ವಿಜಯ ಸಂಘರ್ಷ
ಭದ್ರಾವತಿ: ನಗರದ ಜನ್ನಾಪುರ ಕೆರೆಯ 60 ಎಕರೆ ವಿಸ್ತೀರ್ಣದಲ್ಲಿ ಕೆರೆಯ ಜಾಗ ಪ್ರಭಾವಿಗಳು ಒತ್ತುವರಿ ಮಾಡಿ ತೋಟ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದು ಸಂಬಂಧಿತ ಅಧಿಕಾರಿಗಳು ಒತ್ತುವರಿ ಜಮೀನನ್ನು ತೆರವುಗೊಳಿಸದೆ ಬಡ ರೈತರ ಜಮೀನನ್ನು ತೆರೆವುಗೊಳಿಸಿರುವುದು ಖಂಡನೀಯ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ಆರೋಪಿಸಿದ್ದಾರೆ.
ನಗರಸಭೆಯ ಅಧಿಕಾರಿಗಳು 22 ಎಕರೆಗೂ ಹೆಚ್ಚು ಒತ್ತುವರಿಯದ ಜಮೀನು ತೆರವಿಗೆ ಮುಂದಾಗದೆ ಯಾವುದೇ ಮುನ್ಸೂಚನೆ ನೀಡದೆ ಬಡ ರೈತನ ಒಂದು ಎಕರೆಯಲ್ಲಿದ್ದ ಸುಮಾರು 60 ತೆಂಗಿನ ಮರಗಳನ್ನು ಕಡಿದು ಹಾಕಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಪ್ರಭಾವಿ ವ್ಯಕ್ತಿಗಳ ಒತ್ತುವರಿ ಜಮೀನನ್ನು ತೆರವುಗೊಳಿಸದೆ ಕೆರೆ ಜಾಗ ಒತ್ತುವರಿ ಯಾಗಿರುವುದು 20 ಎಕರೆಗೂ ಹೆಚ್ಚು ಜಾಗ ಆದರೆ ನಗರಸಭೆಯವರು ಧ್ವಂಸ ಮಾಡಿರುವುದು ಬಡ ರೈತರ ಜಮೀನ ಒಂದು ಎಕರೆ ಮಾತ್ರ ತೆರೆವುಗೊಳಿಸಿರು ವುದು ಸ್ಥಳೀಯ ನಾಗರಿಕರಲ್ಲಿ ನಗರಸಭೆಯ ಅಧಿಕಾರಿಗಳ ಮೇಲೆ ಅನುಮಾನ ವ್ಯಕ್ತಪಡಿಸುವಂತಾಗಿದೆ ಎಂದರು.
ಪ್ರಭಾವಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿಯದೆ ಒತ್ತುವರಿಯಾಗಿರುವ ಎಲ್ಲಾ ಜಮೀನನ್ನು ಏಕಕಾಲಕ್ಕೆ ತೆರವು ಮಾಡಬೇಕೆಂದು ನಗರಸಭೆ ಆಯುಕ್ತರಲ್ಲಿ ಒತ್ತಾಯಿಸಿದ್ದಾರೆ.
Tags:
ಭದ್ರಾವತಿ ಶಶಿಕುಮಾರ್