ವಿಜಯ ಸಂಘರ್ಷ
ಭದ್ರಾವತಿ: ಜಿಲ್ಲಾ ಯೋಜನಾ ನಿರ್ದೇಶಕ ರಾಗಿ ನೂತನ ವಾಗಿ ಅಧಿಕಾರ ವಹಿಸಿ ಕೊಂಡಿರುವ ಹಿರಿಯ ಅಧಿಕಾರಿ ಮನೋಹರ್ ರವರು ಮಂಗಳವಾರ ನಗರದ ವಿವಿಧೆಡೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾ ಭವನ, ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಛೇರಿ ಹಿಂಭಾಗದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ ಹಾಗು ಕನಕಮಂಟಪ ಮೈದಾನದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಪೌರಕಾರ್ಮಿಕರ ವಸತಿ ಸಮುಚ್ಚಯ ಹಾಗು ಪುಟ್ ಪಾತ್ ಪರಿಶೀಲನೆ ನಡೆಸಿದರು.
ನಗರಸಭೆ ಕಂದಾಯಾಧಿಕಾರಿ ರಾಜ ಕುಮಾರ್, ಕಿರಿಯ ಇಂಜಿನಿಯರ್ ಗಳಾದ ಕೆ.ಪ್ರಸಾದ್, ಸಂತೋಷ್ ಪಾಟೀಲ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಡಿ. ನರಸಿಂಹಮೂರ್ತಿ ಇನ್ನಿತರರಿದ್ದರು.
Tags:
ಕಾಮಗಾರಿ ಪರಿಶೀಲನೆ