ಕಾನೂನು ಬಾಹಿರ ಚಟುವಟಿಕೆ ತಡೆಯುವಲ್ಲಿ ಪಿಎಸ್ಐ ವಿಫಲ : ಉಳ್ಳಿ ದರ್ಶನ್ ಆರೋಪ

ವಿಜಯ ಸಂಘರ್ಷ
ಶಿಕಾರಿಪುರ: ನಗರದಲ್ಲಿ ಓಸಿ ಮಟ್ಕಾ ಅನೇಕ ನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಸಹ ಯಾವುದೇ ಪೊಲೀಸರು ಕ್ರಮ ಜರುಗಿಸದೇ ತಾಲೂಕಿ ನಲ್ಲಿ ಗ್ರಾಮೀಣ ಪ್ರದೇಶಗಳಿಂದ ಬರುವ ಬಡವರ, ಕೂಲಿ ಕಾರ್ಮಿಕರ, ರೈತರ ಮೇಲೆ ಅನವಶ್ಯಕ ಕೇಸುಗಳನ್ನು ಹಾಕುವ ಮೂಲಕ ನೆಪ ಮಾತ್ರಕ್ಕೆ ಕಾರ್ಯನಿರ್ವಹಿಸುತ್ತಾ ಸಾರ್ವಜನಿಕರಿಂದ ಹಣ ವಸೂಲಿ ಮಾಡುವ ಹಗಲು ದರೋಡೆಗೆ ಇಳಿದಿದ್ದಾ ರೆಂದು ಪುರಸಭಾ ಸದಸ್ಯ ಮಯೂರ್ ಉಳ್ಳಿ ದರ್ಶನ್ ಹೇಳಿದರು.

ಪಟ್ಟಣದ ಸುದ್ದಿ ಮನೆಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಪಿಎಸ್ಐ ಪ್ರಶಾಂತ್ ರವರಿಂದ ಹದಗೆಟ್ಟಿದೆ ಎಂದು ಗಂಭೀರ ಆರೋಪ ಮಾಡಿದರು.
   
   ದ್ವಿಚಕ್ರದಲ್ಲಿ ಹೆಲ್ಮೆಟ್ ಧರಿಸಿ ಬರುವ ರೈತರಿಗೂ ಕೂಡ ಅನಾವಶ್ಯಕವಾಗಿ ಕೇಸುಗಳನ್ನು ಹಾಕುತ್ತಾ ಪಟ್ಟಣದಲ್ಲಿ ಓಸಿ ಮಟ್ಕಾ ಜೂಜುಗಳಿಗೆ ಗಳಿಗೆ ಸಹಕಾರ ನೀಡುತ್ತಿದ್ದು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ, ಇದಕ್ಕೆ ಅನ್ಯಪಕ್ಷ ದವರ ಕುಮ್ಮಕ್ಕು ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
  
ಹಲವು ವರ್ಷಗಳಿಂದ ವಾಹನಗಳು ಏಕಮುಖ ಸಂಚರಿಸುವ ವ್ಯವಸ್ಥೆಗಳಿದ್ದವು. ಆಗ ಸಂಚಾರ ವ್ಯವಸ್ಥೆ ಸುಗಮವಾಗಿತ್ತು. ಈಗ ಎಲ್ಲೆಂದರಲ್ಲಿ ವಾಹನಗಳು ಹೇಗೆ ಬೇಕೋ ಹಾಗೆ ಸಂಚರಿಸುತ್ತಾ ಸುಗಮ ಸಂಚಾರ ವ್ಯವಸ್ಥೆಗೆ ಅನಾನುಕೂಲವಾಗಿದೆ. ದ್ವಿಚಕ್ರ ವಾಹನಗಳು ಎಲ್ಲೆಂದರಲ್ಲಿ ನಿಲ್ಲಿಸುತ್ತಾ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಇರುವುದರಿಂದ ವಯೋ ವೃದ್ಧರು ಮತ್ತು ಅನಾರೋಗ್ಯದಿಂದ ಬಳಲುತ್ತಿರು ವವರು ಹತ್ತಿರದ ಆಸ್ಪತ್ರೆಗೆ ಸುಗಮವಾಗಿ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ.

    ಸಾರ್ವಜನಿಕರು ತಮ್ಮ ಕುಂದು ಕೊರತೆ ಗಳ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ದೂರುದಾರರಿಗೆ ಬಯ್ಯುವುದು, ಹೊಡೆಯುವುದು, ಹಾಗೂ ದೌರ್ಜನ್ಯ ಮಾಡುವ ಕೆಲಸಮಾಡುತ್ತಿದ್ದಾರೆ. ಸಾರ್ವಜನಿಕರು ಮೊಬೈಲ್ ಗಳನ್ನು ಕಳೆದುಕೊಂಡು ಠಾಣೆಗೆ ದೂರು ನೀಡಲು ಹೋದರೆ ಹಾರಿಕೆಯ ಉತ್ತರ ನೀಡುತ್ತಿ ದ್ದಾರೆ. ಅನೇಕ ಮೊಬೈಲ್ ಕಳ್ಳರಿಗೆ ಪಿಎಸ್ಐ ಪ್ರಶಾಂತ್ ರವರೇ ಕುಮಕ್ಕು ನೀಡುತ್ತಿದ್ದಾರೆ.
    
    ಪಟ್ಟಣದ ಟೌನ್ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಪಿಎಸ್ಐ ಕಾನೂನು ಸುವ್ಯವಸ್ಥೆಯನ್ನು ಗಾಳಿಗೆ ತೋರಿದ್ದಾರೆ. ಇದರ ಬಗ್ಗೆ ಗೃಹ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರವರಿಗೆ ದೂರು ನೀಡುವುದಾಗಿ ತಿಳಿಸಿದರು.
    
    ಬಿಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ಶಾಸಕ ಅರಗ ಜ್ಞಾನೇಂದ್ರ ರವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ವಿಚಾರವಾಗಿ ತಾಲೂಕು ಕಾಂಗ್ರೆಸ್ ಖಂಡಿಸುತ್ತದೆ. ಹಾಗೂ ಅವರ ಹೇಳಿಕೆಯ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    
ಗೋಷ್ಟಿಯಲ್ಲಿ ಮುಖಂಡರಾದ ಸ.ನಾ ಮಂಜಪ್ಪ, ರಾಜು ಉಡುಗಣಿ, ಮತ್ತು ಸುಹಾಸ್ ಉಪಸ್ಥಿತರಿದ್ದರು.

(ವರದಿ ಹುಲಿಗಿ ಕೃಷ್ಣ )

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು