ವಿಕ್ರಮ್ ಲ್ಯಾಂಡರ್ ಪಾತ್ರ ಬಹುಮುಖ್ಯ: ಅನಿಲ್‌ಕುಮಾ‌ರ್

ವಿಜಯ ಸಂಘರ್ಷ
ಭದ್ರಾವತಿ: ಚಂದ್ರಯಾನ-3 ಅದ್ಭುತ ಸಾಧನೆಯಾಗಿದ್ದು, ಅದರಲ್ಲೂ ಯೋಜನೆ ಯಲ್ಲಿ ವಿಕ್ರಮ್ ಲ್ಯಾಂಡರ್‌ಪಾತ್ರ ಬಹು ಮುಖ್ಯವಾಗಿದೆ ಎಂದು ಬೆಂಗಳೂರು ಇಸ್ರೋ ಚಂದ್ರಯಾನ-3, ವಿಕ್ರಮ್ ಲ್ಯಾಂಡ‌ ಉಪ ಯೋಜನಾ ನಿರ್ದೇಶಕ ಹಿನ್ನೆಲೆ ಕೆ.ಅನಿಲ್‌ಕುಮಾರ್‌ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಶಾಖೆ ವತಿಯಿಂದ ನಗರದ ಹೊಸ ಸೇತುವೆ ರಸ್ತೆಯ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಚಂದ್ರಯಾನ-3 ಸಾಧನೆ ಮತ್ತು ಮಹತ್ವ ಕಾರ್ಯಕ್ರಮದಲ್ಲಿ ಅಭಿ ನಂದನೆ ಸ್ವೀಕರಿಸಿ ಮಾತನಾಡಿದರು.

ಭೂಮಿಯಿಂದ ಯಾವುದೇ ಗ್ರಹದ ಕಕ್ಷೆಗೆ ಉಪಗ್ರಹ ಸೇರಿಸಲು, ಕಾರ್ಯಾ ಚರಣೆ ಮಾಡಲು ಲ್ಯಾಂಡರ್‌ಪಾತ್ರ ಬಹಳ ಮುಖ್ಯವಾಗಿರುತ್ತದೆ. ಭೂಮಿ ಗುರುತ್ವಾ ಕರ್ಷಣೆ, ಭೂಮಿಯಿಂದ ಇತರೇ ಗ್ರಹಗಳ ದೂರ, ವಿಸ್ತೀರ್ಣ, ಗುಣ- ಲಕ್ಷಣಗಳನ್ನು ಸರಿಯಾಗಿ ಅಭ್ಯಸಿಸಿ ಲ್ಯಾಂಡರ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಚಂದ್ರ ಲ್ಯಾಂಡರ್‌ಕಾರ್ಯವೈಖರಿ ಅದ್ಭುತವಾಗಿದೆ ಎಂದರು.

ಈ ಶಿವಮೊಗ್ಗದ ಖಗೋಳ ತಜ್ಞ
ಡಾ. ಶೇಖರ್‌ಗೌಳೇ‌ ಮಾತನಾಡಿ, ಜ್ಞಾನ ಮತ್ತು ಧರ್ಮ ಎರಡೂ ಬೇರೆ ಬೇರೆ. ಧರ್ಮ ಆಚರಣೆ ಅವರವರ ವೈಯಕ್ತಿಕ ಅವಲಂಬಿಸಿದೆ. ಮಕ್ಕಳು ವಿಜ್ಞಾನ-ಧರ್ಮ ಎರಡನ್ನು ಹೊಂದಾಣಿಕೆ ಮಾಡಿ ನೋಡಬಾರದು ಎಂದರು.

ವೇದಿಕೆ ಅಧ್ಯಕ್ಷೆ ಎಂ.ಎಸ್‌. ಸುಧಾಮಣಿ ಮಾತನಾಡಿದರು. ಉದ್ಯಮಿ ಬಿ.ಕೆ. ಜಗನ್ನಾಥ್. ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಬಿಇಒ ನಾಗೇಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಎಂ.ಆರ್. ರೇವಣಪ್ಪ ಇನ್ನಿತರರು ಉಪಸ್ಥಿತರಿದ್ದರು.

ವಿದ್ಯಾ ಸಂಸ್ಥೆ ಸಂಸ್ಥಾಪಕ, ಕಾರ್ಯಾಧ್ಯಕ್ಷ ಬಿ.ಎಲ್.ರಂಗಸ್ವಾಮಿ ಅಧ್ಯಕ್ಷತೆ ವಹಿಸಿ ದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ವೇದಿಕೆ ಪ್ರಮುಖರು, ಶಿಕಕರು, ವಿದ್ಯಾರ್ಥಿಗಳು ಇದ್ದರು. ಉಮಾಪತಿ ಸ್ವಾಗತಿಸಿ, ಕಾಂತಪ್ಪ ಮತ್ತು ಶಿಕ್ಷಕ ಎ.ತಿಪ್ಪೇಸ್ವಾಮಿ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು