ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿಶ್ವನಗರ (ಅರಬಿಳಚಿ ಕ್ಯಾಂಪ್) ಶಾಲೆಯು ಪ್ರಸಕ್ತ ವರ್ಷದ ವಲಯ ಮಟ್ಟದ ಕ್ರೀಡಾಕೂಟ ದಲ್ಲಿ ಸಮಗ್ರ ಪ್ರಶಸ್ತಿ ಗೆಲ್ಲುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ.
ಅವಿರತ ಪರಿಶ್ರಮ ಹಾಗೂ ಅತ್ಯುತ್ತಮ ತರಬೇತಿಯಿಂದ ನೂತನವಾಗಿ ಆಗಮಿಸಿರುವ ದೈಹಿಕ ಶಿಕ್ಷಣ ಶಿಕ್ಷಕಿಯಾದ ನಂದಿನಿಯವರ ಕರ್ತವ್ಯ ಬದ್ಧತೆಯಿಂದ ಈ ಸಾಧನೆ ಸಾಧ್ಯವಾಗಿದೆ. ಬಾಲಕರ ಕಬ್ಬಡ್ಡಿ ಪ್ರಥಮ ನೀಲವನ್ ಮತ್ತು ತಂಡ.100 ಮೀ.ಓಟ ಗೌತಮ್ ಪ್ರಥಮ ಹಾಗೂ ನೀಲವನ್ ತೃತೀಯ. 200 ಮೀ. ಓಟ ಗೌತಮ್ ಪ್ರಥಮ. 4×100 ರಿಲೇ ಪ್ರಥಮ, ತಟ್ಟೆ ಎಸೆತ ನೀಲವನ್ ಪ್ರಥಮ ಹಾಗೂ ನಿತಿಲನ್ ದ್ವಿತೀಯ. ಎತ್ತರ ಜಿಗಿತ ಸಂತೋಷ ಪ್ರಥಮ. ಗುಂಡು ಎಸೆತ ನಿತಿಲನ್ ಪ್ರಥಮ ಹಾಗೂ ನೀಲವನ್ ದ್ವಿತೀಯ.ಉದ್ದ ಜಿಗಿತ ಕೃತಿಕ ಪ್ರಥಮ- ಶ್ವೇತ ದ್ವಿತೀಯ. ಉದ್ದ ಜಿಗಿತ ಗೌತಮ್ ತೃತೀಯ. 100 ಮೀ. ಓಟ ಕೃತಿಕಾ ತೃತೀಯ. ಗುಂಡು ಎಸೆತ ಸಿಂಚನಾ ತೃತೀಯ. ಹಾಗೂ ಹೆಣ್ಣು ಮಕ್ಕಳು ಥ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮುಖ್ಯ ಶಿಕ್ಷಕಿ ಸಾವಿತ್ರಮ್ಮ ಎಲ್ಲರಿಗೂ ಅಭಿನಂದಿಸಿ ತಾಲೂಕು ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವಂತೆ ಆಶಿಸಿದರು. ಮಕ್ಕಳಿಗೆ ಉತ್ತಮ ತರಬೇತಿ ನೀಡಿ ನಿರ್ವಹಣೆ ಮಾಡಿದ ನಾಗಲಕ್ಷ್ಮಿ ಎಸ್ ಹಾಗೂ ವಿಜಯ್ ರವರಿಗೆ ಅಭಿನಂದಿಸಿದರು.
ಸಹಕರಿಸಿದ ಪದ್ಮಾವತಿ, ಮಂಜುಳಾ ಕುಮಾರಿ ಹಾಗೂ ಎಲ್ಲಾ ಪೋಷಕರಿಗೂ ಶಾಲೆಯ ಪರವಾಗಿ ಆತ್ಮೀಯ ಧನ್ಯವಾದಗಳು.
(ಮಾಹಿತಿ: ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು ವಿಶ್ವನಗರ)