ಆನಂದಪುರದಲ್ಲಿ ಸ್ವಾತಂತ್ರೊತ್ಸವ ಸಂಭ್ರಮ

ವಿಜಯ ಸಂಘರ್ಷ
ಸಾಗರ : ತಾಲ್ಲೂಕಿನ ಆನಂದಪುರ 
ಸ್ವಾತಂತ್ರೊತ್ಸವದ ಅಂಗವಾಗಿ ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ ವಿವಿಧ ಶಾಲಾಮಕ್ಕಳ ಮೆರವಣಿಗೆ ನಡೆಯಿತು.

 ಮಕ್ಕಳು ಭಾರತ ಮಾತೆಗೆ ಜೈಕಾರ ಹಾಕುತ್ತಾ ಮುಖ್ಯ ರಸ್ತೆಯಲ್ಲಿ ಸಾಗಿ ದರು. ದೇಶ ಭಕ್ತರ ಛದ್ಮವೇಷ ಧರಿಸಿದ್ದ 50 ಕ್ಕೂ ಹೆಚ್ಚು ಪುಟಾಣಿ ಮಕ್ಕಳು ಮೆರವಣಿಗೆಯ ಆಕರ್ಷಣೆಯಾಗಿ ದ್ದರು. ನಾಡಕಛೇರಿ, ಸಾರ್ವಜನಿಕ ಆಸ್ಪತ್ರೆ, ಆಟೋ ಚಾಲಕ ಸಂಘ, ವಾಹನ ಚಾಲಕರ ಸಂಘ, ಕನ್ನಡ ಸಂಘದವರು ಸ್ವಾತಂತ್ರೊತ್ಸವದಲ್ಲಿ ಪಾಲ್ಗೊಂಡಿದ್ದರು.
 
ಕನ್ನಡ ಸಂಘದ ವತಿಯಿಂದ ಆನಂದ ಪುರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳನ್ನು ಸನ್ಮಾನಿಸ ಲಾಯಿತು. ಯಡೇಹಳ್ಳಿಯ ಇಂದಿರಾಗಾoಧಿ ವಸತಿಶಾಲೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಮ್ಮ ಧ್ವಜಾರೋಹಣ ವನ್ನು ನಡೆಸಿ, ದೇಶಭಕ್ತಿಗೀತೆಯನ್ನು ಹಾಡಿ ದೇಶಪ್ರೇಮದ ಜಾಗೃತಿ ಮೂಡಿಸಿದರು. ಹಕ್ಕು ಮತ್ತು ಕರ್ತವ್ಯ ನಾಣ್ಯದ ಎರಡು ಮುಖಗಳಿದ್ದಂತೆ , ಅವೆರಡನ್ನು ಸಮವಾಗಿ ಪಾಲಿಸುವಂತೆ ವಿದ್ಯಾರ್ಥಿ ಗಳಿಗೆ ತಿಳಿಸಿದರು.
ಇರುವಕ್ಕಿ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಆರ್.ಸಿ ಜಗದೀಶ್ ವಸತಿಶಾಲಾ ಗ್ರಂಥಾಲಯಕ್ಕೆ 100 ಕ್ಕೂ ಅಧಿಕ ಪುಸ್ತಕಗಳನ್ನು ನೀಡಿದರು.

ಪ್ರಾಂಶುಪಾಲ ಚಂದ್ರಶೇಖರ ಬಿ.ವಸತಿ ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು. ನಂತರದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು