ಹಾಡಹಗಲೇ ಕಾರಿನಲ್ಲಿ ಇಟ್ಟಿದ್ದ ಹಣ ಕಳ್ಳತನ....?

ವಿಜಯ ಸಂಘರ್ಷ
ತೀರ್ಥಹಳ್ಳಿ: ಪಟ್ಟಣದ ಗಾಂಧಿ ಚೌಕದಲ್ಲಿ ರುವ ಮಾರಿಕಾಂಬಾ ದೇವಸ್ಥಾನದ ಬಳಿ ಕಾರಿನಲ್ಲಿ ಇಟ್ಟಿದ್ದ ಒಂದು ಲಕ್ಷ ರೂ ಹಣ ವನ್ನು ಹಾಡಹಗಲೇ ಕಳ್ಳತನ ಮಾಡಿರುವ ಘಟನೆ ಸೋಮವಾರ ನಡೆದಿದೆ.

ಮುಂಡಿಗೆಮನೆಯ ದೇವರಾಜ್ ಎಂಬುವರು ಕರ್ನಾಟಕ ಬ್ಯಾಂಕ್ ನಲ್ಲಿ ಒಂದು ಲಕ್ಷ ರೂ ಹಣವನ್ನು ಡ್ರಾ ಮಾಡಿಕೊಂಡು ಬಂದು ಕಾರಿನಲ್ಲಿ ಇಟ್ಟಿದ್ದಾರೆ.

ನಂತರ ಪುನಃ ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿಸಿ ವಾಪಾಸ್ ಬರುವುದರೊಳಗೆ ಕಾರಿನ ಲಾಕ್ ತೆಗೆದು ಹಣವನ್ನು ಕಳ್ಳರು ದೋಚಿ ಪರಾರಿ ಯಾಗಿದ್ದಾರೆ.

ಪಟ್ಟಣದ ಮದ್ಯ ಭಾಗದಲ್ಲಿಯೇ ಅದರಲ್ಲೂ ಹಾಡಹಗಲೇ ಈ ರೀತಿ ಘಟನೆ ನಡೆದಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಸ್ಥಳದಲ್ಲಿ ಇರುವ ಸಿಸಿ ಕ್ಯಾಮರಾ ಪರಿಶೀಲನೆ ನೆಡೆಸುತ್ತಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು