ವಿಜಯ ಸಂಘರ್ಷ
ಭದ್ರಾವತಿ: ಕಳೆದೆರಡು ದಿನಗಳ ಹಿಂದೆ ಹಳೆ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದವರ ವಿರುದ್ಧ ದೂರು ದಾಖಲಿಸಿರುವುದು ಸಂತಸದ ವಿಚಾರ ಎಂದು ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಹೇಳಿದ್ದಾರೆ.
ಬುಧವಾರ ನಗರ ವೃತ್ತ ನಿರೀಕ್ಷೆಕರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿ, ಅಕ್ರಮ ಪಡಿತರ ಅಕ್ಕಿ ಯಾವ ನ್ಯಾಯಬೆಲೆ ಅಂಗಡಿಯಿಂದ ನೀಡಿದರು,ಬಂಧಿತ ವ್ಯಕ್ತಿಗೂ ರೈಸ್ ಮಿಲ್ ಗಳ ಮಾಲೀಕರಿಗೂ ಹಾಗೂ ನ್ಯಾಯಬೆಲೆ ಅಂಗಡಿಯ ಮಾಲೀಕರಿಗೂ ಇರುವ ಸಂಬಂಧದ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಅಗ್ರಹಿಸಿದರು.
ರಾಜ್ಯ ಸರ್ಕಾರ ರಾಜ್ಯದಂತ ಬಿಪಿಎಲ್ ಕಾರ್ಡ್ ದಾರರಿಗೆ ನೀಡುತ್ತಿರುವ ಉತ್ತಮ ಯೋಜನೆ ಫಲಾನುಭವಿಗಳ ಕೈ ಸೇರದ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಭ್ರಷ್ಟರ ಪಾಲಾಗುತ್ತಿದೆ. ಬಂಧಿತ ವ್ಯಕ್ತಿಯ ದೂರವಾಣಿಗೆ ಬಂದಂತಹ ಕರೆಗಳು ಹೊರ ಹೋಗಿರುವ ಕರೆಗಳು, ವಾಟ್ಸಪ್ ಮೆಸೇಜ್ ಗಳು ಎಲ್ಲವನ್ನು ಪರಿಶೀಲನೆ ಮಾಡಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.