ಮಳೆಕೊರತೆ ನಡುವೆ ಗೌರಿ- ಗಣೇಶ ಹಬ್ಬದ ಸಡಗರ

ವಿಜಯ ಸಂಘರ್ಷ
ಸಾಗರ: ಈ ವರ್ಷ ಮಳೆಯ ಪ್ರಮಾಣ ಅತ್ಯಂತ ಕ್ಷೀಣಿಸಿದ್ದು ಮಳೆ ಇಲ್ಲದೆ ಬರಗಾಲದ ಭಯದ ಛಾಯೆಯ ನಡುವೆ ಜನರಿದ್ದು ಇದರ ನಡುವೆ ಒಂದೆರಡು ದಿನಗಳಿಂದ ಸಣ್ಣದಾಗಿ ಮಳೆ ಬರುತ್ತಿರುವ ಹಿನ್ನಲೆಯಲ್ಲಿಯೋ ಏನೋ ಗೌರಿ ಮತ್ತು ಗಣೇಶಹಬ್ಬವನ್ನು ಎಂದಿನಉತ್ಸಾಹವನ್ನುಕುಗ್ಗಿಸಿಕೊಳ್ಳದೇ ಹಿಂದೂ ಕುಟುಂಬಗಳು ಆಚರಿಸುವ ಸಂಭ್ರಮದಲ್ಲಿವೆ. ಈ ಬಾರಿ ಗೌರಿ ಗಣೇಶ ಹಬ್ಬ ಒಂದೇ ದಿನ ಬಂದ ಹಿನ್ನೆಲೆಯಲ್ಲಿ ದಿನಸಿ, ಹೂವು, ಹಣ್ಣಿನ ಮಾರುಕಟ್ಟೆ ಹೆಚ್ಚಿನ ಜನ ನಿಬಿಡತೆಯಿಂದ ಕೂಡಿದೆ.
ಗೌರಿ ಮತ್ತು ಗಣೇಶ ಹಬ್ಬದ ಸಂದರ್ಭ ದಲ್ಲಿ ಮಣ್ಣಿನ ವಿಗ್ರಹಗಳನ್ನು ತಂದು ಪೂಜಿಸು ವುದು ಹಲವು ಕುಟುಂಬ ಹಾಗೂ ಸಾರ್ವಜನಿಕವಾಗಿ ನಡೆಯುತ್ತಿದೆ. ವಿಗ್ರಹವನ್ನು ತಯಾರಿಸಿ ಒಂದಷ್ಟು ಸಂಪಾದಿಸಿಕೊಳ್ಳುತ್ತಿದ್ದ ಬಡಕಲಾವಿದರ ಬದುಕು ಕಳೆದ ಕೊರೋನಾ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ಬಾರಿ ಬರದ ನಡುವೆ ವಿಗ್ರಹ ಮಾರಾಟ ವಾಗುವುದೋ ಇಲ್ಲವೋ ಎಂಬ ಆತಂಕ ಅವರನ್ನು ಕಾಡಿದೆ. ವಿಗ್ರಹ ತಯಾರಿಸಲು ಸೂಕ್ತವಾದ ಮಣ್ಣನ್ನು ದೂರದೂರಿನಿಂದ ತಂದು ಹದಗೊಳಿಸಿ ,ವಿಗ್ರಹಗಳನ್ನು ತಯಾರಿಸಿ, ಬಣ್ಣ ಸಿಂಪಡಿಸಿ ಅಂತಿಮ ರೂಪ ಕೊಡುವ ಅಲ್ಲದೆ ಮಾರಾಟದ ನಿರ್ವಹಣೆ ಮಾಡಿ, ಸಹಾಯಕರಿಗೆ ಸಂಬಳ ನೀಡಿ ಕೊನೆಗೆ ಉಳಿಯುವ ಅಲ್ಪಸ್ವಲ್ಪ ಮೊತ್ತದಿಂದ ಸಂತೃಪ್ತಿ ಪಡಬೇಕಾಗಿದೆ. ತಯಾರಿಸಿದ ವಿಗ್ರಹ ಮಾರಾಟವಾಗದೇ ಉಳಿದರೆ ಲಾಭಾಂಶ ವೆಲ್ಲಾ ಕೈಬಿಟ್ಟಂತೆ ಎನ್ನುತ್ತಾರೆ ಗಣಪತಿ ವಿಗ್ರಹದ ತಯಾರಕರು.

ಈ ಹಿನ್ನೆಲೆಯಲ್ಲಿ ಇಲ್ಲಿನ ಕಲಾವಿದ ಶ್ರೀನಿವಾಸ ತನ್ನ ಕುಟುಂಬಸ್ಥರ ಮತ್ತು ಸ್ನೇಹಿತರ ನೆರವು ಪಡೆದು ವಿವಿಧ ಆಕಾರ, ಶೈಲಿ, ಎತ್ತರ ಮತ್ತು ಅಲಂಕಾರ ಸಹಿತವಾದ ಮೂರ್ತಿಗಳನ್ನು ನಿರ್ಮಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇವರು ಈ ಕಲಾ ಕಾರ್ಯವನ್ನು ಸುಮಾರು 27 ವರ್ಷ ಗಳಿಂದ ಮಾಡುತ್ತಿದ್ದು ವರ್ಷದಿಂದ ವರ್ಷಕ್ಕೆ ಇವರು ನಿರ್ಮಿಸಿದ ಗಣೇಶ ಮೂರ್ತಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಕೊರೋನಾ ಹಿನ್ನೆಲೆಯಲ್ಲಿ ದೊಡ್ಡ ವಿಗ್ರಹಗಳಿಗೆ ಬೇಡಿಕೆ ಪ್ರಮಾಣ ಬೆರಳೆಣಿಕೆಯಷ್ಟಾಗಿದೆ. ಪ್ರಸ್ತುತ ವರ್ಷ ಸುಮಾರು 60 ಕ್ಕೂ ಅಧಿಕ ವಿಗ್ರಹಗಳನ್ನು ನಿರ್ಮಿಸಿದ್ದಾರೆ. 

ವಿಗ್ರಹ ತಯಾರಿಸಿ, ಮಾರಾಟ ಮಾಡಿ ಹಣಗಳಿಸುವುದಕ್ಕಿಂತ ನಾವು ನಿರ್ಮಿಸಿದ ಗಣೇಶಮೂರ್ತಿಗೆ ಜನರು ಪೂಜೆ ಸಲ್ಲಿಸುವುದನ್ನು ಕಂಡಾಗ ನಮ್ಮ ಆರ್ಥಿಕ ತೊಂದರೆಗಳು ಗಣನೆಗೆ ಬರುವುದಿಲ್ಲ. ಕಲೆಯನ್ನು ಉಳಿಸಿ ಬೆಳೆಸುವುದೇ ಕಲಾವಿದರ ಮೊದಲ ಆದ್ಯತೆ. ಭಕ್ತಿ-ಭಾವನೆ ಪ್ರಧಾನವಾದುದು.

-ಶ್ರೀನಿವಾಸ್ , ಕಲಾವಿದ, ಆನಂದಪುರ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು