ಭದ್ರಾವತಿ: ಗ್ರಾಮಾಂತರ ಭಾಗದಲ್ಲಿ ಮಹಿಳೆಯೋರ್ವಳ ಕೊಲೆ ನಡೆದಿದೆ. ಜೊತೆಗಿದ್ದವನೆ ಕುತ್ತಿಗೆ ಹಿಸುಕಿ ಹಾಗೂ ಹೊಟ್ಟೆಗೆ ಬಲವಾಗಿ ಒದ್ದು ಮಹಿಳೆಯ ಕೊಲೆ ಮಾಡಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಸಂಕ್ಲಿಪುರದಲ್ಲಿ ಎಂ.ಪಿ.ಎಂ.ನ ನೀಲಗಿರಿ ಮರಗಳ ಕಟ್ ಮಾಡುವ ಕೆಲಸಕ್ಕೆ ಬಂದಿದ್ದ ರೂಪ(30), ಸಿಂಗಾರಿ(35) ಎಂಬಾತನೊಂದಿಗೆ ಕಳೆದ ಎರಡು ವರ್ಷದಿಂದ ಜೊತೆಯಲ್ಲೇ ವಾಸವಾಗಿದ್ದರು.
ನಿನ್ನೆ ಸಂಜೆ ಮೇಸ್ತ್ರಿಯಿಂದ ಸಂಬಳ ಪಡೆದು, ಇಬ್ಬರು ಮದ್ಯ ಸೇವಿಸಿ ಪರಸ್ಪರ ಗಲಾಟೆಗೆ ಬಿದ್ದಿದ್ದಾರೆ. ಗಲಾಟೆಯಿಂದಾಗಿ ಸಿಂಗಾರಿ ರೂಪಳ ಕುತ್ತಿಗೆ ಹಿಸುಕಿ ಹಾಗೂ ಕಾಲಿನಲ್ಲಿ ಒದ್ದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ರೂಪಳಿಗೂ ಗಂಡನಿರಲಿಲ್ಲ ಸಿಂಗಾರಿಗೂ ಪತ್ನಿ ಇರಲಿಲ್ಲ. ಇಬ್ಬರೂ ಸಹ ಒಟ್ಟಿಗೆ ವಾಸವಾಗಿದ್ದರು. ರೂಪ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ನಿವಾಸಿ ಎಂದು ತಿಳಿದು ಬಂದಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರುದಾಖಲಾಗಿದೆ. ಆರೋಪಿ ಸಿಂಗಾರಿಯನ್ನ ಬಂಧಿಸಲಾಗಿದೆ.