ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕಿನ ಯರೇಹಳ್ಳಿ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನೂತನ ಶಿಕ್ಷಕರಿಗೆ ಸ್ವಾಗತ ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಸಮೂಹ ಸಂಪನ್ಮೂಲ ವ್ಯಕ್ತಿ ಲಲಿತ ಮಾತನಾಡಿ, ನೆನಪುಗಳು ಶಾಶ್ವತ ಸವಿ ನೆನಪು ಸದಾ ಖುಷಿ ಕೊಡುತ್ತವೆ. ಅಂತಹ ಖುಷಿ ಕೊಟ್ಟು ಹೋಗುತ್ತಿರುವ ಮುಬಿನ ಹಾಗೂ ರಾಣಿ ಯವರಿಗೆ ಮುಂದಿನ ದಿನ ಖುಷಿ ನೀಡುವಂತಿರಲಿ ಎಂದು ಶುಭ ಹಾರೈಸಿದರು.
ನೂತನ ಶಿಕ್ಷಕ ಶಂಕರ್ ರವರಿಗೆ ಶಾಲೆಗೆ ಆತ್ಮೀಯವಾಗಿ ಸ್ವಾಗತಿಸಲಾಯ್ತು.
ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಶಾಲೆ ಅಭಿವೃದ್ಧಿ ಪಥದಲ್ಲಿ ಸಾಗುತಿದ್ದು ಇನ್ನಷ್ಟು ಸಾಧಿಸಲು ಸಮುದಾಯದ ಸಹಕಾರ ಅಗತ್ಯ ಎಂದು ತಿಳಿಸಿದ ಅವರು ನಿರ್ಗಮಿತ ಶಿಕ್ಷಕಿಯರಿಗೆ ಶುಭ ಕೋರಿ ನೂತನ ಶಿಕ್ಷಕರನ್ನು ಸ್ವಾಗತಿಸಿದರು.
ಯರೇಹಳ್ಳಿ ಗ್ರಾಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರ್ ಮಾತನಾಡಿದರು.
ಎಸ್ ಡಿ ಎಂ ಸಿ ಉಪಾಧ್ಯಕ್ಷೆ ರಂಜಿತಾ, ಸದಸ್ಯರಾದ ಶ್ರೀನಿವಾಸ್,ಚೈತ್ರ ಎಸ್
ರೇಣುಕಾ, ಗೀತಾ,ಹೇಮಾವತಿ ಹಾಗೂ ಇತರೆ ಸದಸ್ಯರು, ಪೋಷಕರು ಹಾಜರಿದ್ದು ಎಲ್ಲರಿಗೂ ಶುಭ ಹಾರೈಸಿದರು.
ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ, ತಾಲೂಕು ಅಧ್ಯಕ್ಷ ಪೃಥ್ವಿ, ಶಿಕ್ಷಕರಾದ ದೇವರಾಜ್, ಸೀತಮ್ಮ,ಹಳೆಯ ವಿದ್ಯಾರ್ಥಿಗಳಾದ ಅರುಣ್, ಪವನ್, ಹಾಗೂ ಮಾವಿನ ಕೆರೆ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.
ಗ್ರಂಥಾಲಯ ಮೇಲ್ವಿಚಾರಕಾರದ ಮಾಲಾ, ಅಂಗನವಾಡಿ ಶಿಕ್ಷಕಿ ಪುಟ್ಟಮ್ಮ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಹಾಜರಿದ್ದು ಶುಭ ಕೋರಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಕೃಷ್ಣ ಮೂರ್ತಿ ಅಧ್ಯಕ್ಷ ತೆ ವಹಿಸಿದ್ದರು.
ಮಕ್ಕಳು ಪ್ರಾರ್ಥಿಸಿ
ಶಿಕ್ಷಕಿ ಸುಮಾ ಸ್ವಾಗತಿಸಿ, ಜ್ಯೋತಿ ವಂದಿಸಿ ವಾಣಿಶ್ರೀ ಪಾಟೀಲ್ ನಿರೂಪಿಸಿದರು.
Tags:
ಭದ್ರಾವತಿ ಸುದ್ದಿ