ರಾಜ್ಯದಲ್ಲಿ ಜಿಪಂ-ತಾಪಂ ಚುನಾವಣೆ ಯಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ: ಹುಲ್ಮಾರ್ ಮಹೇಶ್

ವಿಜಯ ಸಂಘರ್ಷ
ಶಿಕಾರಿಪುರ: ರಾಜ್ಯದಲ್ಲಿ ಜನತೆ ಧರ್ಮರಾಜ ಕಾರಣಕ್ಕಿಂತ ಮುಖ್ಯವಾಗಿ ಜನಕಲ್ಯಾಣ ರಾಜಕೀಯ ಬಯಸುತ್ತಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ರಾಜ್ಯದ ಅಭಿವೃದ್ಧಿಯ ಬಗ್ಗೆ ಹಾಗೂ ರಾಜ್ಯದ ಬಡಜನರ ಏಳಿಗೆಯ ಬಗ್ಗೆ ಹಲವು ಯೋಜನೆಗಳನ್ನು ರೂಪಿಸಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಹೇಳಿದರು.

ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.

ಸರ್ವ ಧರ್ಮ ಸಮ್ಮಿಲನದ ಮೂಲಕ ಎಲ್ಲರನ್ನೂ ಸಮಾನವಾಗಿ ಸಿಎಂ ಹಾಗೂ ಡಿಸಿಎಂರವರು ನೋಡುತ್ತಿದ್ದು, ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದಾರೆಂದರು.

ಮುಂಬರುವ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿಗಳಿಸುವಲ್ಲಿ ಯಾವುದೇ ಅನುಮಾನ ಬೇಡ.
ಅಮಟೆಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಮಂಜಮ್ಮ ಶಿವಪ್ಪ, ಉಪಾಧ್ಯಕ್ಷರಾಗಿ ಪ್ರಮೋದ್ ರವರುಗಳ ಆಯ್ಕೆಯೇ ಸಾಕ್ಷಿ ಎಂದರು.

ಮುಖಂಡರಾದ ತಿಮ್ಮಣ್ಣ, ಕಲವತ್ತಿ ಈಶಣ್ಣ, ಜಕ್ಕಿಂಕೊಪ್ಪ ಶ್ರೀಕಾಂತ್, ಬನ್ನೂರು ನಾಗರಾಜು, ಪ್ರಕಾಶ್, ಅಂಬಾರಗೊಪ್ಪ ಜಗದೀಶ್ ಹಾಗೂ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೀಶ್ ನಾಯ್ಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

(ವರದಿ ಹುಲಿಗಿ ಕೃಷ್ಣ )

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು