ಹೆಣ್ಣು ಮಗುವಿನ ವರ್ಷದ ಪ್ರಶಸ್ತಿಗೆ ಭಾಜನರಾದ ಪಾರ್ವತಿ ಸಾಲೇರ

ವಿಜಯ ಸಂಘರ್ಷ
ಭದ್ರಾವತಿ: ಒಂದನೇ ತರಗತಿಯಿಂದ 6ನೇ ತರಗತಿಯವರೆಗೆ ಸೈಂಟ್ ಚಾರ್ಲ್ಸ್ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿ ವಿವಿಧ ಶಾಲಾ ಕಾಲೇಜುಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದ ಪಾರ್ವತಿ ಸಾಲೇರ ಇವರಿಗೆ ನ್ಯೂಟೌನ್ ಅಮಲೋದ್ಬವಿ ದೇವಾಲಯದಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದಿಂದ ಕೊಡ ಮಾಡುವ ಮಹಿಳೆ ಮತ್ತು ಹೆಣ್ಣು ಮಗುವಿನ ವರ್ಷದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜವಾಹರ್‌ಲಾಲ್ ನೆಹರು ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ 2023 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಆರು ಚಿನ್ನದಪದಕಗಳೊಂದಿಗೆ ವಿಶೇಷ ಸಾಧನೆ ಮಾಡುವುದರ ಮೂಲಕ ಭದ್ರಾವತಿಗೆ ಕೀರ್ತಿ ತಂದಿದ್ದಾರೆ.

ಇವರಿಗೆ ಭದ್ರಾವತಿ ಧರ್ಮಕೇಂದ್ರದ ಗುರುಗಳಾದ ಫಾ: ಲಾನ್ಸಿ ಡಿಸೋಜರವರು
ಮುಂದಿನ ವಿದ್ಯಾಭ್ಯಾಸ ಸುಗಮವಾಗಿ ಸಾಗಲು ಮತ್ತು ಉಜ್ವಲ ಭವಿಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ ಶುಭ ಹಾರೈಸಿದರು. ಧರ್ಮಪಾಲನ ಸಮಿತಿಯ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಸೈಂಟ್‌ ಚಾರ್ಲ್ಸ್ ಸಂಸ್ಥೆಯ ಸಿಸ್ಟರ್ ಜೆಸಿಂತಾ ಡಿಸೋಜಾ ರವರು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪಾಲನ ಪರಿಷತ್ ಮತ್ತು ಆರ್ಥಿಕ ಸಮಿತಿ ಸದಸ್ಯ ಆರ್.ಎಸ್.ಪೀಟರ್ ಜೋಸೆಫ್, ಅಂತೋನಿ ಕ್ರೂಸ್, ಸಲಿನ್ ಗೊನ್ಸಲ್ವಿಸ್, ರೋಸಿ ಡಿಸೋಜ, ನಿರ್ಮಲ ಹಾಗೂ ಪಾರ್ವತಿ ಅವರ ಪೋಷಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು