ಚಂದ್ರಗುತ್ತಿ ದೇವಸ್ಥಾನದಲ್ಲಿನ ಕಿಡಿಗೇಡಿಗಳ ಕೃತ್ಯ ಖಂಡಿಸಿ ಪ್ರತಿಭಟನೆ

ವಿಜಯ ಸಂಘರ್ಷ
ಶಿಕಾರಿಪುರ: ಇತಿಹಾಸ ಪ್ರಸಿದ್ಧ ಹಾಗೂ ಪೌರಾಣಿಕ ಹಿನ್ನೆಲೆ ಉಳ್ಳ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಕಿಡಿಗೇಡಿಗಳು ದೇವಿಯ ಮೂರ್ತಿ ಕಿತ್ತೆಸೆದು ಪೂಜಾ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದ ಘಟನೆ ಖಂಡಿಸಿ ಭಕ್ತರು ಹಾಗೂ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

    ಈ ವೇಳೆ ಚೌಟಗಿ ಜೋಗಪ್ಪ ಸೇವಾ ಸಮಿತಿಯ ಅಧ್ಯಕ್ಷರಾದ ಪರಶುರಾಮಪ್ಪ ರವರು ಮಾತನಾಡಿ ಇತಿಹಾಸ ಪ್ರಸಿದ್ಧ ಪೌರಾಣಿಕ ಹಿನ್ನೆಲೆ ಉಳ್ಳ ಶ್ರೀ ಚಂದ್ರಗುತ್ತಿ ಶ್ರೀ ಕ್ಷೇತ್ರದಲ್ಲಿ ಶ್ರೀ ರೇಣುಕಾಂಬಯ ಗರ್ಭಗುಡಿಯಲ್ಲಿ ಕಿಡಿಗೇಡಿಗಳು ಅಕ್ರಮವಾಗಿ ಪ್ರವೇಶಿಸಿ ದೇವಿಯ ಮೂರ್ತಿಯನ್ನು ಕಿತ್ತೆಸೆದು ಪೂಜಾ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಘಟನೆ ನಡೆದಿರುವುದು ಖಂಡ ನೀಯಾ, ಸರ್ಕಾರದ ಅಧೀನದಲ್ಲಿರುವ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಶ್ರೀ ಕ್ಷೇತ್ರ ಇದಾಗಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಶ್ರೀದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸರ್ಕಾರದ ದೀನದಲ್ಲಿದ್ದರೂ ಕೂಡ ಈ ಕೃತ್ಯ ನಡೆದಿರುವುದು ಭದ್ರತೆಯ ಬಗ್ಗೆ ಹಲವು ಅನುಮಾನಗಳನ್ನು ಮೂಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    
  ಪ್ರತಿಭಟನಾಕಾರರು ಕೂಡಲೇ ಕಿಡಿಗೇಡಿ ಗಳನ್ನು ಬಂಧಿಸುವ ಮೂಲಕ ಇಂತಹ ಕೃತ್ಯ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿ ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹಾಗೂ ಮುಜರಾಯಿ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.
  
    ಈ ಸಂದರ್ಭದಲ್ಲಿ ಮೋಹನ್, ಚೌಡಗಿ ಎಲ್ಲಪ್ಪ, ಗುಡುದಯ್ಯ, ಬಿ.ಸಿ. ವೇಣು ಗೋಪಾಲ್, ಗುಂಡ, ತ್ಯಾಗರ್ತಿ ರವಿ, ಬಡಗಿ ಪಾಲಾಕ್ಷಪ್ಪ, ಅಜಯ್, ಹರೀಶ್, ಸುಧೀಂದ್ರ, ಮಲ್ಲೇಶಪ್ಪ, ಪ್ರಶಾಂತ್, ಗಿಡ್ಡಪ್ಪ ಹೂಗಾರ್, ಸೇರಿದಂತೆ ಹಲವರು ಇದ್ದರು.

(ವರದಿ ಹುಲಿಗಿ ಕೃಷ್ಣ )

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು