ಕೊಡಚಾದ್ರಿ ಪ್ರವೇಶ ನಿರ್ಬಂಧ ಮೂಲಕ ಧಾರ್ಮಿಕ ಯಾತ್ರೆಗೆ ಧಕ್ಕೆ: ನಿರ್ಬಂಧ ತೆರವಿಗೆ ಪ್ರತಿಭಟನೆ

ವಿಜಯ ಸಂಘರ್ಷ
ಸಾಗರ : ಕೊಡಚಾದ್ರಿ ಬೆಟ್ಟ ಪ್ರವೇಶ ನಿರ್ಬಂಧ ಹಿನ್ನೆಲೆ ಕೊಡಚಾದ್ರಿ ವ್ಯವಸ್ಥಾಪನ ಸಮಿತಿ ಮತ್ತು ಸ್ಥಳೀಯರು ನಿರ್ಬಂಧವನ್ನು ತೆರವುಗೊಳಿಸುವಂತೆ ಕಟ್ಟಿನ ಹೊಳೆಯ ವನ್ಯಜೀವಿ ಇಲಾಖೆಯ ಗೇಟ್ ಮುಂಭಾಗ ಪ್ರತಿಭಟನೆಯನ್ನು ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೊಡಚಾದ್ರಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶಿವರಾಂ ಎನ್ ಶೆಟ್ಟಿ ಮಾತನಾಡಿ ಈ ನಿರ್ಬಂಧ ಕೇವಲ ಪ್ರವಾಸಿ ತಾಣದ ಮೇಲಾದ ನಿರ್ಬಂಧವಲ್ಲ ಇದು ಅಸಂಖ್ಯಾತ ಭಕ್ತರ ಆರಾಧ್ಯ ತಾಣವಾದ ಕೊಲ್ಲೂರು ಮೂಕಾಂಬಿಕೆಯ ಮೂಲ ನೆಲೆಯಾದ ನೂರಾರು ವರ್ಷಗಳ ಇತಿಹಾಸವಿರುವ ಇಂತಹ ಧಾರ್ಮಿಕ ಕ್ಷೇತ್ರಕ್ಕೆ ಇಲಾಖೆ ನಿರ್ಬಂಧವನ್ನು ಹೇರಿರುವುದು ಸರಿಯಲ್ಲ ನಿತ್ಯ ನೂರಾರು ಭಕ್ತರು ದೇಶದ ವಿವಿಧ ಭಾಗಗಳಿಂದ ಬಂದು ಇಲ್ಲಿ ಹರಕೆಯನ್ನು ತೀರಿಸಿ ಹೋಗುತ್ತಾರೆ ಇಂತಹ ಧಾರ್ಮಿಕ ಸ್ಥಳವನ್ನು ಅರಿಶಿನ ಗುಂಡಿ ಘಟನೆಯನ್ನು ಕಾರಣವಾಗಿಟ್ಟುಕೊಂಡು ಈ ನಿರ್ಧಾರ ಮಾಡಿರುವುದು ಸರಿಯಲ್ಲ.

ಕೇವಲ ಜಲಪಾತಗಳಿಗೆ ನಿರ್ಬಂಧವನ್ನು ಹೇರಿ ಆದರೆ ಧಾರ್ಮಿಕ ಸ್ಥಳಗಳನ್ನು ಯಾಕೆ ನಿರ್ಬಂಧಿಸಲಾಗಿದೆ ಇದು ಸ್ಥಳೀಯರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಒಂದಿಷ್ಟು ಕುಟುಂಬಗಳು ಈ ನೆಲೆಯಲ್ಲಿ ಬದುಕನ್ನ ಕಟ್ಟಿಕೊಂಡಿದೆ ಈ ನಿಟ್ಟಿನಲ್ಲಿ ಕೊಡಚಾದ್ರಿ ವ್ಯವಸ್ಥಾಪನ ಸಮಿತಿ ಹಾಗೂ ಸ್ಥಳೀಯರು ಇದಕ್ಕೆ ಸಂಪೂರ್ಣ ವಿರೋಧವನ್ನು ವ್ಯಕ್ತಪಡಿಸುತ್ತೇವೆ.

ಕೂಡಲೇ ಈ ನಿರ್ಬಂಧವನ್ನು ತೆರವು ಗೊಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವನ್ಯಜೀವಿ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ರೂಪೇಶ್ ಚೌಹಾನ್ ಅವರಿಗೆ ಮನವಿಯನ್ನು ಸಲ್ಲಿಸುವ ಮೂಲಕ ನಿರ್ಬಂಧ ತೆರವಿಗೆ ಆಗ್ರಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು