ವಿಜಯ ಸಂಘರ್ಷ
ಭದ್ರಾವತಿ: ನಗರಸಭೆ ಸಾಮಾನ್ಯ ಸಭೆಯಲ್ಲಿ ಗಾಂಜಾಮುಕ್ತ ಭದ್ರಾವತಿ ನಗರವನ್ನಾಗಿಸಲು ಸರ್ವ ಸದಸ್ಯರು ಒಮ್ಮತಸೂಚಿಸಿ ಪ್ರತಿಜ್ಞೆ ಮಾಡಿದರು.
ಸಭೆಯ ಆರಂಭದಲ್ಲಿ ಸದಸ್ಯ ಮೋಹನ್ ಕುಮಾರ್ ಗಾಂಜಾ ಹಾವಳಿ ಹೆಚ್ಚಳದ ಬಗ್ಗೆ ಸಭೆಯ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಪಿ.ಎಸ್.ಐ ಶರಣಪ್ಪ ವಿವರ ನೀಡಿದರು.
ಶೇ.40ರಷ್ಟು ಗಾಂಜಾ ಪ್ರಕರಣಗಳನ್ನು ದಾಖಲಿಸಲಾಗಿದೆ.ತನಿಖೆ ಮುಂದುವರೆದಿದೆ. ಹೊರ ರಾಜ್ಯದಿಂದ ಗಾಂಜಾ ಬರುತ್ತಿರುವ ಬಗ್ಗೆ ಮಾಹಿತಿಯಿದೆ. ಮೊಬೈಲ್ ಬಳಸದೆ ಸಾಮಾಜಿಕ ಜಾಲತಾಣಗಳ ಮೂಲಕ ವ್ಯವಹರಿಸುತ್ತಿರುವ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮುಂದಿನದಿನಗಳಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಮತ್ತಷ್ಟು ಪ್ರಕರಣ ಪತ್ತೆಹಚ್ಚುವುದಾಗಿ ತಿಳಿಸಿದರು. ಯಾವುದೇ ಜನಪ್ರತಿನಿಧಿಗಳು ಇಂತಹವರ ಪರವಾಗಿ ಕರೆಮಾಡಿ ಬಿಡುವಂತೆ ಒತ್ತಡವೇರಬಾರದು ಎಂದು ಮನವಿ ಮಾಡಿದರು. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ನಂತರ ಪ್ರತಿಯೊಬ್ಬ ನಗರಸಭೆ ಸದಸ್ಯರು ಗಾಂಜಾ ವ್ಯಸನಿಗಳಿಂದ ತಾವು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದರು. ಈ ವೇಳೆ ಗಾಂಜಾ ವ್ಯಸನಿ ಗಳು ಪಿ.ಎಸ್.ಐ ಒಬ್ಬರಿಗೆ ಚಾಕುವಿನಿಂದ ಇರಿಯಲು ತೆರಳಿದ್ದ ವಿಷಯ ಪ್ರಸ್ತಾಪ ಗೊಂಡಿತು. ಅನೇಕಮಹಿಳಾ ಸದಸ್ಯರು ಗಾಂಜಾ ವ್ಯಸನಿಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಒಟ್ಟಾರೆ ಎಲ್ಲರ ಅಭಿಪ್ರಾಯಗಳನ್ನು ಸಂಹ್ರಹಿಸಿ, ಒಮ್ಮತದಿಂದ ಪ್ರತಿಯೊಬ್ಬ ನಗರಸಭಾ ಸದಸ್ಯರು ಗಾಂಜಾಮುಕ್ತ ಭದ್ರಾವತಿ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಘೋಷಿಸಿದರು.
ಸಭೆಯಲ್ಲಿ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸುದೀಪ್ ಕುಮಾರ್, ಸದಸ್ಯ ರಾದ ಬಿ.ಕೆ.ಮೋಹನ್, ವಿ.ಕದಿರೇಶ್, ಬಿ.ಟಿ.ನಾಗರಾಜ್, ಬಸವರಾಜ್ ಆನೇಕೊಪ್ಪ, ಉದಯ ಕುಮಾರ್, ವಿಜಯ, ಜಾರ್ಜ್, ಚನ್ನಪ್ಪ, ಟಿಪ್ಪು, ಪಲ್ಲವಿ, ಸವಿತಾ, ಶಶಿಕಲಾ, ಪ್ರೇಮಾ ಕೆ.ಪಿ., ಕೋಟೇಶ್ವರ ರಾವ್, ರೂಪಾವತಿ, ಮಣಿ, ಮಂಜುಳ ಸುಬ್ಬಣ್ಣ, ಕೆ.ಆರ್.ಸವಿತಾ, ಮೋಹನ್ ಕುಮಾರ್, ಗೀತಾ ರಾಜಕುಮಾರ್, ಲತಾಚಂದ್ರಶೇಖರ್, ಪೌರಾಯುಕ್ತ ಮನುಕುಮಾರ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.