುವಂತೆ ಯಾವ ರೀತಿಯಲ್ಲಿ ಆಚರಿಸಬೇಕೆಂಬುದು ಮುಖ್ಯ. ಜನ್ಮದಿನಾಚರಣೆಗಳು ಕೇವಲ ಆಚರಣೆ ಗಳಾಗದೆ ಸಮಾಜದ ಇತರರ ಬದುಕಿಗೂ ನೆರವಾಗುವಂತಿರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಎಸ್.ಮನೋಜ್ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಮನುಷ್ಯ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿ ರುವ ಇಂದಿನ ದಿನಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳು ಮಾನವೀಯ ಸಂಬoಧಗಳನ್ನು ಬೆಸೆಯುವಲ್ಲಿ ಸಹಕಾರಿಯಾಗಿವೆ ಎಂದರು.

ಕಸಾಪ ಅಧ್ಯಕ್ಷ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎನ್.ಕೃಷ್ಣಪ್ಪ, ರಾಜೇಶ್, ಶ್ರೀನಿವಾಸ್, ಶಿವಬಸಪ್ಪ, ಎಂ.ಆರ್. ರೇವಣಪ್ಪ, ದತ್ತಿದಾನಿ ಎನ್.ಶ್ರೀನಿವಾಸ್, ಎಸ್.ಮನೋಜ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು